Shravan 2022: ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಈ 4 ಸಂಗತಿಗಳು ಕಾಣಿಸುವುದು ಅತ್ಯಂತ ಶುಭಕರ, ಯಾವುದರ ಸಂಕೇತ ಇಲ್ಲಿ ತಿಳಿದುಕೊಳ್ಳಿ
ನಂದಿ -ಧಾರ್ಮಿಕ ನಂಬಿಕೆಯ ಪ್ರಕಾರ, ನಂದಿಯನ್ನು ಶಿವನ ವಾಹನ ಎಂದು ಪರಿಗಣಿಸಲಾಗುತ್ತದೆ. ಸಾವನ ಮಾಸದಲ್ಲಿ ಕನಸಿನಲ್ಲಿ ಗೂಳಿ ಕಂಡರೆ, ಶಿವನ ಕೃಪಾಕಟಾಕ್ಷ ನಿಮ್ಮ ಮೇಲಿದೆ ಎಂದರ್ಥ. ಕನಸಿನಲ್ಲಿ ನಂದಿಯನ್ನು ನೋಡುವುದು ನೀವು ಪ್ರತಿ ಕಾರ್ಯದಲ್ಲಿ ಯಶಸ್ವಿಯಾಗುವ ಸಂಕೇತ ಎನ್ನಲಾಗುತ್ತದೆ.
ತ್ರಿಶೂಲ - ತ್ರಿಶೂಲವನ್ನು ರಜ, ತಮ ಮತ್ತು ಸತ್ ಗುಣಗಳ ಸಂಕೇತವೆಂದು ಪರಿಗಣಿಸಲಾಗಿದೆ. ಇವೆಲ್ಲವುಗಳನ್ನು ಸೇರಿ ಶಿವನ ತ್ರಿಶೂಲ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಶಿವನ ತ್ರಿಶೂಲದ ಮೂರು ಅಂಚುಗಳು ಕಾಮ, ಕ್ರೋಧ ಮತ್ತು ಲೋಭಗಳ ಕಾರಕ ಎಂದು ಭಾವಿಸಲಾಗುತ್ತದೆ. ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು ನಿಮ್ಮ ಎಲ್ಲಾ ಸಂಕಷ್ಟಗಳ ನಾಶ ಎಂಬುದರ ಸಂಕೇತವಾಗಿದೆ.
ಡಮರುಗ - ಶಿವನು ಯಾವಾಗಲೂ ತನ್ನ ಕೈಯಲ್ಲಿ ಡಮರುವನ್ನು ಹಿಡಿದಿರುತ್ತಾನೆ. ಡಮರುಗ ಸ್ಥಿರತೆಯ ಸಂಕೇತವಾಗಿದೆ. ಕನಸಿನಲ್ಲಿ ಶಿವನ ಡಮರುಗ ಕಂಡರೆ ಬದುಕಿನ ಸಂಕ್ಷೋಭೆ ಅಂತ್ಯವಾಗಲಿದೆ ಎಂದರ್ಥ. ಕನಸಿನಲ್ಲಿ ಡಮರುಗ ಕಾಣಿಸುವುದು ಜೀವನದಲ್ಲಿ ಸ್ಥಿರತೆಯ ಸಂಕೇತವಾಗಿದೆ.
ಹಾವು - ಶಿವನು ತನ್ನ ಕೊರಳಿನಲ್ಲಿ ವಾಸುಕಿ ನಾಗರ ಹಾವನ್ನು ಕೊರಳಲ್ಲಿ ಧರಿಸಿದ್ದಾನೆ. ಶ್ರಾವಣ ಮಾಸದಲ್ಲಿ ಕನಸಿನಲ್ಲಿ ನಾಗದೇವತೆ ಬರುವುದು ಸಂಪತ್ತನ್ನು ಹೆಚ್ಚಿಸುವ ಸಂಕೇತವೆಂದು ಪರಿಗಣಿಸಲಾಗಿದೆ.