Engineers Day:ಎಂಜಿನಿಯರ್ ಪದವಿ ಪಡೆದಿದ್ದರೂ ಬಣ್ಣ ಹಚ್ಚುವ ಮೂಲಕ ಅದೃಷ್ಟ ಪರೀಕ್ಷಿಸಿದ ನಟ ನಟಿಯರಿವರು

Thu, 15 Sep 2022-3:54 pm,

ಚಿತ್ರನಟ ಸೋನು ಸೂದ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದಾರೆ. ಎಂಜಿನೀಯರ್ ಪದವಿ ಪಡೆದಿದ್ದರೂ ಸೋನು ಸೂದ್ ಬಾಲಿವುಡ್ ಪ್ರವೇಶಿಸಲು ನಿರ್ಧರಿಸಿದರು. ಇದಕ್ಕಾಗಿ ಮಾಡೆಲಿಂಗ್‌ನಲ್ಲಿಯೂ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದರು.  

ಚಿತ್ರನಟ ಕಾರ್ತಿಕ್ ಆರ್ಯನ್ ಕೂಡ ಇಂಜಿನಿಯರಿಂಗ್ ಓದಿದ್ದಾರೆ. ನಟ ಬಯೋಟೆಕ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಬಣ್ಣದ ಲೋಕದ ಮಾಯಾ ನಗರಿಯ ಕಡೆಗೆ ಹೆಜ್ಜೆ ಹಾಕಿದ್ದಾರೆ. 

ನಟಿ ತಾಪ್ಸಿ ಪನ್ನು ನವದೆಹಲಿಯ ಗುರು ತೇಜ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ನಂತರ ನಟಿ ಚಲನಚಿತ್ರಗಳತ್ತ ಮುಖ ಮಾಡಿದರು.  

ಚಿತ್ರನಟ ವಿಕ್ಕಿ ಕೌಶಲ್ ಕೂಡ ನಟನಾಗುವ ಮೊದಲು ಇಂಜಿನಿಯರ್ ಓದಿದ್ದರು. ನಟ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್‌ ನಲ್ಲಿ ಪದವಿ ಪಡೆದಿದ್ದಾರೆ. 

ನಟಿ ಕೃತಿ ಸನನ್ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿ ಪಡೆದಿದ್ದರು. ನೊಯ್ಡಾದ ಜೇಪೀ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಅಧ್ಯಯನವನ್ನು ಮುಗಿಸಿದ ನಂತರ ನಟಿ ನಟನಾ ಜಗತ್ತಿಗೆ ಪ್ರವೇಶಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link