Coffee With Ghee: ತುಪ್ಪದ ಕಾಫಿಯಲ್ಲಿದೆ ಆರೋಗ್ಯದ ಗುಟ್ಟು, ತೂಕ ಇಳಿಕೆಯಿಂದ ಕೀಲು ನೋವಿನವರೆಗೂ ನೀಡುತ್ತೇ ಪರಿಹಾರ!
ಸಾಮಾನ್ಯವಾಗಿ ಎಲ್ಲರೂ ತಲೆನೋವಿದ್ದಾಗ, ಒತ್ತಡ ಹೆಚ್ಚಾದಾಗ ಕಾಫಿ ಕುಡಿಯುತ್ತಾರೆ. ಆದರೆ, ಎಂದದಾರೂ ಕಾಫಿಯಲ್ಲಿ ತುಪ್ಪ ಬೆರೆಸಿ ಕುಡಿದಿದ್ದೀರಾ? ಇದರಿಂದ ಆರೋಗ್ಯಕ್ಕಿದೆ 5 ಪ್ರಮುಖ ಪ್ರಯೋಜನ...
ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿನ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.
ಒಮೆಗಾ-3 ಕೊಬ್ಬಿನಾಮ್ಲಗಳು ದೇಸೀ ತುಪ್ಪದಲ್ಲಿ ಹೆರಳವಾಗಿದ್ದು ಇದು ಆರೋಗ್ಯಕರ ತೂಕ ಇಳಿಕೆ ಹಾಗೂ ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೂಕ ಇಳಿಕೆಗೆ ಬ್ಲಾಕ್ ಕಾಫಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ನಿತ್ಯ ಒಂದು ಗ್ಲಾಸ್ 'ತುಪ್ಪದ ಕಾಫಿ' ಕುಡಿಯುವುದರಿಂದ ದೇಹದಲ್ಲಿ ನಿರಂತರ ಶಕ್ತಿ ಬಿಡುಗಡೆಯಾಗಿ ಅತಿಯಾಗಿ ತಿನ್ನುವ ಕಡುಬಯಕೆ ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ತೂಕ ಇಳಿಸಬಹುದು.
ಕಾಫಿಯಲ್ಲಿರುವ ಕೆಫಿನ್, ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬಿನ ಸಂಯೋಜನೆ ತುಪ್ಪದ ಕಾಫಿಯಲ್ಲಿದ್ದು ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಪರಿಣಾಮಕಾರಿ ಆಗಿದೆ.
ತುಪ್ಪದಲ್ಲಿ ವಿಟಮಿನ್ ಎ, ಇ ಇದ್ದು ಕಾಫಿಯೊಂದಿಗೆ ಇದು ಬೆರೆತಾದ ದೇಹದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುಪ್ಪಟ್ಟಾಗುತ್ತದೆ.
ತುಪ್ಪದಲ್ಲಿರುವ ಬ್ಯುಟರಿಕ್ ಆಂಳವು ಕರುಳಿನ ಒಳಪದರವನ್ನು ಪೋಷಿಸಿ ಜೀರ್ಣಕ್ರೀಯನ್ನು ಸುಧಾರಿಸುತ್ತದೆ. ಹಾಗಾಗಿ ತುಪ್ಪದ ಕಾಫಿ ಆರೋಗ್ಯಕರ ಎನ್ನಲಾಗುತ್ತದೆ.
ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಇರುವಂತೆ, ತುಪ್ಪದಲ್ಲಿ ಉರಿಯೂತದ ಲಕ್ಷಣಗಳಿರುತ್ತವೆ. ಇವೆರೆಡನ್ನೂ ಒಟ್ಟಿಗೆ ಬೆರೆಸಿ ಕೂಡಿದಾಗ ಸಂಧಿವಾತ, ಕೀಲು ನೋವಿನಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.