ಇನ್ನು Whatsapp ಡಾಟಾ ಲೀಕ್ ಆದರೂ ಯಾರಿಗೂ ಅದನ್ನು ಓದಲು ಆಗಲ್ಲ.!

Tue, 09 Mar 2021-11:42 am,

ಹೊಸ ಅಪ್ ಡೇಟ್ ಏನಿದೆ.!? ಲಭ್ಯ ಮಾಹಿತಿ ಪ್ರಕಾರ ಇನ್ನು ವಾಟ್ಸಾಪ್ ಚಾಟಿಂಗ್ ಹಿಸ್ಟರಿ ಕೂಡಾ  encrypted ಆಗಲಿದೆ. ಅಂದರೆ ನಿಮ್ಮ ಚಾಟ್, ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ಓದಲು ಸಾಧ್ಯವಿಲ್ಲ. ಅಂದರೆ ನಿಮ್ಮ ಚಾಟ್ ಸಂಪೂರ್ಣ ಸುರಕ್ಷಿತ.

ಚಾಟ್ ಹಿಸ್ಟರಿಗೆ  ಇನ್ನು ಮುಂದೆ ಇರಲಿದೆ ಪಾಸ್ ವರ್ಡ್ .! ವಾಟ್ಸಾಪ್ ಅಪ್ ಡೇಟ್  ಬಗ್ಗೆ ನಿಗಾ ಇಡುವ ವೆಬ್ ಸೈಟ್ WaBetaInfo ಪ್ರಕಾರ, ವಾಟ್ಸಾಪ್ ಚಾಟ್ ಹಿಸ್ಟರಿಗೆ ಇನ್ನು ಪಾಸ್ ವರ್ಡ್ ಇರಲಿದೆ. ಅದನ್ನು ಯಾವುದೇ ಮೇಲ್ ಅಥವಾ ಹಾರ್ಡ್ ಡ್ರೈವ್ ನಲ್ಲಿ ಇಡಬಹುದಾಗಿದೆ. ಆದರೆ, ಅದನ್ನು ಓಪನ್ ಮಾಡಬೇಕಾದರೆ ಪಾಸ್ ವರ್ಡ್ ಅಗತ್ಯವಿರುತ್ತದೆ.

ಪ್ರೈವೆಸಿ ವಿಚಾರದಲ್ಲಿ ಇದು ತೀರಾ ಮುಖ್ಯ : ವಾಟ್ಸಾಪ್ ಪ್ರೈವೆಸಿ ವಿಚಾರದಲ್ಲಿ ಏನೇ ಹೇಳಿದರೂ, ಒಂದು ವೇಳೆ ವಾಟ್ಸಾಪ್ ಚಾಟ್ ಲೀಕ್ ಆದರೆ, ಅದರಲ್ಲಿರುವ ವಿಚಾರ ಬಟಾಬಯಲಾಗಿ ಬಿಡುತ್ತದೆ. ಈಗ ಬರಲಿರುವ ಹೊಸ ಫೀಚರ್ ಪ್ರಕಾರ ಒಂದು ವೇಳೆ ನಿಮ್ಮ ಚಾಟ್ ಲೀಕ್ ಆದರೂ ಕೂಡಾ ಯಾರಿಗೂ ಅದನ್ನು ಓದಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಓಪನ್ ಮಾಡಬೇಕಾದರೆ ಪಾಸ್ ವರ್ಡ್ ಅಗತ್ಯವಿರುತ್ತದೆ. ಆ ಪಾಸ್ ವರ್ಡ್ ನಿಮ್ಮಲ್ಲಿ ಮಾತ್ರ ಇರುತ್ತದೆ. 

ಅಂಡ್ರಾಯಿಡ್ ಮತ್ತು ಐಒಎಸ್‍ ಗಳಲ್ಲಿ ಈ ಅಪ್ಡೇಟ್ ಲಭ್ಯ: ಅಂಡ್ರಾಯಿಡ್ ಮತ್ತು ಐಒಎಸ್‍ ಗಳಲ್ಲಿ ಈ ಅಪ್ಡೇ ಟ್ ಲಭ್ಯವಿದೆ. ಈ ಪೀಚರ್ಸ್ ಅಪ್ಡೇಟ್ ಮಾಡಿಕೊಳ್ಳುವಂತೆ ಬಳಕೆದಾರರಿಗೆ ನೊಟಿಫಿಕೇಶನ್ ಬರಲಾರಂಭಿಸಿದೆ.  

ವಾಟ್ಸಾಪ್ ಚಾಟ್ ಲೀಕ್ ಆಗುವುದು ಬ್ಯಾಕ್‍ ಅಪ್ ಚಾಟ್ನಿಂದ : ವಾಟ್ಸಾಪ್ ಚಾಟ್ ಲೀಕ್ ಆಗಿರುವ ವರದಿಗಳನ್ನು ನೀವು ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಸಾಮಾನ್ಯವಾಗಿ ಬ್ಯಾಕ್‍ ಅಪ್ ಚಾಟ್‍ ಗಳಿಂದಾಗಿ ವಾಟ್ಸಾಪ್ ಚಾಟ್ ಲೀಕ್ ಆಗುತ್ತದೆ. ಇನ್ನು ಈ ಚಾಟ್ ಕೂಡಾ end-to-end encrypted ಆಗಿರುತ್ತದೆ. ಹಾಗಾಗಿ, ಡಾಟಾ ಲೀಕ್ ಆದರೂ, ಡಾಟಾ ಓದಲು ನಿಮ್ಮನ್ನು ಬಿಟ್ಟು ಯಾರಿಂದಲೂ ಸಾಧ್ಯವಿಲ್ಲ.!  

ZEENEWS TRENDING STORIES

By continuing to use the site, you agree to the use of cookies. You can find out more by Tapping this link