Vastu Tips: ಇತರರಿಂದ ಈ ವಸ್ತುಗಳನ್ನು ಎಂದಿಗೂ ಎರವಲು ಪಡೆಯಬೇಡಿ, ದೌರ್ಭಾಗ್ಯ ನಿಮ್ಮದಾಗುತ್ತದೆ

Fri, 30 Dec 2022-9:04 pm,

1, ಪ್ರತಿಯೊಬ್ಬರೂ ಉಡುಗೊರೆಗಳನ್ನು ನೀಡಲು ಮತ್ತು ಸ್ವೀಕರಿಸಲು ಇಷ್ಟಪಡುತ್ತಾರೆ. ಅನೇಕ ಬಾರಿ ಜನರು ಇತರರಿಂದ ಪಡೆದ ಉಡುಗೊರೆಗಳನ್ನು ಬೇರೆಯವರಿಗೆ ನೀಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇತರರಿಂದ ಪಡೆದ ಉಡುಗೊರೆಯನ್ನು ಯಾವುದೇ ವ್ಯಕ್ತಿಗೆ ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ.  

2. ಆಫೀಸ್‌ನಲ್ಲಿ ನೀವು ಕೆಲಸದ ಕಾರಣ ಇತರರ ಪೆನ್ನು ಅಥವಾ ಪೆನ್ಸಿಲ್‌ ಎರವಲು ಪಡೆದಿರಬಹುದು. ಆದರೆ, ಅನೇಕ ಬಾರಿ ಕೆಲ ಜನರು ಎರವಲು ಪಡೆದ ಇಂತಹ ವಸ್ತುಗಳನ್ನು ನಂತರ ಹಿಂತಿರುಗಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಮಾಡುವುದು ಅಶುಭ ಮತ್ತು ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲಸ ಮುಗಿದ ನಂತರ ಪೆನ್ ಅಥವಾ ಪೆನ್ಸಿಲ್ ಅನ್ನು ಹಿಂತಿರುಗಿಸುವುದು ತುಂಬಾ ಮುಖ್ಯ ನೆನಪಿನಲ್ಲಿಡಿ.  

3. ಇದೆ ವೇಳೆ, ಒಬ್ಬ ವ್ಯಕ್ತಿಯಿಂದ ಬಟ್ಟೆಗಳನ್ನು ಎರವಲು ಪಡೆದು ಎಂದಿಗೂ ಧರಿಸಬಾರದು. ಏಕೆಂದರೆ ಹೀಗೆ ಮಾಡುವುದರಿಂದ ಆ ವ್ಯಕ್ತಿಯ ದುರದೃಷ್ಟ ನಿಮಗೆ ಬರಬಹುದು. ಹೀಗಿರುವಾಗ, ಅಪ್ಪಿತಪ್ಪಿಯೂ ಕೂಡ ಇನ್ನೊಬ್ಬರ ಬಟ್ಟೆಗಳನ್ನು ಧರಿಸಬಾರದು.  

4. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಇತರರು ಧರಿಸಿರುವ ಗಡಿಯಾರವನ್ನು ಎಂದಿಗೂ ಎರವಲು ಪಡೆದುಕೊಳ್ಳಬಾರದು. ಇದನ್ನು ತುಂಬಾ ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ಗಡಿಯಾರವನ್ನು ಜೀವನದ ಸ್ಥಿತಿಯೊಂದಿಗೆ ಸಂಯೋಜಿಸಲಾಗಿದೆ. ಹೀಗಾಗಿ ಬೇರೊಬ್ಬರ ಗಡಿಯಾರವನ್ನು ಧರಿಸಿದರೆ, ಅದರೊಂದಿಗೆ ಆತನ ಕೆಟ್ಟ ಕಾಲ ನಿಮ್ಮದಾಗುವ ಸಾಧ್ಯತೆ ಇರುತ್ತದೆ.  

5 . ರಾತ್ರಿ ಮಲಗಲು ನಿಮ್ಮ ಹಾಸಿಗೆಯನ್ನು ಬಳಸಬೇಕು. ಇತರರ ಹಾಸಿಗೆಯ ಮೇಲೆ ಮಲಗುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ ಮತ್ತು ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇತರರ ಹಾಸಿಗೆಯನ್ನು ಬಳಸುವುದನ್ನು ತಪ್ಪಿಸುವುದು ಆದಷ್ಟು ಉತ್ತಮ. (ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link