Surya Gochar 2024: ಸೂರ್ಯ ಸಂಚಾರದಿಂದ ಬೆಳಗಲಿದೆ ಈ ರಾಶಿಯವರ ಭಾಗ್ಯ, ತಿಂಗಳೆಲ್ಲಾ ಅದೃಷ್ಟ

Fri, 05 Apr 2024-6:35 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವನನ್ನು ಆತ್ಮಕಾರಕ ಎಂದು ನಂಬಲಾಗಿದೆ. ಏಪ್ರಿಲ್ 13 ರಂದು ರಾತ್ರಿ 09:40 ಕ್ಕೆ ಸೂರ್ಯ ತನ್ನ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಯಾವುದೇ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಉನ್ನತ ಸ್ಥಾನದಲ್ಲಿದ್ದಾರೆ ಆ ವ್ಯಕ್ತಿ ಜೀವನದಲ್ಲಿ ಪ್ರತಿ ಕ್ಷೇತ್ರದಲ್ಲೂ ಅಪಾರ ಯಶಸ್ಸನ್ನು ಸಾಧಿಸುತ್ತಾನೆ ಎಂಬ ನಂಬಿಕೆಯಿದೆ. ಪ್ರಸ್ತುತ ಮೀನ ರಾಶಿಯಲ್ಲಿರುವ ಸೂರ್ಯ ಏಪ್ರಿಲ್ 13ರಂದು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯ ಜನರ ಮೇಲೆ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದು ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. 

ಸೂರ್ಯ ರಾಶಿ ಪರಿವರ್ತನೆಯು ಮೇಷ ರಾಶಿಯ ಜನರಿಗೆ ವಿಶೇಷ ಪ್ರಯೋಜನವನ್ನು ತರಲಿದೆ. ಈ ಅವಧಿಯಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಕಾಣಬಹುದು. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯ. 

ಸೂರ್ಯ ಸಂಚಾರವು ಮಿಥುನ ರಾಶಿಯ ಜನರಿಗೆ ವೃತ್ತಿ ಜೀವನದಲ್ಲಿ ಪ್ರಗತಿಗೆ ಕಾರಣವಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯಾ. ಹೂಡಿಕೆಗಳಿಂದ ಉತ್ತಮ ಲಾಭ. ಆರ್ಥಿಕ ಒಳಹರಿವು ಹೆಚ್ಚಾಗಲಿದ್ದು ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ ತಿಂಗಳಿನಲ್ಲಿ ಸೂರ್ಯ ರಾಶಿ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಅದೃಷ್ಟದ ಸಂಪೂರ್ಯ ಬೆಂಬಲವನ್ನು ನೀಡಲಿದೆ. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ದೀರ್ಘ ಸಮಯದಿಂದ ಬೇರೆಡೆ ಸಿಲುಕಿದ್ದ ಹಣವೂ ನಿಮ್ಮ ಕೈ ಸೇರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link