Shukra Dese: ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಹಣ, ಅಧಿಕಾರದ ಯೋಗ

Thu, 01 Aug 2024-6:56 am,

ಪ್ರಸ್ತುತ ಸೂರ್ಯನ ರಾಶಿಚಕ್ರ ಚಿಹ್ನೆ ಸಿಂಹ ರಾಶಿಯಲ್ಲಿ ಸಂಚರಿಸುತ್ತಿರುವ ಐಷಾರಾಮಿ ಜೀವನದ ಅಂಶ ಶುಕ್ರ ಆಗಸ್ಟ್ 24ರವರೆಗೂ ಇದೇ ರಾಶಿಯಲ್ಲಿ ಇರಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರಿಗೆ ಶುಕ್ರ ದೆಸೆಯಿಂದ ಭಾರೀ ಅದೃಷ್ಟ ಖುಲಾಯಿಸಲಿದೆ. 

ಸ್ವಲ್ಪ ಪ್ರಯತ್ನಿಸಿದರೂ ಈ ರಾಶಿಯ ಮಹಿಳೆಯರಿಗೆ ಕೈಹಾಕಿದ ಕೆಲಸದಲ್ಲೆಲ್ಲಾ ಭಾರೀ ಯಶಸ್ಸು ಪ್ರಾಪ್ತಿಯಾಗಲಿದೆ. ವೃತ್ತಿ ಬದುಕಿನಲ್ಲಿ ಕೀರ್ತಿ, ಮನ್ನಣೆ ದೊರೆಯಲಿದೆ. 

ಶುಕ್ರ ದೆಸೆಯಿಂದ ವೃತ್ತಿ-ವ್ಯವಹಾರದಲ್ಲಿ ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲೂ ಶುಭ ಫಲಗಳನ್ನು ಅನುಭವಿಸುವಿರಿ. ಭೂಮಿ, ವಾಹನ ಖರೀದಿ ಯೋಗವೂ ಇದೆ. 

ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯ ಜೊತೆಗೆ ಉದ್ಯೋಗದಲ್ಲಿ ಪದೋನ್ನತಿ, ದಿಢೀರ್ ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

ಶುಕ್ರ ದೆಸೆಯಿಂದ ಈ ರಾಶಿಯ ಉದ್ಯೋಗಸ್ಥರಿಗೆ ಉನ್ನತ ಹುದ್ದೆ ಅಲಂಕರಿಸುವ ಯೋಗವಿದೆ. ಉತ್ತಮ ಸಂಪರ್ಕದಿಂದ ವೃತ್ತಿಯಲ್ಲಿ ಸ್ಥಿರತೆಯನ್ನು ಕಾಣಬಹುದು. 

ಇದು ನಿಮಗೆ ಬಂಗಾರದ ಸಮಯ ಎಂತಲೇ ಹೇಳಬಹುದು. ವೃತ್ತಿ ಬದುಕಿನಲ್ಲಿ ನಿಮ್ಮ ದೀರ್ಘಕಾಲದ ಕನಸು ನನಸಾಗುವ ಸಾಧ್ಯತೆ ಇದೆ. 

ಶುಕ್ರನ ಶುಭ ಫಲದಿಂದಾಗಿ ವೃತ್ತಿ ಜೀವನದಲ್ಲಿ ಒತ್ತಡ ಕಡಿಮೆಯಾಗಿ ಪ್ರಗತಿ ಕಂಡುಬರಲಿದೆ. ಆದಾಯದಲ್ಲಿ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಸುಧಾರಣೆ. ಸುಖಕರ ಕೌಟುಂಬಿಕ ಜೀವನವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link