ಮುತೈದೆಯರು ಮಂಗಳವಾರ, ಗುರುವಾರ, ಶನಿವಾರದಂದು ಏಕೆ ತಲೆ ತೊಳೆಯಬಾರದು?
ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ ಇಂತಹ ಹಲವು ನಂಬಿಕೆಗಳಿವೆ. ಅದರಲ್ಲಿ ನಮ್ಮ ಜೀವನದಲ್ಲಿ ಶುಭ ಮತ್ತು ಅಶುಭಗಳ ಪರಿಣಾಮವನ್ನು ಹೇಳಲಾಗಿದೆ. ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆಗೆ ಸ್ನಾನ ಮಾಡಬಾರದು ಎಂಬ ಸಂಪ್ರದಾಯವಿದೆ. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂದು ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿವಾಹಿತ ಮಹಿಳೆಯರು ಮಂಗಳವಾರ ತಲೆಗೆ ಸ್ನಾನ ಮಾಡುವುದರಿಂದ ಅದು ಅವರ ಪತಿಯ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಸಹೋದರರನ್ನು ಹೊಂದಿರುವ ಮಹಿಳೆಯರು ಗುರುವಾರದಂದು ತಲೆ ತೊಳೆಯುವುದರಿಂದ ಅವರ ಸಹೋದರರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.
ಗುರುವಾರದಂದು ಮುತ್ತೈದೆಯರು ತಲೆಗೆ ಸ್ನಾನ ಮಾಡುವುದರಿಂದ ಅಂತಹ ಮನೆಯಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ನಂಬಿಕೆ ಇದೆ.
ವಿವಾಹಿತ ಮಹಿಳೆಯರು ಶನಿವಾರದಂದು ತಲೆ ಕೂದಲನ್ನು ತೊಳೆಯುವುದರಿಂದ ಅಂತಹ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಗಳಿಂದಾಗಿ ಮದುವೆಯಾದ ಮಹಿಳೆಯರು ಅಂದರೆ ಮುತ್ತೈದೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆಗೆ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.