ಹಾವು ಕಚ್ಚಿದ ಕೂಡಲೇ ಇದನ್ನು ತಿಂದರೆ ದೇಹಕ್ಕೆ ವಿಷ ಹರಡೋದಿಲ್ಲ! ಈ ದಿವ್ಯೌಷಧಿ ಪ್ರತೀ ಮನೆಯಲ್ಲೂ ಇರುತ್ತದೆ

Mon, 30 Dec 2024-2:53 pm,

ಭಾರತದಲ್ಲಿ ಪ್ರತಿ ವರ್ಷ 58000 ಜನರು ಹಾವು ಕಡಿತದಿಂದ ಸಾಯುತ್ತಿದ್ದಾರೆ ಎಂದು ಅಧಿಕೃತ ಅಂಕಿಅಂಶವೊಂದು ಬಹಿರಂಗಪಡಿಸಿದೆ. ಆದರೆ, ವಾಸ್ತವಿಕ ಅಂಕಿ ಅಂಶ ಇದಕ್ಕಿಂತ ಹಲವು ಪಟ್ಟು ಹೆಚ್ಚಿದೆ ಎನ್ನುತ್ತಾರೆ ತಜ್ಞರು. ಮಳೆಗಾಲದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚಾಗುತ್ತವೆ. 80 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲೇ ಸಂಭವಿಸುತ್ತಿದೆ.

ಬಿಬಿಸಿ ಅರ್ಥ್ ಪ್ರಕಾರ, ಭಾರತದಲ್ಲಿ ಕನಿಷ್ಠ 300 ಜಾತಿಯ ಹಾವುಗಳು ಕಂಡುಬರುತ್ತವೆ. ಅವುಗಳಲ್ಲಿ 60 ಜಾತಿಗಳು ವಿಷಪೂರಿತವಾಗಿವೆ. ರಸ್ಸೆಲ್ಸ್ ವೈಪರ್, ಸಾ ಸ್ಕೇಲ್ಡ್ ವೈಪರ್, ಇಂಡಿಯನ್ ಕೋಬ್ರಾ ಮತ್ತು ಕಾಮನ್ ಕ್ರೈಟ್ ಅನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಪ್ರಾಣಿಗಳಲ್ಲಿ ಹಾವು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಪ್ರಾಣಿ. ನಗರೀಕರಣವು ಹಾವುಗಳ ಆವಾಸಸ್ಥಾನವನ್ನು ಬದಲಾಯಿಸಿದೆ. ಈಗ ಅವು ಕಾಡುಗಳಿಂದ ಹೊರಬಂದು ನಗರಗಳನ್ನು ತಲುಪಲು ಪ್ರಾರಂಭಿಸಿವೆ. ಹಾವಿನ ಹೆಸರು ಕೇಳಿದ ತಕ್ಷಣ ಭಯವಾಗೋದು ಸಾಮಾನ್ಯ.

 

ವಿಷಪೂರಿತ ಹಾವಿನ ಕಡಿತವು ಕಚ್ಚಿದ ಸ್ಥಳದಲ್ಲಿ ನೋವು, ಊತ, ಸೆಳೆತ, ವಾಕರಿಕೆ, ವಾಂತಿ, ನಡುಕ, ಅಲರ್ಜಿಗಳು, ಕಣ್ಣು ಮಂಜಾಗುವುದು ಹೀಗೆ ಅನೇಕ ಲಕ್ಷಣಗಳನ್ನುಂಟು ಮಾಡಬಹುದು. ಚರ್ಮದ ಬಣ್ಣದಲ್ಲಿ ಬದಲಾವಣೆ, ಅತಿಸಾರ, ಜ್ವರ, ಹೊಟ್ಟೆ ನೋವು, ತಲೆನೋವು, ವಾಕರಿಕೆ, ಸ್ನಾಯು ದೌರ್ಬಲ್ಯ, ಬಾಯಾರಿಕೆ, ಕಡಿಮೆ ರಕ್ತದೊತ್ತಡ, ಗಾಯಗಳಿಂದ ರಕ್ತಸ್ರಾವ, ಅತಿಯಾದ ಬೆವರುವಿಕೆ ಮತ್ತು ದೇಹದ ಭಾಗಗಳ ಊತ ಕೂಡ ಕಾಣಿಸಿಕೊಳ್ಳಬಹುದು.

 

ಹಾವು ಕಚ್ಚಿದ್ರೆ ಅದಕ್ಕೆ ತಕ್ಷಣ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಅದು ಪ್ರಾಣವನ್ನೇ ಕಿತ್ತುಕೊಳ್ಳಬಹುದು. ಇನ್ನು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು? ಮಾಡಬಾರದು? ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

 

ಹಾವು ಕಚ್ಚಿದರೆ, ವಿಷವು ದೇಹದಲ್ಲಿ ಹರಡದಂತೆ ಆ ವ್ಯಕ್ತಿಗೆ ಸ್ವಲ್ಪ ಹೆಚ್ಚು ತುಪ್ಪವನ್ನು ತಿನ್ನಿಸಿ ವಾಂತಿ ಮಾಡುವಂತೆ ಮಾಡಿ.  ಇದರ ಹೊರತಾಗಿ 10-15 ಬಾರಿ ಉಗುರುಬೆಚ್ಚನೆಯ ನೀರನ್ನು ಕುಡಿಯುವಂತೆ ಮಾಡಿ ವಾಂತಿ ಮಾಡಲು ಹೇಳಿ. ಇದರಿಂದ ಹಾವಿನ ವಿಷದ ಪರಿಣಾಮ ಕಡಿಮೆಯಾಗುತ್ತದೆ.

 

ಇದಲ್ಲದಿದ್ದರೆ ಮಾಡಹಾಗಲ ತರಕಾರಿ ಇದ್ದರೆ ಅದನ್ನು ರುಬ್ಬಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಿ. ಇದು ವಿಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನ ಅಪಾಯವೂ ಇರುವುದಿಲ್ಲ. ಇದಲ್ಲದಿದ್ದರೆ ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಬಾಧಿತ ಜಾಗಕ್ಕೆ ಹಚ್ಚಬಹುದು.

 

ಹಾವು ಕಚ್ಚಿದ ಸಂದರ್ಭದಲ್ಲಿ, ಸ್ಥಿತಿ ಹದಗೆಡುವವರೆಗೆ ಕಾಯಬೇಡಿ. ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ. ಇನ್ನು ಹಾವು ಕಚ್ಚಿದ ಸ್ಥಳವನ್ನು ಮುಟ್ಟಬೇಡಿ. ಆ ವ್ಯಕ್ತಿಯನ್ನು ಶಾಂತವಾಗಿ ಇರುವಂತೆ ಮಾಡಿ. ಇನ್ನು ಹಾವು ಕಚ್ಚಿದ ಸಮಯದ ಮೇಲೆ ನಿಗಾ ಇರಿಸಿ.

 

ಸೂಚನೆ: ಇಲ್ಲಿ ನೀಡಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ. ಯಾವುದೇ ವೈದ್ಯರು ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಯಂತೆ ಇವುಗಳನ್ನು ತೆಗೆದುಕೊಳ್ಳಬೇಡಿ. ಅನಾರೋಗ್ಯ ಅಥವಾ ಸೋಂಕಿನ ಲಕ್ಷಣಗಳ ಸಂದರ್ಭದಲ್ಲಿ, ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link