ನಿರಂತರ ಕುಸಿಯುತ್ತಿರುವ ಚಿನ್ನದ ಬೆಲೆ ! ಈ ಕಾರಣದಿಂದಾಗಿ ಇನ್ನು ಏರಿಕೆ ಕಾಣದು ಬಂಗಾರದ ದರ ! ಮತ್ತೆ ಮರುಕಳಿಸುವುದೇ ಹಿಂದಿನ ದಿನ ?
ಚಿನ್ನದ ಬೆಲೆ ಗಗನಕ್ಕೇರಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. 82 ಸಾವಿರದ ಗಡಿ ದಾಟಿದ್ದ ಬಂಗಾರ ಖರೀದಿ ಇನ್ನು ಕೇವಲ ಕನಸು ಎನ್ನುವ ಹಾಗೆ ಆಗಿತ್ತು.
ಆದರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ ಕಾಣುತ್ತಿದೆ. ಅದು ಕೂಡಾ ಭಾರೀ ಮಟ್ಟದ ಕುಸಿತ ಬಂಗಾರದ ಬೆಲೆಯಲ್ಲಿ ಕಂಡು ಬರುತ್ತಿದೆ. ದೀಪಾವಳಿ ನಂತರ ಬಂಗಾರದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ.
ಅಮೆರಿಕದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದ ಹಾಗೆ ಚಿನ್ನದ ಮಾರುಕಟ್ಟೆಯಲ್ಲಿ ಕೂಡಾ ವ್ಯತ್ಯಾಸ ಕಂಡು ಬಂದಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಕ್ಷಣದಿಂದಲೇ ಹಳದಿ ಲೋಹದ ಬೆಲೆ ಕುಸಿಯಲಾರಂಭಿಸಿತು.
ಅಮೆರಿಕ ಚುನಾವಣೆ ನಂತರ ಚಿನ್ನದ ಬೆಲೆಯ ಇಳಿಕೆಯಾಗುವುದರ ಹಿಂದೆ ಮುಖ್ಯ ಕಾರಣ ಇದೆ. ಷೇರು ಮಾರುಕಟ್ಟೆಯಲ್ಲಿನ ಲಾಭಗಳು ಹೆಚ್ಚಾದಂತೆ, ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಚಿನ್ನದಿಂದ ಈಕ್ವಿಟಿ ಮಾರುಕಟ್ಟೆಗಳಿಗೆ ಬದಲಾಯಿಸುತ್ತಾರೆ.
ಇದೀಗ ಡಾಲರ್ ಭಾರೀ ಪ್ರಮಾಣದಲ್ಲಿ ಬಲಗೊಂಡಿದೆ. ಈ ಪರಿಣಾಮವು ಚಿನ್ನದ ಮೇಲೆಯೂ ಕಂಡುಬರುತ್ತದೆ. ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಚಿನ್ನದಿಂದ ಹಿಂತೆಗೆದುಕೊಳ್ಳುತ್ತಿದ್ದು, US ಬಾಂಡ್‌ಗಳು ಮತ್ತು ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.ಹೂಡಿಕೆದಾರರು US ಖಜಾನೆ ಬಾಂಡ್‌ಗಳನ್ನು ಖರೀದಿಸುವತ್ತ ಮನಸ್ಸು ಮಾಡುತ್ತಿದ್ದಾರೆ.
ಏಕೆಂದರೆ US ಸರ್ಕಾರವು ಇವುಗಳ ಮೇಲೆ ಬಡ್ಡಿಯನ್ನು ಖಾತರಿಪಡಿಸುತ್ತದೆ. ಈ ಕಾರಣಕ್ಕಾಗಿಯೇ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವ ಚಿನ್ನದಿಂದ ದೂರವಿಟ್ಟು ಇತರ ಹೂಡಿಕೆ ಸಾಧನಗಳಿಗೆ ವರ್ಗಾಯಿಸುತ್ತಿದ್ದಾರೆ. ಇದರಿಂದ ದಿನೇ ದಿನೇ ಚಿನ್ನದ ಬೆಲೆ ಇಳಿಕೆಯತ್ತ ಸಾಗುತ್ತಿದೆ
ಇದೇ ರೀತಿ ಮುಂದುವರಿದರೆ ಶೀಘ್ರದಲ್ಲೇ ಚಿನ್ನದ ಬೆಲೆ 70,000ದಿಂದ 65 ಸಾವಿರಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಮುಂದೆ ಚಿನ್ನಾಭರಣ ಕೇವಲ ಗಗನ ಕುಸುಮ ಎಂದುಕೊಂಡಿದ್ದವರು ಇದೀಗ ನಿಟ್ಟಿಸಿರು ಬಿಡುವಂತಾಗಿದೆ. ಬೆಲೆ ಕಡಿಮೆಯಾದಾಗ ಮಾತ್ರ ಆಭರಣಗಳನ್ನು ಖರೀದಿಸುವುದು ಲಾಭದಾಯಕ.