Shani Sade Sati: ಈ ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಾರಂಭ, ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾನೆ ಶನಿ ಮಹಾತ್ಮ
ನವಗ್ರಹಗಳಲ್ಲಿ ಅತಿ ನಿಧಾನವಾಗಿ ಚಲಿಸುವ ಗ್ರಹವಾದ ಶನಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 2023 ರ ಆರಂಭದಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಮಾರ್ಚ್ 29, 2025 ರಂದು ಮತ್ತೆ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.
ಶನಿ ರಾಶಿ ಪರಿವರ್ತನೆಯೊಂದಿಗೆ ಕೆಲವು ರಾಶಿಯವರು ಶನಿಯ ಸಾಡೇ ಸಾತಿ ಪ್ರಭಾವದಿಂದ ಮುಕ್ತಿ ಪಡೆದರೆ, ಇನ್ನೂ ಕೆಲವು ರಾಶಿಯವರಿಗೆ ಸಾಡೇ ಸಾತಿ ಆರಂಭವಾಗಲಿದೆ.
ಶನಿ ಸಾಡೇ ಸಾತಿ ಸಮಯದಲ್ಲಿ ಶನಿ ಮಹಾತ್ಮನು ವ್ಯಕ್ತಿಯ ಆರ್ಥಿಕ, ದೈಹಿಕ, ಮಾನಸಿಕ, ಕೌಟುಂಬಿಕ ಮತ್ತು ವೃತ್ತಿ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಸಂಕಷ್ಟವನ್ನು ನೀಡಲಿದ್ದಾನೆ.
ಸದ್ಯ ಮಕರ, ಕುಂಭ, ಮೀನ ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಭಾವ ನಡೆಯುತ್ತಿದೆ. 2025ರಲ್ಲಿ ಮೀನ ರಾಶಿಗೆ ಶನಿ ರಾಶಿ ಬದಲಾವಣೆ ಬಳಿಕ ಮಕರ ರಾಶಿಯವರಿಗೆ ಶನಿಯ ಸಾಡೇ ಸತಿಯಿಂದ ಪರಿಹಾರ ದೊರೆಯುತ್ತದೆ. ಅದೇ ಸಮಯದಲ್ಲಿ, 2025 ರಿಂದ, ಕುಂಭ ಮತ್ತು ಮೀನರಾಶಿಗಳೊಂದಿಗೆ ಮೇಷ ರಾಶಿಯವರಿಗೆ ಸಾಡೇ ಸಾತಿ ಪ್ರಭಾವ ಆರಂಭವಾಗಲಿದೆ.
2025ರ ಮಾರ್ಚ್ ತಿಂಗಳಿನಲ್ಲಿ ಮೇಷ ರಾಶಿಯ ಜನರಿಗೆ ಶನಿ ಸಾಡೇ ಸಾತಿ ಪ್ರಭಾವದ ಸಮಯದಲ್ಲಿ ಹಣಕಾಸಿನ ಸ್ಥಿತಿ ಕ್ಷೀಣಿಸುತ್ತದೆ. ವ್ಯಾಪಾರಸ್ಥರಿಗೆ ಭಾರಿ ನಷ್ಟ ಸಾಧ್ಯತೆ ಇದೆ. ದೈಹಿಕ ಸಮಸ್ಯೆಗಳು ಅದರಲ್ಲೂ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬೇಕಾಗಬಹುದು.
ಕುಂಭ ರಾಶಿಯ ಜನರಿಗೆ ಶನಿ ಸಾಡೇ ಸಾತಿಯ ಕೊನೆಯ ಹಂತ ಆರಂಭವಾಗಲಿದ್ದು, ಈ ವೇಳೆ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಈ ಸಂದರ್ಭದಲ್ಲಿ ಉದ್ಯೋಗಸ್ಥರಿಗೆ ಸಮಸ್ಯೆಗಳು ಉಲ್ಬಣಿಸಬಹುದು. ನಿಮ್ಮ ಕಠಿಣ ಪರಿಶ್ರಮದ ಫಲ ದೊರೆಯದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು.
ಮೀನ ರಾಶಿಯ ಜನರಿಗೆ ಶನಿ ಸಾಡೇ ಸಾತಿ ಎರಡನೇ ಹಂತ ಆರಂಭವಾಗಲಿದ್ದು, ಈ ಸಮಯವು ಬಹಳ ನೋವಿನಿಂದ ಕೂಡಿರಲಿದೆ. ಸಂಪತ್ತು, ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ತೊಂದಸ್ರೆಗಳನ್ನು ಅನುಭವಿಸುವಿರಿ. ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆಯಿಂದಾಗಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.