World Heart Day: ಹೃದಯವನ್ನು ಆರೋಗ್ಯವಾಗಿಡಲು ಈ ಐದು ಆಹಾರಗಳು ಸಾಕು

Wed, 29 Sep 2021-2:25 pm,

ಆಲಿವ್ ಎಣ್ಣೆ: ಆಲಿವ್ ಎಣ್ಣೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆಲಿವ್ ಎಣ್ಣೆಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಇದು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದೆ. ಹೀಗಾಗಿ ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಾಲ್ಮನ್: ಇದು ಹೃದಯ ರೋಗಿಗಳಿಗೆ ಶಿಫಾರಸು ಮಾಡಲಾಗುವ ಪ್ರಮುಖ ಆಹಾರವಾಗಿದೆ. ಮತ್ತು ನಿಮಗೆ ಸಾಲ್ಮನ್ ಇಷ್ಟವಾಗದಿದ್ದರೆ, ನೀವು ಇತರ ಸಮುದ್ರಾಹಾರ ಅಥವಾ ಕೊಬ್ಬಿನ ಒಮೆಗಾ -3 ಹೊಂದಿರುವ ಮೀನುಗಳನ್ನು (Fatty Fish and Fish Oil) ತೆಗೆದುಕೊಳ್ಳಬಹುದು. ಅವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಮೆಗಾ 3 ಕೊಬ್ಬಿನಾಮ್ಲಗಳು ಅಧಿಕವಾಗಿರುವ ಆಹಾರಗಳು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹೀಗಾಗಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಾಲ್ಮನ್ ಬಹಳ ಉಪಯುಕ್ತವಾಗಿದೆ. 

ಸೊಪ್ಪುಗಳು: ಸೊಪ್ಪುಗಳು ಮತ್ತು ಎಲೆಗಳುಳ್ಳ ತರಕಾರಿಗಳಲ್ಲಿ (Leafy Green Vegetables) ಹೆಚ್ಚಿನ ಫೈಬರ್ ಇರುತ್ತದೆ. ಇವು ಹೃದಯ ರೋಗವನ್ನು ತಡೆಯಲು ಸಹಾಯ ಮಾಡುವ ಫೋಲೇಟ್ ಎಂಬ ಪ್ರಮುಖ ವಿಟಮಿನ್ ಬಿ ಹೊಂದಿದೆ. ಹಾಗಾಗಿ ಹಸಿರು ಸೊಪ್ಪು ತರಕಾರಿಗಳನ್ನು ತಪ್ಪದೇ ನಿಮ್ಮ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಏಕೆಂದರೆ ಇವುಗಳು ಸುಲಭವಾಗಿ ಲಭ್ಯವಿರುತ್ತವೆ ಮತ್ತು ಹೃದಯಕ್ಕೆ ರಕ್ಷಣೆಯನ್ನು ನೀಡುತ್ತವೆ.

ಇದನ್ನೂ ಓದಿ- Benefits Of Ragi-Milk: ನಿತ್ಯ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ರಾಗಿ ಬೆರೆಸಿ ಕುಡಿದರೆ ಸಿಗುತ್ತೆ ಅದ್ಭುತ ಲಾಭ

ಬೀನ್ಸ್ ವೈವಿಧ್ಯಗಳು: ಬೀನ್ಸ್ ಹೃದಯಕ್ಕೆ ಎಲೆಗಳಷ್ಟೇ ಒಳ್ಳೆಯದು. ಇದು ಫೋಲೇಟ್, ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್ ಇತ್ಯಾದಿಗಳನ್ನು ಒಳಗೊಂಡಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ- Benefits of Cucumber Water: ಆರೋಗ್ಯಕ್ಕೆ ವರದಾನ ಸವತೆಕಾಯಿ ನೀರು

ಡಾರ್ಕ್ ಚಾಕೋಲೇಟ್‌: ಡಾರ್ಕ್ ಚಾಕಲೇಟ್‌ನಲ್ಲಿ ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿವೆ, ಇದು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುತೂಹಲಕಾರಿಯಾಗಿ. ಹಲವಾರು ಅಧ್ಯಯನಗಳು ಚಾಕೊಲೇಟ್ ತಿನ್ನುವುದನ್ನು ಹೃದಯ ಕಾಯಿಲೆಯ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿವೆ ಎಂದು ತಿಳಿಸಿವೆ. ಡಾರ್ಕ್ ಚಾಕೊಲೇಟ್‌ನಲ್ಲಿ ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿವೆ . ಇದು ಅಪಧಮನಿಗಳು ಮತ್ತು ಪರಿಧಮನಿಯ ಹೃದಯ ಕಾಯಿಲೆಗಳಲ್ಲಿ ಕ್ಯಾಲ್ಸಿಫೈಡ್ ಪ್ಲೇಕ್ ಅನ್ನು ಅಭಿವೃದ್ಧಿಪಡಿಸುವ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ   

ZEENEWS TRENDING STORIES

By continuing to use the site, you agree to the use of cookies. You can find out more by Tapping this link