ನವದೆಹಲಿ: WhatsApp Complaint Against Indian Government - ಭಾರತ ಸರ್ಕಾರದ (Government Of India) ವಿರುದ್ಧ ವಾಟ್ಸ್ ಆಪ್ ದೆಹಲಿಯಲ್ಲಿ ದೂರೊಂದನ್ನು ದಾಖಲಿಸಿದೆ. ತನ್ನ ಈ ದೂರಿನಲ್ಲಿ ಸರ್ಕಾರ ಬುಧವಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸದಂತೆ ಮನವಿ ಮಾಡಲಾಗಿದೆ. ಹೊಸ ನಿಯಮಾವಳಿಗಳ ಅಡಿ ಸರ್ಕಾರ ಫೇಸ್ ಬುಕ್ (Facebook) ಮಾಲೀಕತ್ವದ ಕಂಪನಿಗೆ ಗೌಪ್ಯತಾ ನೀತಿಯಿಂದ (Privacy Policy) ಹಿಂದೆ ಸರಿಯುವಂತೆ ಸೂಚಿಸಿದೆ ಎನ್ನಲಾಗಿದೆ. ಸರ್ಕಾರದ ಹೊಸ ನಿಯಮಗಳು ಭಾರತದ ಸಂವಿಧಾನ ನೀಡಿರುವ ಗೌಪ್ಯತೆಯ ಅಧಿಕಾರದ ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್(Delhi High Court) ಘೋಷಿಸಬೇಕು ಎಂದು ಕೋರಲಾಗಿದೆ. ಏಕೆಂದರೆ ಈ ನಿಯಮಗಳ ಪ್ರಕಾರ, ಸರ್ಕಾರ ಒತ್ತಾಯಿಸಿದಾಗ ಸಾಮಾಜಿಕ ಮಾಧ್ಯಮ ಕಂಪನಿಗಳು ಮೊದಲು ಮಾಹಿತಿಯನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಗುರುತಿಸಬೇಕಾಗಲಿದೆ ಎಂದು ವಾಟ್ಸ್ ಆಪ್ (WhatsApp) ಹೇಳಿದೆ.
ಕಾನೂನಿನ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಆರೋಪ ಇರುವ ಜನರನ್ನು ಗುರುತಿಸಿ ಅವರ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕು. ಆದರೆ, ಕಂಪನಿಗೆ ಈ ರೀತಿ ಮಾಡಲು ಬರುವುದಿಲ್ಲ. ಏಕೆಂದರೆ, ವಾಟ್ಸ್ ಆಪ್ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ. ಸರ್ಕಾರದ ನಿಯಮಗಳ ಪ್ರಕಾರ ಕಂಪನಿ ಮೊದಲು ಮಾಹಿತಿಯನ್ನು ಹಂಚಿಕೊಂಡ ಹಾಗೂ ಆ ಮಾಹಿತಿಯನ್ನು ಮೊದಲು ಪಡೆದ ವ್ಯಕ್ತಿಯ ಎನ್ಕ್ರಿಪ್ಶನ್ ಮುರಿಯಬೇಕಾಗುತ್ತದೆ ಎಂದಿದೆ.
ಸುದ್ದಿ ಸಂಸ್ಥೆ ರೈಟರ್ಸ್ ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಕೋರ್ಟ್ ವಾಟ್ಸ್ ಆಪ್ ನ ಅರ್ಜಿಯನ್ನು ಯಾವಾಗ ಕೈಗೆತ್ತಿಕೊಳ್ಳಲಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ವಿಷಯ ತಜ್ಞರು ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇನ್ನೊಂದೆಡೆ ವಾಟ್ಸ್ ಆಪ್ ವಕ್ತಾರರು ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಈ ಪ್ರಕರಣ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮ ಕಂಪನಿಗಳ ಜೊತೆಗೆ ಭಾರತ ಸರ್ಕಾರದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವಸಾಧ್ಯತೆ ಇದೆ. ಕಳೆದ ವಾರವಷ್ಟೇ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಏರ್ಪಟ್ಟ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಟ್ವಿಟ್ಟರ್ ಕಚೇರಿ ತಲುಪಿದ್ದರು. ವಾಟ್ಸ್ ಆಪ್, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರಿಂದ ಮಾಡಲಾಗಿರುವ ಟ್ವೀಟ್ ಗೆ 'ಮ್ಯಾನ್ಯೂಪಲೆಟಿವ್ ಮೀಡಿಯಾ' ಟ್ಯಾಗ್' ನೀಡಿತ್ತು.
ಇದಕ್ಕೂ ಮೊದಲು ಕೂಡ ಭಾರತ ಸರ್ಕಾರ ಟ್ವಿಟ್ಟರ್ ಗೆ ಹಲವು ಟ್ವೀಟ್ ಗಳನ್ನು ಡಿಲೀಟ್ ಮಾಡಲು ಸೂಚನೆ ನೀಡಿತ್ತು. ಈ ಟ್ವೀಟ್ ಗಳು ಕೋರೋನಾ ಮಹಾಮಾರಿಗೆ ಸಂಬಧಿಸಿದಂತೆ ಭ್ರಾಂತಿ ಹುಟ್ಟಿಸುವ ಮಾಹಿತಿಯನ್ನು ಹರಡುತ್ತಿವೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಟ್ವೀಟ್ ಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿ ಮಾಡಲಾಗಿರುವ ಟ್ವೀಟ್ ಗಳು ಕೂಡ ಶಾಮೀಳಗಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು.
ಇದನ್ನೂ ಓದಿ-Alert! ನಿಮ್ಮ ಸ್ಮಾರ್ಟ್ಫೋನ್ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ
ವಾಟ್ಸ್ ಆಪ್ ತನ್ನ FAQ ಪುಟದಲ್ಲಿ ಈ ಕುರಿತು ಮಾಹಿತಿ ನೀಡಿದೆ. ಆದರೆ, ಅದು ಯಾವುದೇ ದೇಶ ವಿಶೇಷವನ್ನು ಉಲ್ಲೇಖಿಸಿ ಇದನ್ನು ಬರೆದಿರಲಿಲ್ಲ. ಆದರೆ, ಇದೀಗ ವಾಟ್ಸ್ ಆಪ್ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ವಿರುದ್ಧ ದೂರು ದಾಖಲಿಸಿದೆ. ತನ್ನ ದೂರಿನಲ್ಲಿ ವಾಟ್ಸ್ ಆಪ್ ಕೆಲ ಸರ್ಕಾರಗಳು ಕಂಪನಿಗೆ 'ಟ್ರೆಸೆಬಿಲಿಟಿ' ಮಾಡಲು ಸೂಚಿಸುತ್ತಿವೆ ಎಂದು ಹೇಳಿದೆ.
ಇದನ್ನೂ ಓದಿ- ಈ 10 ಭಾರತೀಯ ಭಾಷೆಗಳಲ್ಲಿ Privacy Update ಬಗ್ಗೆ ನೆನಪಿಸಲಿದೆ WhatAapp..!
ವಾಟ್ಸ್ ಆಪ್ ಪ್ರಕಾರ 'ಟ್ರೆಸೆಬಿಲಿಟಿ' ಅರ್ಥ ಎಂದರೆ, ಯಾವುದೇ ಒಂದು ಸಂದೇಶವನ್ನು ಮೊಟ್ಟಮೊದಲ ಬಾರಿಗೆ ಯಾರು ಕಳುಹಿಸಿದ್ದು ಎಂಬುದನ್ನು ಕಂಡುಹಿಡಿಯುವುದಾಗಿದೆ. ಈ ರೀತಿಯ ಟ್ರೆಸೆಬಿಲಿಟಿಯಿಂದ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಮುರಿಯುವುದು ಎಂದರ್ಥ ಹಾಗೂ ಇದರಿಂದ ಲಕ್ಷಾಂತರ ಜನರ ಗೌಪ್ಯತೆ ಅಪಾಯಕ್ಕೆ ಸಿಲುಕುತ್ತದೆ ಎಂದು ಹೇಳಿದೆ. ವಾಟ್ಸ್ ಆಪ್ (WhatsApp) 2016ರಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ನೀತಿಯನ್ನು ಜಾರಿಗೆ ತಂದಿತ್ತು. ವಾಟ್ಸ್ ಆಪ್ ಮೂಲಕ ಮಾಡಲಾಗುವ ಕರೆ, ಸಂದೇಶ, ಫೋಟೋ, ವಿಡಿಯೋ ಹಾಗೂ ವೈಸ್ ನೋಟ್ ಕೇವಲ ಕಳುಹಿಸಿದವರಿಗೆ ತಲಪುವುದು ಇದರ ಹಿಂದಿನ ಉದ್ದೇಶವಾಗಿತ್ತು. ಅಷ್ಟೇ ಯಾಕೆ ಸಂದೇಶದಲ್ಲಿ ಏನಿದೆ ಎಂಬುದು ವಾಟ್ಸ್ ಆಪ್ ಗೂ ಗೊತ್ತಾಗುವುದಿಲ್ಲ ಎಂದು ಕಂಪನಿ ಹೇಳಿತ್ತು.
ಇದನ್ನೂ ಓದಿ-Government Deadline End Today: ನಾಳೆಯಿಂದ Facebook, Twitter ಬಂದ್? ಇಂದು ಸರ್ಕಾರದ ಗಡುವು ಅಂತ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.