Privacy Policy ಬಗ್ಗೆ ಸ್ಪಷ್ಟನೆ ನೀಡಿದ WhatsApp ಹೇಳಿದ್ದೇನು?

Tue, 12 Jan 2021-1:00 pm,

ಬಳಕೆದಾರರ ಖಾಸಗಿ ಸಂದೇಶಗಳಿಂದ ಅಪ್ಲಿಕೇಶನ್ ಡೇಟಾವನ್ನು ತೆಗೆದುಕೊಳ್ಳುವುದಿಲ್ಲ ಎಂದು ವಾಟ್ಸಾಪ್ (WhatsApp) ಹೇಳಿಕೆಯಲ್ಲಿ ತಿಳಿಸಿದೆ. ಜನಸಾಮಾನ್ಯರ ಖಾಸಗಿ ಕರೆಗಳ ಡೇಟಾವನ್ನು ಸಹ ತೆಗೆದುಕೊಳ್ಳಲಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.  

ಯಾವುದೇ ಬಳಕೆದಾರರ ಕರೆಗಳು ಅಥವಾ ಸಂದೇಶಗಳನ್ನು ಲಾಗ್‌ಗಳು ತಮ್ಮೊಂದಿಗೆ ಇಟ್ಟುಕೊಳ್ಳುವುದಿಲ್ಲ ಎಂದು ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ತಿಳಿಸಿದೆ. ಅಂದರೆ, ಅದನ್ನು ಮೇಲ್ವಿಚಾರಣೆ ಮಾಡಲಾಗುವುದಿಲ್ಲ.

ಹೊಸ ಗೌಪ್ಯತೆ ನೀತಿಯಲ್ಲಿ, ಪ್ರತಿ ಬಳಕೆದಾರರ ಲೋಕೇಶನ್ ಡೇಟಾವನ್ನು ವಾಟ್ಸಾಪ್ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಂಪನಿಯು ತನ್ನ ಹೇಳಿಕೆಯಲ್ಲಿ ವಾಟ್ಸಾಪ್ ಬಳಕೆದಾರರ ಯಾವುದೇ ಸ್ಥಳದ ಡೇಟಾವನ್ನು ಫೇಸ್‌ಬುಕ್‌ (Facebook) ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ - Whatsapp ಬಳಕೆದಾರರೇ ಎಚ್ಚರ..! google searchನಲ್ಲಿ ಲೀಕ್ ಆಗಿದೆ ವಾಟ್ಸ್ಆ್ಯಪ್ ಗ್ರೂಪ್ ಲಿಂಕ್

ನಿಮ್ಮ ಮೊಬೈಲ್‌ನಲ್ಲಿನ ಸಂಪರ್ಕ ಪಟ್ಟಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಅಂದರೆ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ಖಾಸಗಿಯಾಗಿರುತ್ತವೆ ಎಂದು ಅದು ಹೇಳಿದೆ.

ವಾಟ್ಸಾಪ್‌ನಲ್ಲಿ ಅಸ್ತಿತ್ವದಲ್ಲಿರುವ ಗುಂಪುಗಳ ಚಾಟ್‌ಗಳು (WhatsApp Groups) ಮತ್ತು ಮಾಹಿತಿಯು ಖಾಸಗಿಯಾಗಿ ಉಳಿಯುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಂಪನಿಯು ಖಾಸಗಿ ಗುಂಪುಗಳ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಅದು ತಿಳಿಸಿದೆ.

ಇದನ್ನೂ ಓದಿ - ನಿಮ್ಮ Smartphone ಕಳುವಾದರೆ WhatsApp ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಹೊಸ ಗೌಪ್ಯತೆ ನೀತಿ ನೇರವಾಗಿ ವಾಟ್ಸಾಪ್ ಬಿಸಿನೆಸ್ (WhatsApp Business)  ಖಾತೆಗಳಿಗೆ ಸಂಬಂಧಿಸಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ವ್ಯವಹಾರ ಖಾತೆಗಳಿಗೆ ಉತ್ತಮ ವಾತಾವರಣವನ್ನು ನೀಡಲು ಮತ್ತು ಅವುಗಳನ್ನು ವಿಸ್ತರಿಸಲು ಮಾತ್ರ ಹೊಸ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಾಟ್ಸಾಪ್ನ ಹೊಸ ನಿಯಮಗಳನ್ನು ಖಾಸಗಿ ಖಾತೆಗಳೊಂದಿಗೆ ಲಿಂಕ್ ಮಾಡಬಾರದು ಎಂದು ಕಂಪನಿ ಮನವಿ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link