ಇಂಗ್ಲೆಂಡ್ ಪಂದ್ಯದಿಂದ ರೋಹಿತ್-ಕೊಹ್ಲಿ ರೂಲ್ಡೌಟ್! ಇನ್ಮುಂದೆ 30ರ ಹರೆಯದ ಈ ರಣಬೇಟೆಗಾರನೇ ಟೀಂ ಇಂಡಿಯಾದ ಕ್ಯಾಪ್ಟನ್
ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ವಿಜಯದ ಯಾತ್ರೆ ಮುಂದುವರೆಸಿದೆ. ಈಗಾಗಲೇ ಆಡಿರುವ 5 ಪಂದ್ಯಗಳಲ್ಲೂ ಭರ್ಜರಿ ಆಟದ ಮೂಲಕ ಸತತ ಗೆಲುವು ಸಾಧಿಸಿದೆ ಟೀಂ ಇಂಡಿಯಾ.
ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂದಿನ ಪಂದ್ಯ ಅಂದರೆ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಇಬ್ಬರು ಸ್ಟಾರ್ ಆಟಗಾರರಿಗೆ ಗಾಯಗಳಾಗಿಲ್ಲ. ಬದಲಾಗಿ ವಿಶ್ರಾಂತಿ ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು. ಈ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ವಿಜಯದ ನಗೆ ಬೀರಿತ್ತು. ಅಷ್ಟೇ ಅಲ್ಲದೆ, ಟೀಂ ಇಂಡಿಯಾ ಪಾಯಿಂಟ್ ಟೇಬಲ್’ನಲ್ಲಿ ಅಗ್ರಸ್ಥಾನದಲ್ಲಿದೆ.
ಸದ್ಯ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಒಂದು ವಾರ ವಿಶ್ರಾಂತಿ ಸಿಕ್ಕಿದೆ. ಇನ್ನು ಇಂಗ್ಲೆಂಡ್ ತಂಡ ಈ ಬಾರಿ ವಿಶ್ವಕಪ್’ನಲ್ಲಿ ಕಳಪೆ ಆಟ ಪ್ರದರ್ಶಿಸುತ್ತಿದೆ. ಹೀಗಾಗಿ ಮುಂದಿನ ಪಂದ್ಯ ಇದೇ ಇಂಗ್ಲೆಂಡ್ ವಿರುದ್ಧ ಇರುವ ಕಾರಣ ವಿರಾಟ್ ಹಾಗೂ ರೋಹಿತ್ ಜೊತೆಗೆ ಮತ್ತೊಬ್ಬ ಎ ಪ್ಲಸ್ ಆಟಗಾರನಿಗೆ ರೆಸ್ಟ್ ಕೊಡುವ ಸಾಧ್ಯತೆ ಇದೆ.
ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಆಗಮಿಸಿದರೆ, ರೋಹಿತ್ ಬದಲಿಗೆ ನಾಯಕನ ಜವಾಬ್ದಾರಿಯನ್ನು ಹಾರ್ದಿಕ್ ಹೊರಲಿದ್ದಾರೆ.