ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವು ಸಂಪತ್ತು-ವೈಭವ, ಪ್ರೀತಿ-ಪ್ರಣಯ, ಆಕರ್ಷಣೆ-ಸೌಂದರ್ಯದ ಅಂಶವಾಗಿದೆ. ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಜೀವನವು ಸಂಪತ್ತು ಮತ್ತು ಐಶ್ವರ್ಯದಿಂದ ತುಂಬಿರುತ್ತದೆ. ಮೇ 30 ರಂದು, ಶುಕ್ರನು ಸಂಚರಿಸಿ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಚಂದ್ರನ ರಾಶಿಯಾಗಿರುವ ಕರ್ಕ ರಾಶಿಯನ್ನು ಶುಕ್ರ ಪ್ರವೇಶಿಸುವುದರೊಂದಿಗೆ ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ  4 ರಾಶಿಯವರ ಮೇಲೆ ಶುಕ್ರ ಅತಿಯಾದ ದಯೆಯನ್ನು ತೋರುತ್ತಾನೆ.  ಈ ರಾಶಿಯವರು ಬಹಳಷ್ಟು ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾರೆ. 


COMMERCIAL BREAK
SCROLL TO CONTINUE READING

ಶುಕ್ರನ ದಯೆಯಿಂದ ಸಿರಿವಂತರಾಗುತ್ತಾರೆ ಈ ರಾಶಿಯವರು :  
ಮೇಷ ರಾಶಿ : ಶುಕ್ರ ಸಂಕ್ರಮಣವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾರೆ. ಇವರ ಆದಾಯ ಹೆಚ್ಚಲಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ನೀವು ಮಾಡುವ ಕೆಲಸಗಳಿಗೆ ಕುಟುಂಬದ ಸದಸ್ಯರು ಬೆನ್ನೆಲುಬಾಗಿ ನಿಲ್ಲುತ್ತಾರೆ. ಜೀವನದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಂತೋಷವು ಹೆಚ್ಚಾಗುತ್ತದೆ. 


ಇದನ್ನೂ ಓದಿ : ಶನಿ ಜಯಂತಿಯಂದು ಅಪರೂಪದ 3 ರಾಜಯೋಗಗಳು, ಈ 3 ರಾಶಿಯವರಿಗೆ ಸಿರಿವಂತರಾಗುವ ಯೋಗ


ಕರ್ಕಾಟಕ ರಾಶಿ : ಶುಕ್ರನು ಕರ್ಕಾಟಕದಲ್ಲಿಯೇ ಸಂಚಾರ ಮಾಡುತ್ತಿದ್ದಾನೆ. ಇದು ಈ ರಾಶಿಯ ಜನರಿಗೆ ಬಹಳಷ್ಟು ಸಂಪತ್ತನ್ನು ನೀಡುತ್ತದೆ. ಈ ರಾಶಿಯವರ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಣಕಾಸಿನ ಹರಿವು ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವದ ಮೂಲಕ ಇತರರನ್ನು ಆಕರ್ಷಿಸುವುದು ಸಾಧ್ಯವಾಗುತ್ತದೆ. ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಬಟ್ಟೆ, ಆಭರಣಗಳನ್ನೂ ಖರೀದಿಸುವುದು ಸಾಧ್ಯವಾಗುತ್ತದೆ. ಉದ್ಯೋಗ-ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ. 


ವೃಶ್ಚಿಕ ರಾಶಿ : ಶುಕ್ರ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ನಿಮ್ಮ ಸ್ವಭಾವದಲ್ಲಿ ಅದ್ಭುತ ಮತ್ತು ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಹೊಸ ಜನರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಉತ್ತಮ ಜೀವನವನ್ನು ನಡೆಸಬಹುದು.  


ಇದನ್ನೂ ಓದಿ : ದ್ವಾದಶ ರಾಶಿಗಳಲ್ಲಿ ತುಂಬಾ ಭಾಗ್ಯವಂತರು ಈ ನಾಲ್ಕು ರಾಶಿಯ ಜನ


ಮೀನ ರಾಶಿ : ಶುಕ್ರನ ಸಂಕ್ರಮಣವು ಮೀನ ರಾಶಿಯವರ ವೈವಾಹಿಕ ಜೀವನದ ಆನಂದವನ್ನು ಹೆಚ್ಚಿಸುತ್ತದೆ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಆಹ್ಲಾದಕರವಾಗಿರಲಿದೆ. ನಿಮ್ಮಿಬ್ಬರ ಕನಸುಗಳು ಈಡೇರಲಿದೆ. ಮಕ್ಕಳ ಸಾಧನೆ ನಿಮಗೆ ಖುಷಿ ನೀಡಲಿದೆ. ಹೊಸ ಮನೆ-ಕಾರು ಅಥವಾ ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸುವ ಯೋಗವಿದೆ. ಹೊಸ ಉದ್ಯೋಗ ಪ್ರಸ್ತಾಪ ನಿಮ್ಮ ಮುಂದೆ ಬರಬಹುದು. ವ್ಯಾಪಾರವನ್ನು ವಿಸ್ತರಿಸಲು ಮತ್ತು ಉತ್ತಮ ಲಾಭ  ಗಳಿಸಲು ಇದು ಸರಿಯಾದ ಸಮಯ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.