ನವದೆಹಲಿ : WhatsAppನ ಹೊಸ ಗೌಪ್ಯತೆ ನೀತಿಯ (Privacy Policy) ಬಳಕೆದಾರರನ್ನು ಈಗಾಗಲೇ ಆತಂಕದಲ್ಲಿಇರಿಸಿದೆ. ಇದೀಗ WhatsApp ಬಳಕೆದಾರರು ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. Google Searchನಲ್ಲಿ ವಾಟ್ಸಾಪ್ ಗ್ರೂಪ್ಸ್ ಮಾಹಿತಿ ಸೋರಿಕೆಯಾಗಿದೆ. ಅಂದರೆ ಈಗ ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ WhatsApp Groupಗಳಿಗೆ ಪ್ರವೇಶಿಸಬಹುದು.
ವಾಟ್ಸಾಪ್ ಗ್ರೂಪ್‌ನ ಲಿಂಕ್‌ಗಳು ಸೋರಿಕೆಯಾಗಿವೆ :
Google Searchನಲ್ಲಿ ವಾಟ್ಸಾಪ್ (WhatsApp) ಗ್ರೂಪ್‌ಗಳ ಲಿಂಕ್‌ಗಳು ಸಿಗುತ್ತವೆ ಎಂದು ಆಂತರಿಕ ಭದ್ರತಾ ಸಂಶೋಧಕ ರಾಜಶೇಖರ್ ರಾಜಾರಿಯಾ ಹೇಳಿದ್ದಾರೆ. ರಾಜಶೇಖರ್ ನೀಡಿರುವ ಮಾಹಿತಿ ಪ್ರಕಾರ, ಈಗ ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಗುಂಪು ಚಾಟನ್ನು (Chat) ಪ್ರವೇಶಿಸಬಹುದು. ಅಲ್ಲದೆ, ಗುಂಪಿನಲ್ಲಿರುವ ಎಲ್ಲ ಸದಸ್ಯರ ಫೋನ್ ನಂಬರ್ ಮತ್ತು ಪ್ರೊಫೈಲ್ ಚಿತ್ರವನ್ನು ವೀಕ್ಷಿಸಬಹುದು ಮಾತ್ರವಲ್ಲ ಅದನ್ನು ಲೀಕ್ ಮಾಡಬಹುದು.
ಇದನ್ನೂ ಓದಿ : ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದರೂ TikTok ನಂಬರ್ ಒನ್ ಅಪ್ಲಿಕೇಶನ್
Google Searchನಲ್ಲಿ 1500 ಕ್ಕೂ ಹೆಚ್ಚು ಗ್ರೂಪ್ ಗಳ ಲಿಂಕ್ :
ಮಾಹಿತಿಯ ಪ್ರಕಾರ, ಗ್ರೂಪ್ ಚಾಟ್ ಆಹ್ವಾನಗಳಿಗೆ ವಾಟ್ಸಾಪ್ ಇಂಡೆಕ್ಸಿಂಗ್ ಅನ್ನು ಅನುಮೋದಿಸಲಾಗಿದೆ. ಇಂಡೆಕ್ಸಿಂಗ್ (Indexing) ನಂತರ, ಎಲ್ಲಾ ವಾಟ್ಸಾಪ್ ಗ್ರೂಪನ್ನು ಸರ್ಚ್ ಎಂಜಿನ್‌ಗೆ ಲಿಂಕ್ ಮಾಡಲಾಗುತ್ತದೆ. ಇದಾದ ಮೇಲೆ ಯಾರು ಬೇಕಾದರೂ ಇಂಟರ್ ನೆಟ್ ನಲ್ಲಿ (Internet) ಹುಡುಕಿ ಗ್ರೂಪ್ ನ ಲಿಂಕ್ ಪಡೆದುಕೊಳ್ಳಬಹುದು. ಅಲ್ಲದೆ, ಈ ಲಿಂಕ್ ಮೂಲಕ ಗ್ರೂಪ್ ಪ್ರವೇಶಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, Google Searchನಲ್ಲಿ 1500 ಕ್ಕೂ ಹೆಚ್ಚು ಗ್ರೂಪ್ ಗಳ ಆಹ್ವಾನ ಲಿಂಕ್‌ಗಳಿವೆ.
ಬಳಕೆದಾರರ ಪ್ರೊಫೈಲ್ ಕೂಡಾ Google ನಲ್ಲಿಯೂ ಲಭ್ಯ :
ವಾಟ್ಸಾಪ್ ಗುಂಪುಗಳು ಮಾತ್ರವಲ್ಲದೆ ವೈಯಕ್ತಿಕ ಪ್ರೊಫೈಲ್‌ಗಳ URL ಗಳು ಸಹ ಗೂಗಲ್‌ನಲ್ಲಿ ಲಭ್ಯವಿದೆ. ಈ ಲಿಂಕ್‌ಗಳ ಸಹಾಯದಿಂದ, ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಪ್ರೊಫೈಲ್ ಚಿತ್ರ (Profile Picture) ಮತ್ತು ಫೋನ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.