WhatsApp: ನಿಮ್ಮ ವೈಯಕ್ತಿಕ ಚಾಟ್ ಅನ್ನು Delete ಮಾಡದೆಯೇ ಈ ರೀತಿ Hide ಮಾಡಿ
ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ನೀವು ಮರೆಮಾಡಲು ಬಯಸುವ ಚಾಟ್‌ಗೆ ಹೋಗಿ. ಈ ಚಾಟ್ ಅನ್ನು ತೆರೆಯಬೇಡಿ, ಬದಲಿಗೆ ಅದನ್ನು ಒತ್ತಿ ಮತ್ತು ಸ್ವಲ್ಪ ಸಮಯದವರೆಗೆ ಹಿಡಿದುಕೊಳ್ಳಿ.
ವಾಟ್ಸಾಪ್ ಚಾಟ್ (Whatsapp Chat) ಅನ್ನು ಒತ್ತಿ ಹಿಡಿಯುವುದರಿಂದ ಮೇಲ್ಪಾಗದಲ್ಲಿ ಒಂದು ಫೋಲ್ಡರ್ ಐಕಾನ್ ಕಾಣಿಸುತ್ತದೆ. ಅದರಲ್ಲಿ Arrow ವನ್ನು ಕಾಣಬಹುದು.
ಈ ಐಕಾನ್ ಕ್ಲಿಕ್ ಮಾಡುವುದರಿಂದ ಆ ಸಂಪರ್ಕಕ್ಕಾಗಿ ಚಾಟ್ ಆರ್ಕೈವ್ (Archive) ಆಗುತ್ತದೆ.
ಈ ಹಂತವನ್ನು ಪೂರ್ಣಗೊಳಿಸಿದ ನಂತರ, ನೀವು ಹೈಡ್ ಮಾಡಲು ಬಳಸುವ ಚಾಟ್, ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ ಮತ್ತು ವಾಟ್ಸಾಪ್ (Whatsapp) ಮೂಲಕ ಎಷ್ಟು ಸ್ಕ್ರಾಲ್ ಮಾಡಿದರೂ ಸಹ ಬೇರೆಯವರು ಅದನ್ನು ಓದಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ- "ಗೌಪ್ಯತೆಯ ಹಕ್ಕು ಸಂಪೂರ್ಣವಲ್ಲ" ವಾಟ್ಸಪ್ ಗೆ ಕೇಂದ್ರ ಸರ್ಕಾರ ತಿರುಗೇಟು
ಐಫೋನ್ ಬಳಸುವವರು ವಾಟ್ಸಾಪ್‌ನಲ್ಲಿ, ನೀವು ಹೈಡ್ ಮಾಡಲು ಬಯಸುವ ಸಂಪರ್ಕಕ್ಕೆ ಹೋಗುವ ಮೂಲಕ ಚಾಟ್ ಅನ್ನು ಸ್ವೈಪ್ ಮಾಡಿ. ಬಲಕ್ಕೆ ಸ್ವೈಪ್ ಮಾಡುವಾಗ, ಇನ್ನಷ್ಟು ಮತ್ತು ಆರ್ಕೈವ್ ಎಂದು ಬರೆಯಲಾಗಿರುತ್ತದೆ. ಆರ್ಕೈವ್ ಮೇಲೆ ಟ್ಯಾಪ್ ಮಾಡಿ. ನೀವು ಆರ್ಕೈವ್ ಅನ್ನು ಒತ್ತಿದ ತಕ್ಷಣ, ಆ ಚಾಟ್ ತಕ್ಷಣವೇ ಕಣ್ಮರೆಯಾಗುತ್ತದೆ. ಅಂದರೆ ನೀವು ಡಿಲೀಟ್ ಮಾಡದೆಯೇ ನಿಮ್ಮ ವಾಟ್ಸಾಪ್ ಚಾಟ್ ಕಣ್ಮರೆ ಮಾಡಬಹುದು.