ಯಾವುದೇ ಬಾಲಿವುಡ್ ನಟಿಗಿಯರಿಗೂ ಕಡಿಮೆಯಿಲ್ಲ ಪಾಕಿಸ್ತಾನಿ ಕ್ರಿಕೆಟಿಗರ ಪತ್ನಿಯರು!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಏಪ್ರಿಲ್ 2010ರಲ್ಲಿ ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ದಂಪತಿಗೆ ಈಗ ಇಜಾನ್ ಎಂಬ 2 ವರ್ಷದ ಮಗು ಕೂಡ ಇದೆ.
ಮೊಹಮ್ಮದ್ ಹಫೀಜ್ ಮತ್ತು ನಾಜಿಯಾ 2007ರಲ್ಲಿ ವಿವಾಹವಾದರು. ನಾಜಿಯಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಪೋಸ್ಟ್ಗಳು ಅವರು ಕ್ರಿಕೆಟ್ನ ದೊಡ್ಡ ಅಭಿಮಾನಿ ಎಂಬುದನ್ನು ತೋರಿಸುತ್ತವೆ.
ನರ್ಜಿಸ್ ಖಾತೂನ್ ಒಬ್ಬ ಬ್ರಿಟಿಷ್-ಪಾಕಿಸ್ತಾನಿ ಹುಡುಗಿಯಾಗಿದ್ದು, ಎಡಗೈ ವೇಗದ ಬೌಲರ್ ಲಂಡನ್ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾಗ ಮೊಹಮ್ಮದ್ ಅಮೀರ್ನ ಸಂಪರ್ಕಕ್ಕೆ ಬಂದಳು. 2016ರಲ್ಲಿ ಅಮೀರ್ ಮತ್ತು ನರ್ಜಿಸ್ ವಿವಾಹವಾದರು.
ಪಾಕಿಸ್ತಾನದ ಶ್ರೇಷ್ಠ ವೇಗದ ಬೌಲರ್ ವಾಸಿಂ ಅಕ್ರಮ್ ತಮ್ಮ ಮೊದಲ ಪತ್ನಿಯ ಮರಣದ ನಂತರ ಆಸ್ಟ್ರೇಲಿಯಾದ ಶನಿರಾರನ್ನು ವಿವಾಹವಾದರು. ಶನಿರಾ ನೋಡಲು ತುಂಬಾ ಸುಂದರವಾಗಿದ್ದಾರೆ.
ಶಾಮಿಯಾ ಅರ್ಜೂ 2019ರಲ್ಲಿ ದುಬೈನಲ್ಲಿ ಹಸನ್ ಅಲಿ ಅವರನ್ನು ವಿವಾಹವಾದರು. ಹರಿಯಾಣ ಮೂಲದ ಶಾಮಿಯಾ ಅವರು ಎಮಿರೇಟ್ಸ್ ಏರ್ಲೈನ್ಸ್ನಲ್ಲಿ ಫ್ಲೈಟ್ ಎಂಜಿನಿಯರ್ ಆಗಿದ್ದಾರೆ. ಶಾಮಿಯಾ ಕುಟುಂಬ ಹೊಸದಿಲ್ಲಿಯಲ್ಲಿ ನೆಲೆಸಿದೆ. ಇವರಿಬ್ಬರೂ ದುಬೈನಲ್ಲಿ ಭೇಟಿಯಾಗಿದ್ದರು.