11 ದಿನಗಳ ನಂತರ, ಬಂಗಾರವಾಗುವುದು ಈ ರಾಶಿಯವರ ಬದುಕು.!
ಇನ್ನು 11 ದಿನಗಳಲ್ಲಿ ಅಂದರೆ ಜನವರಿ 13 ರಂದು, ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಇದೀಗ ನೇರ ಚಲನೆಗೆ ಹಿಂದಿರುಗುತ್ತಿರುವುದು ಮೂರು ರಾಶಿಯವರ ಜೀವನವನ್ನೇ ಮಂಗಳಮಯವನ್ನಾಗಿಸಲಿದೆ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ಕಾಲಕಾಲಕ್ಕೆ ಚಲಿಸುತ್ತಲೇ ಇರುತ್ತದೆ. ಇನ್ನು 11 ದಿನಗಳಲ್ಲಿ ಅಂದರೆ ಜನವರಿ 13 ರಂದು, ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹವು ತನ್ನ ಸ್ಥಾನವನ್ನು ಬದಲಾಯಿಸುವಾಗ, ಅದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಬೀರುತ್ತದೆ. ಮಂಗಳನನ್ನು ಧೈರ್ಯ ಮತ್ತು ಶೌರ್ಯದ ಸಂಕೇತ ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ ಹಿಮ್ಮುಖ ಚಲನೆಯಲ್ಲಿದ್ದ ಮಂಗಳ ಇದೀಗ ನೇರ ಚಲನೆಗೆ ಹಿಂದಿರುಗುತ್ತಿರುವುದು ಮೂರು ರಾಶಿಯವರ ಜೀವನವನ್ನೇ ಮಂಗಳಮಯವನ್ನಾಗಿಸಲಿದೆ.
ಮೀನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಗೆ ಮಂಗಳನ ಪ್ರವೇಶವು ಮೀನ ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯವರ ಜಾತಕದ ಮೂರನೇ ಮನೆಯಲ್ಲಿ ಮಂಗಳನು ನೇರ ಚಲನೆಗೆ ಮರಳಲಿದ್ದಾನೆ. ಇದನ್ನು ಧೈರ್ಯ ಮತ್ತು ಶೌರ್ಯ, ಸಹೋದರ ಮತ್ತು ಸಹೋದರಿಯ ಸ್ಥಾನ ಎಂದು ಕರೆಯಲಾಗುತ್ತದೆ. ಹೀಗಿರುವಾಗ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಯವರು ಕೈ ಹಾಕುವ ಕೆಲಸ ಸಫಲವಾಗುತ್ತದೆ.
ಇದನ್ನೂ ಓದಿ : Astro tips: ಈ ಮರದ ಎಲೆಯ ಪರಿಹಾರ ಆರ್ಥಿಕ ಮುಗ್ಗಟ್ಟನ್ನು ದೂರ ಮಾಡುತ್ತೆ
ಕಟಕ ರಾಶಿ :
ಕರ್ಕ ರಾಶಿಯವರಿಗೆ ಮಂಗಳನ ಉಪಸ್ಥಿತಿಯು ವಿಶೇಷವಾಗಿ ಪ್ರಯೋಜನಕಾರಿಯಾಗಿರಲಿದೆ. ಈ ರಾಶಿಯ 11 ನೇ ಮನೆಯಲ್ಲಿ ಮಂಗಳ ನೇರ ನಡೆಗೆ ಮರಳಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಳ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಕೆಲಸದಲ್ಲಿ ಬಡ್ತಿ ಸಿಗಬಹುದು. ವಿದ್ಯಾರ್ಥಿಗಳು ಪರಿಶ್ರಮದಿಂದ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಈ ಸಮಯ ಆರ್ಥಿಕವಾಗಿಯೂ ಲಾಭದಾಯಕವಾಗಿರುತ್ತದೆ. ಈ ರಾಶಿಚಕ್ರದ ಹತ್ತನೇ ಮನೆಯಲ್ಲಿ ಮಂಗಳನ ಪಥ ಬದಲಾಗಲಿದೆ. ಇದನ್ನು ಮನೆ ಮತ್ತು ಕೆಲಸದ ಸ್ಥಳವೆಂದು ಕರೆಯಲಾಗುತ್ತದೆ. . ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪ ಬರಬಹುದು. ವಿದೇಶದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ಶುಭ ಮತ್ತು ಫಲಪ್ರದವಾಗಿರಲಿದೆ.
ಇದನ್ನೂ ಓದಿ : Garuda Purana: ಮಕ್ಕಳ ಸಾವು ಮತ್ತು ಆತ್ಮಕ್ಕೆ ಸಂಬಂಧಿಸಿದ ಈ ವಿಷಯ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ! ಗರುಡ ಪುರಾಣದಲ್ಲಿ ಉಲ್ಲೇಖವಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.