Trigrahi Yog 2024: 50ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ, ಈ ರಾಶಿಯವರಿಗೆ ಬಂಪರ್

Fri, 02 Feb 2024-8:21 am,

ಶನಿ ಗೋಚಾರ:  ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಶನಿ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 

ಶುಕ್ರ ಮತ್ತು ಬುಧ:  ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ಶುಕ್ರ ಮತ್ತು ಬುಧ ಗ್ರಹಗಳು ಕೂಡ ಕುಂಭ ರಾಶಿಗೆ ಪ್ರವೇಶಿಸಲಿದ್ದಾರೆ. 

ಬುಧ, ಶನಿ, ಶುಕ್ರ ಯುತಿ:  ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಯಲ್ಲಿ ಶನಿ, ಬುಧ, ಶುಕ್ರ ಗ್ರಹಗಳ ಸಂಯೋಗವಾಗಲಿದೆ. ಗಮನಾರ್ಹವಾಗಿ ಬರೋಬ್ಬರಿ 50 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಬುಧ, ಶನಿ, ಶುಕ್ರ ಯುತಿಯಿಂದ ತ್ರಿಗ್ರಾಹಿ ಯೋಗ ಸಂಭವಿಸುತ್ತಿದೆ. 

ತ್ರಿಗ್ರಾಹಿ ಯೋಗದ ಧನಾತ್ಮಕ ಪರಿಣಾಮ :  ತ್ರಿಗ್ರಾಹಿ ಯೋಗದ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ರಚನೆಯಾಗುತ್ತಿರುವ ತ್ರಿಗ್ರಾಹಿ ಯೋಗವು  ಕೆಲವು ರಾಶಿ ಜನರ ಜೀವನದಲ್ಲಿ ಅದೃಷ್ಟವನ್ನು ಬೆಳಗಿಸಲಿದೆ. ಈ ತ್ರಿಗ್ರಾಹಿ ಯೋಗವು 3 ರಾಶಿಚಕ್ರ ಜನರ ಸಂಪತ್ತನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ವೃಷಭ ರಾಶಿ:   ತ್ರಿಗ್ರಾಹಿ ಯೋಗವು  ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಈ ಸಮಯದಲ್ಲಿ ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಭಾರೀ ಯಶಸ್ಸು, ಕೀರ್ತಿ ಪ್ರಾಪ್ತಿಯಾಗಲಿದೆ. ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗಲಿದೆ.  ವ್ಯವಹಾರದಲ್ಲಿ ನಿಮ್ಮ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವನ್ನು ನಿರೀಕ್ಷಿಸಬಹುದು. 

ಮಿಥುನ ರಾಶಿ:  ಕುಂಭ ರಾಶಿಯಲ್ಲಿ ನಿರ್ಮಾಣವಾಗಲಿರುವ ತ್ರಿಗ್ರಾಹಿ ಯೋಗವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ವೃತ್ತಿ ರಂಗದಲ್ಲಿ ಯಶಸ್ಸು ಕಾಣುವಿರಿ.  ದೂರದ ಪ್ರವಾಸಕ್ಕೆ ಹೋಗಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. 

ಕುಂಭ ರಾಶಿ:  ಸ್ವ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ತ್ರಿಗ್ರಾಹಿ ಯೋಗದಿಂದ ಕುಂಭ ರಾಶಿಯವರಿಗೆ ಲಾಭವಾಗಲಿದೆ. ಈ ಶುಭಕರ ಯೋಗದ ಪರಿಣಾಮವಾಗಿ ಕುಂಭ ರಾಶಿಯ ಜನರಲ್ಲಿ  ಆತ್ಮಸ್ಥೈರ್ಯ ಹೆಚ್ಚಾಗಲಿದೆ.  ವ್ಯಾಪಾರದಿಂದ ಲಾಭವಾಗಲಿದೆ. ಈ ವೇಳೆ ನೀವು ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link