ತನ್ನ ದೃಷ್ಟಿ ಯಿಂದಲೇ ಈ ಮೂರು ರಾಶಿಯವರನ್ನು ಹರಸುತ್ತಾನೆ ಶನಿದೇವ ! ಕೇಳಿದ್ದೆಲ್ಲವನ್ನೂ ಕರುಣಿಸುತ್ತಾನೆ ಕಾಕಧ್ವಜ

Thu, 13 Apr 2023-4:31 pm,

ಈ ಸಮಯದಲ್ಲಿ ಶನಿಯು ಕುಂಭ ರಾಶಿಯಲ್ಲಿದೆ. ಇದರೊಂದಿಗೆ ಏಪ್ರಿಲ್ 11, ರಿಂದ, ಶನಿಯ ದಶಮ ದೃಷ್ಟಿಯು ಕುಂಭದಿಂದ ವೃಶ್ಚಿಕ ರಾಶಿಯ ಮೇಲೆ ಬೀಳುತ್ತಿದೆ. ಶನಿಯ ದಶಮ ದೃಷ್ಟಿಯು 3 ರಾಶಿಗಳ ಜನರ ಮೇಲೆ ಬಹಳ ಶುಭ ಪರಿಣಾಮವನ್ನು ಬೀರಲಿದೆ. ಶನಿಯ ದೃಷ್ಟಿಯ ಕಾರಣದಿಂದಲೇ ಈ ರಾಶಿಯವರು ಬೇಕಾಗಿದ್ದನ್ನೆಲ್ಲಾ ಪಡೆಯುತ್ತಾರೆ.  

ವೃಷಭ ರಾಶಿ : ಶನಿಯ ದಶಮ ದೃಷ್ಟಿಯು ವೃಷಭ ರಾಶಿಯ ಕರ್ಮದ  ಮನೆಯ ಮೇಲೆ ಬೀಳುತ್ತಿದೆ. ಇದರಿಂದಾಗಿ ಈ ರಾಶಿಯವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಪಡೆಯುತ್ತಾರೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ವ್ಯಾಪಾರದಲ್ಲಿ ಲಾಭವಾಗುವುದು. ಸೃಜನಶೀಲತೆ ಹೆಚ್ಚುತ್ತಲೇ ಇರುತ್ತದೆ.  ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.   

ಸಿಂಹ ರಾಶಿ- ಸಿಂಹ ರಾಶಿಯವರಿಗೆ ಕೂಡಾ ಶನಿಯ ದಶಮ ದೃಷ್ಟಿಯ ಲಾಭ ಸಿಗಲಿದೆ. ಸವಾಲುಗಳು ನಿಮ್ಮ ಜೀವನದಲ್ಲಿ ಬರುತ್ತವೆ. ಆದರೆ ಆ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಜಯ ಗಳಿಸುತ್ತೀರಿ. ವ್ಯಾಪಾರಸ್ಥರಿಗೆ ವಿಶೇಷ ಲಾಭ ದೊರೆಯಲಿದೆ. ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೂ ಲಾಭವಾಗಲಿದೆ.   

ಕುಂಭ ರಾಶಿ - ಕುಂಭ ರಾಶಿಯವರಿಗೆ ಶನಿಯ  ದಶಮ ದೃಷ್ಟಿಯು ತುಂಬಾ ಶುಭಕರವಾಗಿರುತ್ತದೆ.  ಈ ರಾಶಿಯವರ ಜಾತಕದಲ್ಲಿ ಎರಡನೇ ಹಂತದ ಶನಿಯ ಸಾಡೇ ಸತಿ ನಡೆಯುತ್ತಿದೆ. ಆದರೂ ಈ ರಾಶಿಯವರಿಗೆ ಕಷ್ಟ ನೀಡುವುದಿಲ್ಲ ಶನಿ ಮಹಾತ್ಮ. ಉದ್ಯೋಗ ಹುಡುಕಾಟ ಪೂರ್ಣಗೊಳ್ಳಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link