ಸ್ಥಗಿತಗೊಳ್ಳಲಿದೆ Yahoo Answers, ಡಾಟಾ ಡೌನ್ಲೋಡ್ ಮಾಡಿಕೊಳ್ಳಲು ಇದೇ ಕೊನೆಯ ಅವಕಾಶ

Tue, 06 Apr 2021-2:40 pm,

Yahoo ತನ್ನ ಜನಪ್ರಿಯ ಸೇವೆಗಳಲ್ಲಿ ಒಂದಾದ Yahoo Answers ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಲಾಗುವುದು ಎಂದು ಕಂಪನಿ ಹೇಳಿದೆ.  

ವರದಿಯ ಪ್ರಕಾರ, ಮೇ 4 ರ ನಂತರ Yahoo Answers ಅನ್ನು  ಮುಖ್ಯ ಸರ್ವರ್‌ನಿಂದ ತೆಗೆದುಹಾಕಲಾಗುತ್ತದೆ. ಇದರ ನಂತರ, ಬಳಕೆದಾರರಿಗೆ ಈ ಪೇಜ್ ಆಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ.

ಕಂಪನಿಯು Yahoo Answers ಅಪ್ಡೇಟ್ ಮಾಡುವುದನ್ನು ನಿಲ್ಲಿಸಿದೆ. ಈಗ ಬಳಕೆದಾರರು ಈ ಸೇವೆಯಲ್ಲಿ ಯಾವುದೇ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಏಪ್ರಿಲ್ 20ರಿಂದ Yahoo Answers ವೆಬ್‌ಸೈಟ್ ಕೇವಲ ಓನ್ಲಿ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ

ನೀವು ಈ ಮೊದಲು Yahoo Answersನಲ್ಲಿ ಪ್ರಶ್ನೆಗೆ ಉತ್ತರಿಸಿದ್ದರೆ, ಬ್ಯಾಕಪ್ ತೆಗೆದುಕೊಳ್ಳಲು ಇದು ಕೊನೆಯ ಅವಕಾಶವಾಗಿದೆ. ಬಳಕೆದಾರರು ತಮ್ಮ ಬ್ಯಾಕಪ್ ಅನ್ನು ಜೂನ್ 30 ರವರೆಗೆ ಪಡೆದುಕೊಳ್ಳಬಹುದು.   

2005 ರಲ್ಲಿ Yahoo Answers ಅನ್ನು ಪ್ರಾರಂಭಿಸಲಾಯಿತು. ಆದರೆ ಬಳಕೆದಾರರ ವಿಚಿತ್ರ ಪ್ರಶ್ನೆಗಳು ಮತ್ತು ಅಷ್ಟೇ ವಿಚಿತ್ರವಾದ  ಉತ್ತರಗಳ ಕಾರಣದಿಂದಾಗಿ , ಈ ಸೇವೆಯು ಹೆಚ್ಚು ಜನಪ್ರಿಯವಾಗಿರಲಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link