700 ವರ್ಷಗಳ ನಂತರ ಪಂಚ ಮಹಾಯೋಗ ನಿರ್ಮಾಣ : ಈ ರಾಶಿಯವರಿಗೆ ಅದ್ಭುತ ರಾಜಯೋಗ
Pancha mahayoga effect : 700 ವರ್ಷಗಳ ನಂತರ, ಗ್ರಹಗಳ ಅದ್ಭುತ ಸಂಯೋಗ ರೂಪುಗೊಂಡಿದೆ. ಈ ಮಹಾ ಯೋಗದಿಂದ ಎಲ್ಲಾ ರಾಶಿಯವರ ಜೀವನದಲ್ಲಿ ಬದಲಾವಣೆಗಳಾಗುತ್ತವೆ. ಅದರಲ್ಲೂ ಮೂರು ರಾಶಿಯ ಜನರ ಅದೃಷ್ಟವೇ ಬದಲಾಗಲಿದೆ. ಈ ಮೂರು ರಾಶಿಯವರು ಅಪಾರ ಲಾಭ ಪಡೆದು ಪ್ರಗತಿಯನ್ನು ಸಾಧಿಸಲಿದ್ದಾರೆ.
ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಅಂದರೆ ರಾಶಿ ನಕ್ಷತ್ರವನ್ನು ಬದಲಾಯಿಸಿ ಸಾಗುತ್ತದೆ. ಹೀಗೆ ಗ್ರಹಗಳ ಸ್ಥಾನ ಪಲ್ಲಟವಾದಾಗ ಅದರ ಪರಿಣಾಮ ಎಲ್ಲಾ ಅರಾಶಿಅಯವರ್ ಜೀವನದಲ್ಲಿ ಕಾಣಿಸಿಕೊಳ್ಳುತ್ತದೆ. ಕೇದಾರಂ, ಶಂಕ, ಶಶ, ವರಿಷ್ಠ ಮತ್ತು ಸರ್ವಾರ್ಥಸಿದ್ಧಿ ಯೋಗಗಳು ಸೇರಿ ಮಾರ್ಚ್‌ನಲ್ಲಿ ಪಂಚ ಮಹಾಯೋಗ ನಿರ್ಮಾಣವಾಗುತ್ತಿದೆ.
ಸುಮಾರು 700 ವರ್ಷಗಳ ನಂತರ ಈ ಪಂಚಯೋಗ ನಿರ್ಮಾಣವಾಗುತ್ತಿದೆ. ಈ ಮಹಾ ಯೋಗದಿಂದ 3 ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಅವರು ಹೆಚ್ಚಿನ ಆದಾಯ ಪಡೆಯುವುದು ಸಾಧ್ಯವಾಗುತ್ತದೆ. ಅವರ ಜೀವನದಲ್ಲಿ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : Surya Gochar 2023 : ಸೂರ್ಯ ದೇವನಿಂದ 30 ದಿನದಲ್ಲಿ ಈ 3 ರಾಶಿಯವರಿಗೆ ಭರ್ಜರಿ ಆರ್ಥಿಕ ಲಾಭ!
ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಪಂಚ ಮಹಾಯೋಗವು ಅತ್ಯಂತ ಮಂಗಳಕರವಾಗಿದೆ. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ನಿಮ್ಮ ವ್ಯಕ್ತಿತ್ವ ಜನರನ್ನು ನಿಮ್ಮತ್ತ ಆಕರ್ಷಿಸಲಿದೆ. ಈ ಸಮಯದಲ್ಲಿ ನೀವು ಅಂದುಕೊಂಡಿರುವ ಕೆಲಸಾನ್ನು ಸಾಧಿಸುವುದು ಸುಲಭವಾಗುತ್ತದೆ. ಈ ರಾಶಿಯವರು ಅನಿರೀಕ್ಷಿತ ಮೂಲಗಳಿಂದ ಹಣವನ್ನು ಪಡೆಯುತ್ತಾರೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಲಾಭವಾಗುವುದು.
ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಪಂಚ ಮಹಾಯೋಗವು ತುಂಬಾ ಪ್ರಯೋಜನಕಾರಿಯಾಗಿದೆ. ಈ ರಾಶಿಯಲ್ಲಿ ಹಂಸ ಮತ್ತು ಮಾಳವ್ಯ ಯೋಗ ಕೂಡಾ ರೂಪುಗೊಂಡಿದ್ದು, ಈ ರಾಶಿಯವರು ಕೈ ಹಾಜುವ ಎಲ್ಲಾ ಕೆಲಸಗಳು ಯಶಸ್ವಿಯಾಗಲಿವೆ. ಕರ್ಕಾಟಕ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಶುಭ ಸಮಯ. ಈ ಸಮಯವು ವಿದ್ಯಾರ್ಥಿಗಳಿಗೆ ಕೂಡಾ ತುಂಬಾ ಅದ್ಭುತವಾಗಿದೆ.
ಇದನ್ನೂ ಓದಿ : Budh Gochar 2023 : ಬುಧ ಗೋಚರದಿಂದ ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಸಂಪತ್ತು ಮತ್ತು ಖ್ಯಾತಿ
ಮೀನ ರಾಶಿ :
ಮೀನ ರಾಶಿಯವರಿಗೆ ಪಂಚ ಮಹಾಯೋಗದಿಂದಾಗಿ ಶುಭ ದಿನಗಳು ಆರಂಭವಾಗಲಿವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಧೈರ್ಯವೂ ಹೆಚ್ಚುತ್ತದೆ. ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಮೀನ ರಾಶಿಯವರ ಜೀವನದಲ್ಲಿ ಈ ಯೋಗದಿಂದ ಹಠಾತ್ ಹಣದ ಹರಿವು ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.