ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನ ಸಂಪತ್ತು!ಈ ಬಾರಿ ಸರ್ಕಾರಿ ಉದ್ಯೋಗ ಸಿಗುವುದು ಪಕ್ಕಾ! ಹೆಚ್ಚುವುದು ಜೀವನ ನೆಮ್ಮದಿ
ಶುಕ್ರ ಎಂದರೇನೇ ಶುಭ. ಸಂಪತ್ತು, ವೈಭವ, ಉದ್ಯೋಗ, ಸಂತೋಷ ಮತ್ತು ಸೌಂದರ್ಯಕ್ಕೆ ಕಾರಣಕ. ಶುಕ್ರನು ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸಿದಾಗ, ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
ಡಿಸೆಂಬರ್ ತಿಂಗಳಿನಲ್ಲಿ ಶುಕ್ರನು ಎರಡು ಬಾರಿ ತನ್ನ ರಾಶಿಯನ್ನು ಬದಲಿಸುತ್ತಾನೆ. ಅಂದರೆ ಒಂದೇ ತಿಂಗಳಿನಲ್ಲಿ ಎರಡು ಬಾರಿ ರಾಶಿಯನ್ನು ಬದಲಾಯಿಸುವ ಕಾರಣ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆ ಹರಿಯುವ ಹಾಗೆ ಆಗುತ್ತದೆ.
ವೃಷಭ ರಾಶಿ :ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಈಗ ಈ ರಾಶಿಯವರು ಅತಿ ಹೆಚ್ಚಿನ ಪ್ರಯಿಜನ ಪಡೆಯುವರು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ಲಾಭವಾಗುವುದು. ವ್ಯಾಪಾರದಲ್ಲಿ ಬೆಳವಣಿಗೆ ಕಂಡುಬರಲಿದೆ. ಆಕಸ್ಮಿಕ ಆರ್ಥಿಕ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಮಿಥುನ ರಾಶಿ : ಉದ್ಯೋಗಸ್ಥರಿಗೆ ಕಾರ್ಯ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಮೇಲಾ ಧಿಕಾರಿಗಳು ಮತ್ತು ಅಧಿಕಾರಿಗಳಿಂದ ಪ್ರೋತ್ಸಾಹ ಸಿಗುತ್ತದೆ. ನಿಮ್ಮ ನಿರೀಕ್ಷೆಯಂತೆ ವೇತನ ಹೆಚ್ಚಾಗಬಹುದು. ವ್ಯಾಪಾರ ವಿಸ್ತರಣೆಯಾಗಲಿದೆ.
ಕಟಕ ರಾಶಿ : ಉದ್ಯೋಗದಲ್ಲಾಗಲಿ ವ್ಯಾಪಾರದಲ್ಲಾಗಲಿ ಸ್ಥಿರತೆ ಇರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ನಿರೀಕ್ಷೆಗೆ ಮೀರಿದ ಹಣವನ್ನು ಗಳಿಸುವಿರಿ. ಅಪಾರ ಪ್ರಮಾಣದ ಸಂಪತ್ತು ಒದಗಿ ಬರುವುದು.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE Kannada News ಅದನ್ನು ಖಚಿತಪಡಿಸುವುದಿಲ್ಲ.