30 ವರ್ಷಗಳ ಬಳಿಕ ವೈಧೃತಿ ಯೋಗ: ಈ ರಾಶಿಗೆ ಸುಖದ ಸುಪ್ಪತ್ತಿಗೆ ತರಲಿದೆ ನವರಾತ್ರಿ- ಹೆಜ್ಜೆಹೆಜ್ಜೆಗೂ ಗೆಲುವಿನ ಮಹಾಪೂರ
ಹಿಂದೂ ಪಂಚಾಂಗದ ಪ್ರಕಾರ ಈ ಬಾರಿಯ ಶಾರದೀಯ ನವರಾತ್ರಿ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಈ ದಿನ ಬುಧಾದಿತ್ಯ ಯೋಗ ಮತ್ತು ವೈಧೃತಿ ಯೋಗದ ವಿಶೇಷ ಸಂಯೋಜನೆಯಾಗಲಿದೆ.
ಜ್ಯೋತಿಷಿಯ ಲೆಕ್ಕಾಚಾರದ ಪ್ರಕಾರ ಶಾರದೀಯ ನವರಾತ್ರಿಯ ಮೊದಲ ದಿನ ಕನ್ಯಾರಾಶಿಯಲ್ಲಿ ಸೂರ್ಯ-ಬುಧ ಸ್ಥಾನಿಕರಾಗಲಿದ್ದಾರೆ. ಈ ಸಂದರ್ಭದಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಮತ್ತೊಂದೆಡೆ ವೈಧೃತಿ ಯೋಗದ ವಿಶೇಷ ಕಾಕತಾಳೀಯವೂ ಪ್ರಾರಂಭವಾಗುತ್ತದೆ.
ಜ್ಯೋತಿಷ್ಯದ ದೃಷ್ಟಿಯಿಂದ ಈ ಬಾರಿಯ ಶಾರದೀಯ ನವರಾತ್ರಿ ವಿಶೇಷವಾಗಿರಲಿದೆ. ಈ ಸಂದರ್ಭದಲ್ಲಿ ತುಲಾ ರಾಶಿ ಮತ್ತು ಕನ್ಯಾ ರಾಶಿಯ ಜನರು ಬದುಕಲ್ಲಿ ಸರ್ವ ಸಂಪತ್ತನ್ನು ಪಡೆಯಲಿದ್ದಾರೆ. ಶಾರದೀಯ ನವರಾತ್ರಿಯಂದು 30 ವರ್ಷಗಳ ಬಳಿಕ ಈ ಯೋಗಗಳು ರೂಪುಗೊಂಡಿವೆ.
ಶಾರದೀಯ ನವರಾತ್ರಿ 2023: ಯಾವ ದಿನ ಯಾವ ದೇವತೆಗೆ ಪೂಜೆ?
ತಾಯಿ ಶೈಲಪುತ್ರಿ - 15 ಅಕ್ಟೋಬರ್ 2023 (ಭಾನುವಾರ), ಬ್ರಹ್ಮಚಾರಿಣಿ - 16 ಅಕ್ಟೋಬರ್ 2023 (ಸೋಮವಾರ), ಚಂದ್ರಘಂಟ - 17 ಅಕ್ಟೋಬರ್ 2023 (ಮಂಗಳವಾರ), ಕೂಷ್ಮಾಂಡ - 18 ಅಕ್ಟೋಬರ್ 2023 (ಬುಧವಾರ), ಸ್ಕಂದಮಾತೆ - 19 ಅಕ್ಟೋಬರ್ 2023 (ಗುರುವಾರ), ಕಾತ್ಯಾಯನಿ - 20 ಅಕ್ಟೋಬರ್ 2023 (ಶುಕ್ರವಾರ), ಕಾಳರಾತ್ರಿ - 21 ಅಕ್ಟೋಬರ್ 2023 (ಶನಿವಾರ), ಮಹಾಗೌರಿ, ದುರ್ಗಾ ಅಷ್ಟಮಿ- 22 ಅಕ್ಟೋಬರ್ 2023 (ಭಾನುವಾರ), ಸಿದ್ಧಿದಾತ್ರಿ, ಮಹಾ ನವಮಿ- 23 ಅಕ್ಟೋಬರ್ 2023 (ಸೋಮವಾರ), ವಿಜಯದಶಮಿ (ದಸರಾ)- 24 ಅಕ್ಟೋಬರ್ 2023,
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)