ಈ ಸೊಪ್ಪನ್ನು ಅರೆದು ಹಣೆಗೆ ಹಚ್ಚಿದರೆ ತಿಂಗಳುಗಟ್ಟಲೆ ಕಡಿಮೆಯಾಗದ ಶೀತ, ಕೆಮ್ಮಿಗೆ ಒಂದೇ ನಿಮಿಷದಲ್ಲಿ ಪರಿಹಾರ ಸಿಗುತ್ತದೆ! ತಲೆನೋವಿಗೂ ಇದೇ ಮದ್ದು

Tue, 01 Oct 2024-2:43 pm,

ಇತ್ತೀಚಿನ ದಿನಗಳಲ್ಲಿ ಜ್ವರ, ಶೀತ ಮತ್ತು ಕೆಮ್ಮು ಅನೇಕರನ್ನು ಬಾಧಿಸುತ್ತಿದೆ. ಈ ಸಮಸ್ಯೆಯನ್ನು ತೊಡೆದುಹಾಕಲು ಎಷ್ಟೇ ಮದ್ದು ಮಾಡಿದರೂ ಕಡಿಮೆಯಾಗುವುದಿಲ್ಲ. ಹೀಗಿರುವಾಗ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.

 

ಅಜ್ವೈನ್, ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಲೆ ಎಂದು ಕರೆಯಲ್ಪಡುವ ಈ ಎಲೆಗಳ ಮನೆಮದ್ದು ಶೀತ ಕೆಮ್ಮಿಗೆ ಉಪಯುಕ್ತವಾಗಿದೆ. ಇದಕ್ಕಾಗಿ ಒಂದೆರಡು ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ಅದನ್ನು ಎದೆ ಮತ್ತು ಹಣೆಯ ಭಾಗಕ್ಕೆ ಇಡಬೇಕು. ಹೀಗೆ ಮಾಡಿದರೆ ಅದರ ವಿಶೇಷ ಅನುಭವದಿಂದ ಶೀತ ಇಳಿಯುತ್ತದೆ.

 

ಈ ವಿಧಾನವಲ್ಲದೆ, 10 ಅಥವಾ 12 ಸಾಂಬ್ರಾಣಿ ಎಲೆಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ. ಈ ಕಷಾಯ ಕೆಮ್ಮು ಮತ್ತು ಶೀತಕ್ಕೆ ಹೇಳಿಮಾಡಿಸಿದ ಮದ್ದು. ನೆನಪಿನಲ್ಲಿಡಿ, ನೀರು ಅದರ ಮೂಲ ಪ್ರಮಾಣದಲ್ಲಿ ಸುಮಾರು ಮೂರು-ನಾಲ್ಕು ಭಾಗದಷ್ಟು ಕಡಿಮೆಯಾಗುವವರೆಗೆ ಅದನ್ನು ಕುದಿಸಬೇಕು.

 

ಸಾಂಬ್ರಾಣಿ ಎಲೆಯನ್ನು ಓರೆಗಾನೊ ಎಂಬ ಸಸ್ಯ ಮೂಲದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಇದನ್ನು 'ಇಂಡಿಯನ್ ಬೋರೇಜ್' ಎಂದೂ ಸಹ ಕರೆಯುತ್ತಾರೆ.

 

ಈ ಸಾಂಬ್ರಾಣಿ ಎಲೆಗಳಲ್ಲಿ ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಆಯುರ್ವೇದದಲ್ಲಿಯೂ ಸಹ, ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ.

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link