30 ವರ್ಷಗಳ ಬಳಿಕ ಮತ್ತೆ ಶನಿಯ ಕೃಪಾವೃಷ್ಟಿ, ಕೇಂದ್ರ ತ್ರಿಕೋನ ರಾಜಯೋಗದಿಂದ ಈ ಜನರ ಮನೆಗೆ ಶ್ರೀಹರಿ-ಲಕ್ಷ್ಮಿಯ ಆಗಮನ!
ವೃಷಭ ರಾಶಿ- ಈ ಕೇಂದ್ರ ತ್ರಿಕೋನ ರಾಜಯೋಗ ವೃಷಭ ರಾಶಿಯ ಜಾತಕದವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಇದರಿಂದ ವೃಷಭ ರಾಶಿಯವರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ, ಈ ರಾಶಿಯವರಿಗೆ ಈ ಯೋಗವು ತುಂಬಾ ಮಂಗಳಕರವಾಗಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ನೀವು ಮುಕ್ತರಾಗುವಿರಿ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಧನಲಾಭದ ಎಲ್ಲಾ ಸಾಧ್ಯತೆಗಳು ಕೂಡ ಇವೆ.
ಸಿಂಹ ರಾಶಿ- ಸಿಂಹ ರಾಶಿಯವರಿಗೆ ಈ ಯೋಗವು ಕುಟುಂಬ ಮತ್ತು ಸಂಗಾತಿಯ ಉತ್ತಮ ಬೆಂಬಲವನ್ನು ತರಲಿದೆ, ಈ ಜನರು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅವರ ಗೌರವವು ಹೆಚ್ಚಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲೂ ಯಶಸ್ಸು ಸಿಗಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳು ಕೂಡ ಗೋಚರಿಸುತ್ತಿವೆ.
ಕುಂಭ ರಾಶಿ- ಕುಂಭ ರಾಶಿಯವರಿಗೆ ಈ ಯೋಗವು ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ ಮತ್ತು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದರೊಂದಿಗೆ ವೈವಾಹಿಕ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳು ದೂರಾಗಿ ಸಂಗಾತಿಯ ಕಡೆಗೆ ಆಕರ್ಷಣೆ ಹೆಚ್ಚಾಗಲಿದೆ.
ಯಾವುದೇ ಜಾತಕದಲ್ಲಿ 3, 4, 7 ಮತ್ತು 10 ತ್ರಿಕೋನ ಮನೆಗಳಂತೆ, 1, 5 ಮತ್ತು 9 ರಲ್ಲಿರುವ ಗ್ರಹಗಳು ಪರಸ್ಪರ ಸಂಯೋಗವನ್ನು ರಚಿಸಿದರೆ ಮತ್ತು ರಾಶಿಯಲ್ಲಿ ಬದಲಾವಣೆ ಕಂಡುಬಂದರೆ, ಆ ಜಾತಕದಲ್ಲಿ ಕೇಂದ್ರ ಜಾತಕದಲ್ಲಿ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ, ತಾಯಿ ಲಕ್ಷ್ಮಿಯನ್ನು ತ್ರಿಕೋನ ಮನೆಯ ದೇವತೆ ಎಂದು ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇನ್ನೊಂದೆಡೆ ವಿಷ್ಣುವನ್ನು ಕೇಂದ್ರ ಸ್ಥಾನದ ಅಧಿಪತಿ ಎಂದು ಪೂಜಿಸಲಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)