ಸೂರ್ಯಗ್ರಹಣದ ದಿನ, ಸಮಯ ಮತ್ತು ಸೂತಕದ ಅವಧಿ.. ಏನು ಮಾಡಬೇಕು ಏನು ಮಾಡಬಾರದು ಸಂಪೂರ್ಣ ಮಾಹಿತಿ
2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ ಕೊನೆಯ ದಿನದಂದು ಸಂಭವಿಸಲಿದೆ. 30 ಏಪ್ರಿಲ್ 2022 ರಂದು, ಭಾರತದ ಸಮಯದ ಪ್ರಕಾರ, ಮಧ್ಯರಾತ್ರಿ 12:15 ರಿಂದ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 4:7 ರವರೆಗೆ ಇರುತ್ತದೆ. ಏಪ್ರಿಲ್ ತಿಂಗಳ ಕೊನೆಯ ದಿನಾಂಕವು ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಈ ದಿನ ಶನಿವಾರ ಮತ್ತು ಅಮವಾಸ್ಯೆ ಅಂದರೆ ಶನಿಶ್ಚರಿ ಅಮಾವಾಸ್ಯೆ ಕೂಡ ಇದೆ. ಏಪ್ರಿಲ್ 29 ರಂದು, ಗ್ರಹಣದ ಒಂದು ದಿನದ ಮೊದಲು, ಶನಿ ದೇವನು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಸೂರ್ಯಗ್ರಹಣದ ಮಹತ್ವವು ಹೆಚ್ಚು ವಿಶೇಷವಾಗುತ್ತದೆ.
ಭಾರತೀಯ ಕಾಲಮಾನದ ಪ್ರಕಾರ, ಸೂರ್ಯಗ್ರಹಣವು ಮಧ್ಯರಾತ್ರಿಯ ನಂತರ 12.15 ರಿಂದ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 4:7 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗುವುದಿಲ್ಲ. ಮತ್ತೊಂದೆಡೆ, ನಾವು ಜ್ಯೋತಿಷ್ಯದ ಬಗ್ಗೆ ಮಾತನಾಡಿದರೆ, ಸೂತಕ ಅವಧಿಯು ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಸೂತಕ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.
ಇದು 2022 ರ ಮೊದಲ ಸೂರ್ಯಗ್ರಹಣವಾಗಿದ್ದು, ಇದು ಭಾಗಶಃ ಗ್ರಹಣವಾಗಿದೆ. ಇದು ಭಾರತದಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಈ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾದ ನೈಋತ್ಯ ಭಾಗ, ಅಟ್ಲಾಂಟಿಕ್, ಅಂಟಾರ್ಟಿಕಾ ಮತ್ತು ಪೆಸಿಫಿಕ್ ಸಾಗರದಲ್ಲಿ ಗೋಚರಿಸುತ್ತದೆ.
ಸೂರ್ಯಗ್ರಹಣವು ರಾತ್ರಿಯಲ್ಲಿ ಸಂಭವಿಸುತ್ತದೆ, ಆದ್ದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸೂರ್ಯಗ್ರಹಣದ ಮೊದಲು ತುಳಸಿ ಎಲೆಗಳನ್ನು ಆಹಾರದಲ್ಲಿ ಹಾಕಿಡಿ.. ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಅವಧಿಯಲ್ಲಿ ನಿಮ್ಮ ಇಷ್ಟ ದೇವತಾ ಮಂತ್ರಗಳನ್ನು ಪಠಿಸುವುದು ಮಂಗಳಕರವಾಗಿರುತ್ತದೆ. ಇದರ ಹೊರತಾಗಿ ಗರ್ಭಿಣಿಯರು ಮನೆಯಿಂದ ಹೊರಬರಬಾರದು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಚೂಪಾದ ಅಂಚಿರುವ ಉಪಕರಣಗಳನ್ನು ಬಳಸಬಾರದು. ಗ್ರಹಣದ ಸಮಯದಲ್ಲಿ ಪೂಜೆ ಮಾಡಬೇಡಿ.
ಸೂರ್ಯಗ್ರಹಣ ಮುಗಿದ ನಂತರ ಇಡೀ ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಗಂಗಾಜಲ ಮಿಶ್ರಿತ ನೀರಿನಿಂದ ಸ್ನಾನ ಮಾಡಬೇಕು. ಸ್ನಾನ ಮಾಡಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ನಕಾರಾತ್ಮಕತೆಯನ್ನು ತೆಗೆದುಹಾಕಲು, ಮನೆಯನ್ನು ಉಪ್ಪು ಮಿಶ್ರಿತ ನೀರಿನಿಂದ ಒರೆಸಬೇಕು. ಗ್ರಹಣದ ನಂತರ, ತಾಜಾ ಆಹಾರವನ್ನು ತಯಾರಿಸಿ ತಿನ್ನಬೇಕು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)