ಸಹ ಆಟಗಾರನ ತಂಗಿಯ ಮೇಲೆಯೇ ಲವ್! ಎಚ್ಚರಿಸಿದ್ರೂ ಆಕೆಯನ್ನೇ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೀತ!

Sun, 16 Jun 2024-6:30 pm,

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆಯಿಲ್ಲ. ಒಂದೊಮ್ಮೆ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದ ರಿತಿಕಾ ಅವರನ್ನು ರೋಹಿತ್ ಪ್ರೀತಿಸಿ ಹೇಗೆ ವಿವಾಹವಾದರು ಎಂಬ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರೋಹಿತ್ ಪತ್ನಿ ರಿತಿಕಾ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದರು, ಈ ಮೂಲಕವೇ ಇವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು. ಆ ಭೇಟಿ ಪ್ರೀತಿಗೆ ತಿರುಗಿ, ಬಳಿಕ ಸುಮಾರು 6 ವರ್ಷಗಳ ಕಾಲ ರಿತಿಕಾ ಜೊತೆ ಡೇಟಿಂಗ್ ನಡೆಸಿದ್ದರು ರೋಹಿತ್.

ಬೊರಿವಲಿ ಸ್ಪೋರ್ಟ್ಸ್ ಕ್ಲಬ್‌’ಗೆ ಕರೆದೊಯ್ದು ಅಲ್ಲಿ ರಿತಿಕಾಗೆ ಪ್ರಪೋಸ್ ಮಾಡಿದ್ದರಂತೆ ರೋಹಿತ್.

2015 ರ ಐಪಿಎಲ್ ಋತುವಿನಲ್ಲಿ, ರೋಹಿತ್ ಶರ್ಮಾ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸಾಕಷ್ಟು ಚರ್ಚೆಯಾಗಿತ್ತು. ಇದಾದ ನಂತರವೇ ಇವರಿಬ್ಬರೂ ಒಟ್ಟಿಗೆ ತಿರುಗಾಡುವುದು ಕಂಡುಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ 2015 ರಂದು ರಿತಿಕಾ ಅವರನ್ನು ರೋಹಿತ್ ವಿವಾಹವಾದರು.

ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ರಾಖಿ ಸಹೋದರಿ. ಇವರ ಮೂಲಕವೇ ಮೊದಲ ಬಾರಿ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ರೋಹಿತ್’ಗೆ ಪ್ರೀತಿಯಾಗಿದ್ದರೂ ಸಹ ರಿತಿಕಾಗೆ ಇಷ್ಟವಾಗಿರಲಿಲ್ಲ. ಅಷ್ಟೇ ಅಲ್ಲದೆ, ಯುವಿ ಆಕೆಯನ್ನು ನೋಡಬೇಡ ಎಂದು ಎಚ್ಚರಿಕೆ ಕೂಡ ನೀಡಿದ್ದರಂತೆ.

ರೋಹಿತ್ ಶರ್ಮಾ ಪ್ರಸ್ತುತ ಎಲ್ಲಾ ಮೂರು ಮಾದರಿಗಳಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. ಸುಮಾರು 160 ಕೋಟಿ ರೂ.  ಆಸ್ತಿ ಹೊಂದಿರುವ ರೋಹಿತ್, 2015 ರಲ್ಲಿಯೇ ವರ್ಲಿಯಲ್ಲಿ 4 ಎಕರೆ ಫ್ಲಾಟ್ ಖರೀದಿಸಿದ್ದರು. ಇದರ ಅಂದಾಜು ಬೆಲೆ 30 ಕೋಟಿ ರೂ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link