ನೀವು ಚಹಾ ಪ್ರಿಯರೇ! ಬಲೂನ್`ನಂತಹ ಹೊಟ್ಟೆ ಕರಗಿಸಲು ಈ ನೈಸರ್ಗಿಕ ಟೀಗಳನ್ನು ಒಮ್ಮೆ ಟ್ರೈ ಮಾಡಿ..!
ಏನೇ ಮಾಡಿದ್ರೂ ತೂಕ ಇಳಿಯುತ್ತಿಲ್ಲವೇ. ಬಲೂನ್'ನಂತೆ ಊದಿರುವ ಹೊಟ್ಟೆ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆಯೇ.... ನೀವು ಚಹಾ ಪ್ರಿಯರಾಗಿದ್ದರೆ ಕೆಲವು ಟೀಗಳ ಸೇವನೆಯಿಂದ ತೂಕ ಇಳಿಸಿ, ಬೆಲ್ಲಿ ಫ್ಯಾಟ್ ಅನ್ನು ಕೂಡ ಕರಗಿಸಬಹುದು.
ಚಹಾ ತಯಾರಿಸಲು, ಆಗಾಗ್ಗೆ ಚಹಾ ಸೇವಿಸಲು ಇಚ್ಚಿಸುವರು ಸಾದಾ ಚಹಾ ಸೇವಿಸುವುದರ ಬದಲಿಗೆ ಅಡುಗೆ ಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ.
ಶುಂಠಿ ಟೀ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು, ಹಸಿವನ್ನು ನಿಗ್ರಹಿಸಲು ಸಹಕಾರಿ ಆಗಿದೆ. ಇದರಿಂದ ಸುಲಭವಾಗಿ ತೂಕ ಇಳಿಕೆಯಾಗುತ್ತದೆ.
ಅರಿಶಿನದಲ್ಲಿ ಕರ್ಕ್ಯುಮೀನ್ ಎಂಬ ಅಂಶವಿದ್ದು ಇದು ಸ್ಥೂಲಕಾಯತೆಯನ್ನು ನಿವಾರಿಸಲು ಪರಿಣಾಮಕಾರಿ ಪಾನೀಯವಾಗಿದೆ.
ಕಡಿಮೆ ಕ್ಯಾಲೋರಿ ಪಾನೀಯವಾಗಿರುವ ಪುದೀನ ಟೀ ಸೇವನೆಯು ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ತ್ವರಿತವಾಗಿ ಸುಡುವಲ್ಲಿಯೂ ಪರಿಣಾಮಕಾರಿ ಆಗಿದೆ.
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಅನ್ನು ನಿತ್ಯ ಸೇವಿಸುವುದರಿಂದ ಇದು ಟ್ರೂಕ ನಷ್ಟವನ್ನು ಪ್ರಚೋದಿಸುತ್ತದೆ.
ಲೆಮೆನ್ ಟೀ ಅತ್ಯುತ್ತಮ ಡಿಟಾಕ್ಸ್ ಪಾನೀಯವಾಗಿದ್ದು ಇದು ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಕೆಗೆ ಪ್ರಚೋದನೆ ನೀಡುತ್ತದೆ. ಬೆಲ್ಲಿ ಫ್ಯಾಟ್ ಸಹ ಕಡಿಮೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.