Saturn Combust 2024: ಮೂವತ್ತೆಂಟು ದಿನ ಕುಂಭ ರಾಶಿಯಲ್ಲಿ ಶನಿ ಅಸ್ತ, ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ, ಸಕಲ ಕಾರ್ಯಸಿದ್ಧಿ ಪ್ರಾಪ್ತಿ!
ಶನಿ ಅಸ್ತನಾಗುವ ಕಾರಣ ಹಲವು ರಾಶಿಗಳ ಜನರಿಗೆ ಲಾಭ ಸಿಗಲಿದೆ. ಇನ್ನೊಂದೆಡೆ ಕೆಲ ರಾಶಿಗಳ ಪಾಲಿಗೆ ಶನಿಯ ಈ ಭಾವ ಸಂಕಷ್ಟಗಳನ್ನು ತಂದೊಡ್ಡಲಿದೆ. ಹಾಗಾದರೆ ಶನಿ ಅಸ್ತನಾಗುವ ಕಾರಣ ಯಾವ ರಾಶಿಗಳ ಜನರಿಗೆ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಅಷ್ಟಮ ಹಾಗೂ ನವಮ ಭಾವಕ್ಕೆ ಶನಿ ಅಧಿಪತಿಯಾಗಿದ್ದಾನೆ ಮತ್ತು ಆತ ನವಮ ಭಾವದಲ್ಲಿಯೇ ಅಸ್ತನಾಗುತ್ತಿದ್ದಾನೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ದೂರದ ಪ್ರಯಾಣ ಜರುಗುವ ಸಾಧ್ಯತೆ ಇದೆ. ವಿದೇಶದಲ್ಲಿ ನಿಮ್ಮ ಬಿಸ್ನೆಸ್ ಇದ್ದರೆ, ನಿಮಗೆ ಅಪಾರ ಯಶಸ್ಸಿನ ಜೊತೆಗೆ ಅಪಾರ ಹಣಗಳಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ. ಇದಲ್ಲದೆ ಒಂದು ವೇಳೆ ನೀವು ಹಣ ಹೂಡಿಕೆಗೆ ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ನಿಮಗೆ ಉತ್ತಮ ರೀಟರ್ನ್ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಕೂಡ ದುಪ್ಪಟ್ಟು ಲಾಭ ನಿಮ್ಮದಾಗಲಿದೆ. ಶನಿಯ ವಿಶೇಷ ಕೃಪೆಯಿಂದ ನಿಮ್ಮ ಜೀವನದಲ್ಲಿ ಆದಾಯದ ಹಲವು ಮಾರ್ಗಗಳು ತೆರೆದುಕೊಳ್ಳಲಿವೆ. ಸಾಕಷ್ಟು ಪರಿಶ್ರಮದಿಂದ ನೀವು ಅಪಾರ ಹಣ ಗಳಿಕೆ ಮತ್ತು ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕರ್ಕ ರಾಶಿ: ನಿಮ್ಮ ಜಾತಕದ ಸಪ್ತಮ ಹಾಗೂ ಅಷ್ಟಮ ಭಾವಕ್ಕೆ ಶನಿ ಅಧಿಪತಿಯಾಗಿ, ಅಷ್ಟಮ ಭಾವದಲ್ಲಿಯೇ ಅಸ್ತನಾಗುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನೌಕರಿ ಬದಲಾವಣೆಯ ಛಾನ್ಸ್ ಸಿಗಲಿದೆ. ಆತ್ಮವಿಶ್ವಾಸ ಅಪಾರ ಹೆಚ್ಚಾಗಳಿದ್ದು, ಇದರಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಿರಿ. ದೀರ್ಘಾವಧಿಯಿಂದ ನಿಂತುಹೋದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು, ಅಪ್ರತ್ಯಕ್ಷ ರೂಪದಲ್ಲಿ ನಿಮಗೆ ಭಾರಿ ಧನಲಾಭ ಉಂಟಾಗಲಿದೆ. ವ್ಯಾಪಾರದಲ್ಲಿಯೂ ಕೂಡ ಅಧಿಕ ಲಾಭ ಇರಲಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ನಿಮಗೆ ಲಾಭ ತರುವ ನಿರೀಕ್ಷೆ ಇದೆ.
ಸಿಂಹ ರಾಶಿ: ಶನಿ ನಿಮ್ಮ ಗೋಚರ ಜಾತಕದ ಶಷ್ಟಮ ಹಾಗೂ ಸಪ್ತಮ ಭಾವಕ್ಕೆ ಅಧಿಪತಿಯಾಗಿ, ಸಪ್ತಮ ಭಾವದಲ್ಲಿ ಅಸ್ತನಾಗಲಿದ್ದಾನೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಸಾಕಷ್ಟು ಸಂತುಷ್ಟಿ ಇರಲಿದೆ. ಇದಲ್ಲದೆ ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ವ್ಯಾಪಾರದ ಕುರಿತು ಹೇಳುವುದಾದರೆ ನೀವು ನಿಮ್ಮ ಬುದ್ಧಿಯ ಬಲದಿಂದ ದೊಡ್ಡ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಅಧಿಕ ಲಾಭದ ಜೊತೆಗೆ ಅಪಾರ ಹಣ ಗಳಿಕೆ ಮಾಡುವಲ್ಲಿ ನೀವು ಯಃಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)