ಈ ಎಲ್ಲಾ ಕಾರಣದಿಂದಲೇ iphone ಇಷ್ಟು ದುಬಾರಿ..!
ಐಫೋನ್ ಗೌಪ್ಯತೆಯ ಫೀಚರ್ ನಿಂದ ಹೆಚ್ಚು ಜನಪ್ರಿಯವಾಗಿದೆ. ಐಫೋನ್‌ಗಳಲ್ಲಿ ಬಳಕೆದಾರರ ಡೇಟಾ ಅತ್ಯಂತ ಸುರಕ್ಷಿತವಾಗಿರುತ್ತದೆ. ಐಫೋನ್ ಅನ್ನು ಹ್ಯಾಕ್ ಮಾಡುವುದು ಸಾಧ್ಯವಿಲ್ಲ. ಯಾವುದೇ ಹೊಸ ಅಥವಾ ಗೊತ್ತಿಲ್ಲದ ಅಪ್ಲಿಕೇಶನ್ ಅನ್ನು ಐಫೋನ್‌ನಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಆಪ್ ಸ್ಟೋರ್‌ನ ಸುರಕ್ಷತೆ ಗೂಗಲ್ ಪ್ಲೇ ಸ್ಟೋರ್‌ಗಿಂತ ಹೆಚ್ಚಾಗಿರುತ್ತದೆ.
ಪ್ರೈವೆಸಿಯ ಬಗ್ಗೆ ಆಪಲ್ ಹೆಚ್ಚಿನ ಗಮನ ಹರಿಸುತ್ತದೆ. iOS 14, ಅಪ್ಲಿಕೇಶನ್‌ಗಳನ್ನು ತಯಾರಿಸುವ ಕಂಪನಿಗಳಿಗೆ ಇನ್ನಷ್ಟು ಕ್ಲಿಷ್ಟಕರವಾಗಿದೆ. ಪ್ರತಿ ಅಪ್ಲಿಕೇಶನ್, ಐಫೋನ್ ಬಳಕೆದಾರರ ಡೇಟಾದ ಬಳಕೆಯ ಬಗ್ಗೆ ಮಾಹಿತಿಯನ್ನು ಆಪಲ್‌ನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಅಂದರೆ, ಬಳಕೆದಾರರ ಡೇಟಾವನ್ನು ಎಲ್ಲಿ ಮತ್ತು ಯಾವಾಗ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಆಪಲ್ ಕಂಪನಿಗೆ ನೀಡಬೇಕಾಗುತ್ತದೆ.
ಐ ಫೋನ್ ನ ಕ್ಯಾಮೆರಾ ಮತ್ತು ಮೈಕ್‌ನಲ್ಲಿ ರಹಸ್ಯವಾಗಿ ಕಣ್ಣಿಡಲು ಸಾಧ್ಯವಿಲ್ಲ. ಫೇಸ್‌ಬುಕ್ ಮತ್ತು ಗೂಗಲ್ ನಂತಹ ಅನೇಕ ಅಪ್ಲಿಕೇಶನ್‌ಗಳು ಫೋನ್‌ನ ಕ್ಯಾಮೆರಾ ಮತ್ತು ಮೈಕ್‌ನಿಂದ ಮಾಹಿತಿಯನ್ನು ಸಂಗ್ರಹಿಸುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಐಫೋನ್ ನಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ, ಬೇರೆ ಆಪ್ ಗಳು ಫೋನಿನ ಕ್ಯಾಮೆರಾ ಅಥವಾ ಮೈಕ್ ಅನ್ನು ಬಳಸಿದರೆ, ಐಫೋನ್‌ನ ಮುಂಭಾಗದಲ್ಲಿರುವ ಇಂಡಿಕೆಟರ್ ಬ್ಲಿಂಕ್ ಆಗಲು ಪ್ರಾರಂಭಿಸುತ್ತದೆ.
ಆಪಲ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ. ಆಪ್ ಸ್ಟೋರ್‌ನಲ್ಲಿ ನೋಂದಾಯಿಸುವ ಮೊದಲು ಪ್ರತಿಯೊಂದು ಅಪ್ಲಿಕೇಶನ್‌ಗಳು ಕಟ್ಟುನಿಟ್ಟಾದ ಭದ್ರತಾ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.
ಬಳಕೆದಾರರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಪಲ್ ಸ್ಟೋರ್‌ನಲ್ಲಿರುವ ಯಾವುದೇ ಅಪ್ಲಿಕೇಶನ್‌ಗೆ ಬಳಕೆದಾರರ ಅನುಮತಿಯಿಲ್ಲದೆ ಡೇಟಾವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆನ್ ಲೈನ್ ನಲ್ಲಿ ಹುಡುಕಿದ ವಿಷಯಗಳಿಗೆ ಆಕ್ಸಸ್ ಸಿಗುವುದಿಲ್ಲ.