Car Price Hike:ಕಾರು ಖರೀದಿ ಯೋಚನೆಯಿದ್ದರೆ ತಡ ಮಾಡಬೇಡಿ ಆಗಸ್ಟ್ ನಲ್ಲಿ ಏರಿಕೆಯಾಗಲಿದೆ ಕಾರು ಬೆಲೆ

Mon, 05 Jul 2021-5:26 pm,

ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ 2021 ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.  ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ನಲ್ಲಿ ರೆಗ್ಯುಲೇಟರಿ ಫೈಲ್ಲಿಂಗ್  ಸಂದರ್ಭದಲ್ಲಿ ಮಾರುತಿ ಸುಜುಕಿ ಈ ಮಾಹಿತಿಯನ್ನು ನೀಡಿತ್ತು

Honda Cars Indiaದ ಹಿರಿಯ ಅಧಿಕಾರಿಯೊಬ್ಬರು, ಕಚ್ಚಾ ವಸ್ತುಗಳ  ಬೆಲೆ ಹೆಚ್ಚಳದಿಂದಾಗಿ ಕಂಪನಿಯು ಈ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಕಾರುಗಳ ಉತ್ಪಾದನೆಯಲ್ಲಿ ಅನೇಕ ರೀತಿಯ ಕಚ್ಚಾ ವಸ್ತುಗಳು, ಅನೇಕ ಲೋಹಗಳನ್ನು ಬಳಸಲಾಗುತ್ತದೆ. ಆದರೆ, ಎಷ್ಟು ಬೆಲೆಗಳನ್ನು ಹೆಚ್ಚಿಸಲಾಗುವುದು ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ

ಹೋಂಡಾ ಕಾರ್ಸ್ ಇಂಡಿಯಾದ ಕಾರುಗಳ ಬೆಲೆಯನ್ನು ವಿವಿಧ ಮಾದರಿಗಳು ಮತ್ತು ರೂಪಾಂತರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕಂಪನಿಯು ಭಾರತದಲ್ಲಿ ಹೋಂಡಾ ಸಿಟಿ, ಹೋಂಡಾ ಅಮೇಜ್, ಹೋಂಡಾ BRV,ಹೋಂಡಾ WRV ಮತ್ತು ಹೋಂಡಾ CRV ಸೇರಿದಂತೆ ಬೇರೆ ಬೇರೆ ಮಾಡೆಲ್ ಗಳನ್ನೂ  ಮಾರಾಟ ಮಾಡುತ್ತದೆ. 

ಕಚ್ಚಾ ವಸ್ತುಗಳಾದ ಉಕ್ಕು, ಅಲ್ಯೂಮಿನಿಯಂ ಮತ್ತು ಲೋಹಗಳ ಬೆಲೆ ಹೆಚ್ಚಾಗಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ ರಾಜೇಶ್ ಗೋಯೆಲ್ ಹೇಳಿದ್ದಾರೆ. ಕೆಲವು ಸರಕುಗಳ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚದಲ್ಲೂ ಹೆಚ್ಚಳ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link