ವರ್ಷ 2024ರ ಆರಂಭದಲ್ಲೇ 3 ರಾಶಿಗಳ ಜನರ ಅದೃಷ್ಟವನ್ನೇ ಬೆಳಗಲಿದ್ದಾನೆ ಸೂರ್ಯ, ಲಕ್ಷ್ಮಿ ನಾರಾಯಣ ಕೃಪೆಯಿಂದ ಸಿಗಲಿದೆ ಅಪಾರ ಧನಸಂಪತ್ತು!
Ravi Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಧನು ರಾಶಿ ಗೋಚರ ನೆರವೇರಲಿದೆ. ಇದರಿಂದ ವರ್ಷ 2024ರ ಆರಂಭದಲ್ಲಿಯೇ ಹಲವು ರಾಶಿಗಳ ಜನರಿಗೆ ಅಪಾರ ಸಿರಿ ಸಂಪತ್ತು, ಸ್ಥಾನಮಾನ, ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. (Spiritual News In Kannada)
ಮೇಷ ರಾಶಿ: ಮೇಷ ರಾಶಿಗೆ ಮಂಗಳ ಅಧಿಪತಿ, ಮಂಗಳ ಸೂರ್ಯನ ಮಿತ್ರ ರಾಶಿಯಾಗಿದೆ. ಅಷ್ಟೇ ಅಲ್ಲ ಸೂರ್ಯ ನಿಮ್ಮ ಗೋಚರ ಜಾತಕದ ಭಾಗ್ಯ ಹಾಗೂ ವಿದೇಶ ಸ್ಥಾನದಲ್ಲಿ ಸಂಚಾರ ನಡೆಸಲಿದ್ದಾನೆ. ಈ ಆಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಕೆಲಸದ ನಿಮಿತ್ತ ದೇಶ-ವಿದೇಶಗಳಿಗೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಹಲವು ಯೋಜನೆಗಳು ಕೈಗೂಡಲಿವೆ. ಆಸೆಆಕಾಂಕ್ಷೆಗಳು ಈಡೇರಲಿವೆ. ಪರಿಶ್ರಮದ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಹೊಸ ನೌಕರಿಯ ಪ್ರಸ್ತಾಪ ಕೂಡ ಸಿಗಲಿದೆ. ಸೂರ್ಯ ನಿಮ್ಮ ಗೋಚರ ಜಾತಕದ ಪಂಚಮ ಭಾವಕ್ಕೆ ಅಧಿಪತಿಯಾದ ಕಾರಣ ಮಕ್ಕಳ ಉನ್ನತಿಯ ಯೋಗವಿದೆ. ಸರ್ಕಾರಿ ನೌಕರರಿಗೆ ಉತ್ತಮ ಲಾಭ ಸಿಗಲಿದೆ.
ವೃಶ್ಚಿಕ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಜಾತಕದ ಧನಭಾವದಲ್ಲಿ ಸಂಚರಿಸಲಿರುವ ಕಾರಣ ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ. ನಿಮ್ಮ ಜಾತಕಕ್ಕೆ ಅಧಿಪತಿ ಮಂಗಳನಾಗಿದ್ದು, ಮಂಗಳ ಹಾಗೂ ಸೂರ್ಯನ ನಡುವೆ ಕೂಡ ಸ್ನೇಹಭಾವದ ಸಂಬಂಧವಿದೆ. ಈ ಅವಧಿಯಲ್ಲಿ ನೀವು ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ಹೆಚ್ಚಳವನ್ನು ಗಮನಿಸುವಿರಿ. ಬಿಸ್ನೆಸ್ ನಲ್ಲಿ ಅತ್ಯುತ್ತಮ ಲಾಭ ನಿಮ್ಮದಾಗಲಿದೆ. ನಿಮ್ಮ ಮಾತಿನಲ್ಲಿ ಪ್ರಖರತೆ ಇರಲಿದೆ. ಸೂರ್ಯ ನಿಮ್ಮ ಜಾತಕದ ಕರ್ಮ ಭಾವಕ್ಕೆ ಅಧಿಪತಿಯಾಗಿರುವ ಕಾರಣ ನೌಕರ ವರ್ಗದ ಜನರಿಗೆ 2024 ರಲ್ಲಿ ಪ್ರಮೋಷನ್, ಕೇಳಿದ ಕಡೆ ವರ್ಗಾವಣೆ ಭಾಗ್ಯ ಸಿಗಲಿದೆ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಸಿಗಲಿದೆ.
ಸಿಂಹ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದು, ಆತ ನಿಮ್ಮ ರಾಶಿಯ ರಾಷ್ಯಾಧಿಪ ಕೂಡ ಹೌದು. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಮಕ್ಕಳ ಉನ್ನತಿಯನ್ನು ಗಮನಿಸುವಿರಿ. ನೌಕರಿ-ವಿವಾಹ ಭಾಗ್ಯ ಪ್ರಾಪ್ತಿಯಾಗಿ ಆಕಸ್ಮಿಕ ಧನಲಾಭ ಕೂಡ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ದೊರೆತು, ಪ್ರೇಮ ವಿವಾಹ ರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಮಕ್ಕಳ ಕನಸು ಕಾಣುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದ್ದು, ಹನಗಳಿಕೆಯ ಸಾಕಷ್ಟು ಅವಕಾಶಗಳು ನಿಮಗೆ ಒದಗಿಬರಲಿವೆ. ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)