ಯುವ ರಾಜ್‌ಕುಮಾರ್ ಆ ನಟಿಯ ಜೊತೆಗೆ ಸಿಕ್ಕಿಬಿದ್ದ ಸಾಕ್ಷಿ ಇದೆಯಾ!? ಶ್ರೀದೇವಿ ಪರ ವಕೀಲರು ಹೇಳಿದ್ದೇನು?

Wed, 12 Jun 2024-3:54 pm,

ಯುವ ರಾಜ್‌ಕುಮಾರ್‌ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಓರ್ವ ನಟಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾತನಾಡಿದ ಯುವ ಪತ್ನಿ ಶ್ರೀದೇವಿ ಬೈರಪ್ಪ ಪರ ವಕೀಲರು ಇದಕ್ಕೆಲ್ಲ ಸಾಕ್ಷಿ ಇದೆ ಎಂದಿದ್ದಾರೆ. 

ಡಿಸೆಂಬರ್‌ ತಿಂಗಳ ನಂತರ ಇವರ ಮಧ್ಯೆ ವಿರಸ ಮೂಡಲು ಆರಂಭವಾಗಿದೆ. ಯುವ ರಾಜ್‌ಕುಮಾರ್‌ ಅವರ ಬದಲಾವಣೆ ಶ್ರೀದೇವಿ ತುಂಬಾನೇ ನೋವು ನೀಡಿದೆ. ಪ್ರತಿಯೊಂದನ್ನು ಶ್ರೀದೇವಿ ಪ್ರಶ್ನಿಸಿದ್ದಾರೆ, ಪ್ರಶ್ನೆ ಮಾಡಿದಾಗ ಕಾರ್ನರ್‌ ಮಾಡಿದ್ರೆ ಏನು ಮಾಡಲು ಸಾಧು ಎಂದು ಶ್ರೀದೇವಿ ಪರ ವಕೀರು ಹೇಳಿದ್ದಾರೆ.

ಶ್ರೀದೇವಿ ಯುಎಸ್‌ನಲ್ಲಿ ಹಾರ್ವರ್ಡ್‌ ಅಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಇಲ್ಲಿಗೂ ಅಲ್ಲಿಗೂ ಟೈಮ್‌ ಬದಲಾವಣೆ ಇರುತ್ತದೆ. ಪರೀಕ್ಷೆ ಸಮಯದಲ್ಲಿ ಆಕೆಗೆ ನೋಟಿಸ್‌ ಕಳುಹಿಸಿದ್ದಾರೆ. ಡಿಗ್ರಿ ಪಡೆಯುವುದು ಮುಖ್ಯ ಎಂದು ಹೇಳಿದ್ದಾರೆ.

ನೋಟಿಸ್‌ನಲ್ಲಿ ಆ ನಟಿಯ ಹೆಸರನ್ನು ಸುಮ್ಮನೆ ಉಲ್ಲೇಖಿಸಿಲ್ಲ. ಮ್ಯಾಟ್ರಿಮೋನಿಯಲ್‌ ಆಕ್ಟ್‌ನಲ್ಲಿ  adultery ಬಗ್ಗೆ ಸುಖಸುಮ್ಮನೆ  ಹಾಕಲು ಆಗಲ್ಲ. ಯಾರ ಜೊತೆ ಏನೂ ಎಂದು ಬರೆದಾಗ ಅದನ್ನು ಕೋರ್ಟ್‌ಗೆ ಎಸ್ಟಾಬ್ಲಿಷ್‌ ಮಾಡಬೇಕಾಗುತ್ತದೆ ಎಂದು ಶ್ರೀದೇವಿ ಪರ ವಕೀರು ಹೇಳಿದ್ದಾರೆ.

ಆ ವ್ಯಕ್ತಿ ಬಂದ ಮೇಲೆ ಹೀಗೆಲ್ಲಾ ಆಗಿದ್ದಾ ಎಂದು ಆ ವ್ಯಕ್ತಿನೇ ಹೇಳಬೇಕಾಗುತ್ತದೆ. ಏಕೆಂದರೆ ಡಿಸೆಂಬರ್‌ವರೆಗೂ ಊಟ ಆಯ್ತಾ ಎಂದು ಮೆಸೇಜ್ ಕಳುಹಿಸಿದ್ದಾರೆ. ನಂತರದಲ್ಲಿ ಎಲ್ಲವೂ ಸ್ಟಾಪ್ ಆಗಿದೆ ಎಂದು ಶ್ರೀದೇವಿ ಪರ ವಕೀರು ಹೇಳಿದ್ದಾರೆ.

ಡಿಸೆಂಬರ್‌ವರೆಗೂ ಪ್ರೀತಿಯಿಂದ ಯುವ ಮಾತನಾಡಿಸಿದ್ದಾರೆ. ಮೊದಲು ನೋಟಿಸ್‌ ಕೊಟ್ಟಿದ್ದು ಯುವರಾಜ್‌ಕುಮಾರ್‌ ಅವರು. ಹಾಗಾಗಿ ಶ್ರೀದೇವಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಡಿವೋರ್ಸ್‌ ಕೊಡುತ್ತೀವಿ ಎಂದು ಶ್ರೀದೇವಿ ಎಂದೂ ಹೇಳಿಲ್ಲ ಎಂದು ಶ್ರೀದೇವಿ ಪರ ವಕೀರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link