Relationship Tips: ನೀವು ಮದುವೆಯಾಗದಿದ್ದರೆ ಏನೆಲ್ಲ ತೊಂದರೆಗಳು ಆಗುತ್ತೆ ಗೊತ್ತಾ..?
ಒಂದು ವಯಸ್ಸಿನ ನಂತರ ನಿಮ್ಮ ಜೀವನದ ಸಂತೋಷದ ದಿನಗಳು ಅಥವಾ ಬೇಸರದ ಕ್ಷಣಗಳನ್ನು ಹಂಚಿಕೊಳ್ಳಲು ಒಂದು ಜೀವ ಮನೆಯಲ್ಲಿ ಇರುವುದಿಲ್ಲ. ಹೊರಗಡೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ, ಮನೆಯಲ್ಲಿ ಅಡುಗೆ ಮಾಡಿದ್ದೇನೆ ಅಂತಾ ಹೇಳಲು ಹೆಂಡತಿ ಇರುವುದಿಲ್ಲ.
ಶಾಲೆಯಲ್ಲಿ ತಮ್ಮ ಮಗ ಅಥವಾ ಮಗಳ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು ಮೆಲುಕು ಹಾಕಲು ಆಗುವುದಿಲ್ಲ. ಆದರೆ ಮದುವೆಯಾಗದೆ ಮಕ್ಕಳನ್ನು ಪಡೆಯಬಹುದು ಎನ್ನುವ ವಾದಕ್ಕೆ ಈ ವಿಷಯ ಅನ್ವಯವಾಗುವುದಿಲ್ಲ.
ಕೇವಲ ವಿವಾಹಿತರಿಗೆ ಮಾತ್ರ ಇರುವ ಅವಕಾಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುನಿಸು ತೋರಿಸಲು ಮನೆಯಲ್ಲಿ ಯಾರೂ ಇರುವುದಿಲ್ಲ. ಅರ್ಥಪೂರ್ಣವಾಗಿ ಜೀವಿಸಬೇಕು ಅನ್ನುವ ಸ್ಫೂರ್ತಿ ಬಾರದೆ ಇರಬಹುದು.
ನಿನ್ನ ಮದುವೆ ಯಾವಾಗ ಎಂದು ಒಂದಷ್ಟು ವರ್ಷದವರೆಗೆ ಸ್ನೇಹಿತರಿಂದ ಸಂಬಂಧಿಕರಿಂದ ಬರುವ ಪ್ರಶ್ನೆಯನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಮದುವೆಯಾಗಿಲ್ಲ ಎನ್ನುವ ಬಗ್ಗೆ ಕಿರಿಕಿರಿ ಉಂಟು ಮಾಡುವಷ್ಟು ಕರುಣಾಮಯ ನೋಟದಿಂದ ತಪ್ಪಿಸಲು ಸಾಧ್ಯವಿಲ್ಲ.
ಅನಾರೋಗ್ಯವಾದರೆ ಸಂತೈಸಲು ಮಡದಿ ಅಥವಾ ಮಕ್ಕಳಿರುವುದಿಲ್ಲ. ಒಳ್ಳೆಯ ನೆರೆ ಹೊರೆಯವರು ಇಲ್ಲದಿದ್ದರೆ, ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರೆ ಸಾವಾದರೂ ಯಾರಿಗೂ ಬೇಗನೆ ತಿಳಿಯುವುದಿಲ್ಲ.