Two Thousand Year Old Party City: ಸಾಗರದಾಳದಲ್ಲಿ ವಿಜ್ಞಾನಿಗಳಿಗೆ ದೊರೆತ 2000 ವರ್ಷ ಹಳೆ ಪಾರ್ಟಿ ಸಿಟಿ, ಇಲ್ಲಿಗೆ ಅದರ ಚಿತ್ರಗಳು
1. Real Life Atlantis - ಸಮುದ್ರದಾಳದಲ್ಲಿ ದೊರೆತ ರೋಮನ್ ಕಾಲದ ಪಾರ್ಟಿ ಸಿಟಿ - ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಮುದ್ರದಲ್ಲಿ ಮುಳುಗಿರುವ 2,000 ವರ್ಷಗಳಷ್ಟು ಹಳೆಯದಾದ ಪಾರ್ಟಿ ಸಿಟಿಯು ಯುರೋಪಿಯನ್ ದೇಶವಾದ ಇಟಲಿಯ (Italy) ಬೈಯೆ (Baiae) ಬಳಿ ಪತ್ತೆಯಾಗಿದೆ. ಈ ಪಾರ್ಟಿ ಸಿಟಿಯು ರೋಮನ್ ಕಾಲದ ನಗರ ಎಂದು ಹೇಳಲಾಗುತ್ತಿದೆ.
2. Viral News - ಈ ಪಾರ್ಟಿ ಸಿಟಿಯಲ್ಲಿ ಸಕಲ ವ್ಯವಸ್ಥೆಗಳಿದ್ದವು - ರೋಮನ್ ಕಾಲದ ಪ್ರಬಲ ವ್ಯಕ್ತಿಗಳು ಈ ಪಾರ್ಟಿ ಸಿಟಿಯಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ನಂಬಲಾಗಿದೆ. ಅದರಲ್ಲಿ ಎಲ್ಲಾ ರೀತಿಯ ಐಷಾರಾಮಿ ವ್ಯವಸ್ಥೆಗಳಿವೆ.
3. Trending News - ಈ ಪಾರ್ಟಿ ಸಿಟಿಯಲ್ಲಿ ಸಾಮ್ರಾಟ ನಿರೋನ ಹತ್ಯೆಗೆ ಸಂಚು ರೂಪಿಸಲಾಗಿತ್ತು - ನೀರೋ ಚಕ್ರವರ್ತಿಯನ್ನು ಕೊಲ್ಲಲು ಸೆನೆಟರ್ ಗೈಸ್ ಕ್ಯಾಲ್ಪುರ್ನಿಯಸ್ ಪಿಸೊ ಸಂಚು ರೂಪಿಸಿದ್ದು ಇದೆ ಸಮುದ್ರದಾಳದ ಪಾರ್ಟಿ ಸಿಟಿಯಲ್ಲಿ ಎಂದು ಹೇಳಲಾಗುತ್ತದೆ.
4. World News - ಈ ಪಾರ್ಟಿ ಸಿಟಿಯ ಹತ್ತಿರ ಈ ಚಕ್ರವರ್ತಿಗಳ ಮನೆಗಳಿದ್ದವು - ಚಕ್ರವರ್ತಿ ಅಗಸ್ಟಸ್, ಚಕ್ರವರ್ತಿ ನೀರೋ, ಚಕ್ರವರ್ತಿ ಕ್ಯಾಲಿಗುಲಾ ಅವರ ಅರಮನೆಗಳು ಬೈಯೆಯಲ್ಲಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಬೈಯೇ ಹತ್ತಿರದಲ್ಲಿಯೇ ಈ ಪಾರ್ಟಿ ಸಿಟಿ ಸಮುದ್ರದಲ್ಲಿ ಕಂಡುಬಂದಿದೆ.
5. Weird News - ಪಾರ್ಟಿ ಸಿಟಿ ಏಕೆ ಹಾಳಾಯಿತು? - ಜ್ವಾಲಾಮುಖಿ ಸ್ಫೋಟದಿಂದಾಗಿ ಈ ಪಾರ್ಟಿ ಸಿಟಿ ಸಮುದ್ರದ ಆಳದಲ್ಲಿ ಮುಳುಗಿಹೋಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪಾರ್ಟಿ ಸಿಟಿಯಲ್ಲಿ ಅನೇಕ ಮುರಿದ ಗೋಡೆಗಳು ಮತ್ತು ಮನೆಗಳು ಕಂಡುಬಂದಿವೆ. ಇದಲ್ಲದೇ ಅನೇಕ ಶಿಲ್ಪಗಳೂ ದೊರೆತಿವೆ.