ಈ 3 ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಹಿಂದೆಂದೂ ಕಂಡಿರದಷ್ಟು ಅಪಾಯ ಎದುರಾಗಲಿದೆ: ಈ ಜನರ ಪ್ರಾಣಕ್ಕೂ ಇದೆ ಕುತ್ತು!

Surya-Guru-Rahu Yoga: ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.

Written by - Bhavishya Shetty | Last Updated : Mar 16, 2023, 06:30 PM IST
    • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ.
    • ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ.
    • ಗ್ರಹಗಳ ಮೈತ್ರಿಯು ದೇಶ ಮತ್ತು ಜಗತ್ತಿಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ
ಈ 3 ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಹಿಂದೆಂದೂ ಕಂಡಿರದಷ್ಟು ಅಪಾಯ ಎದುರಾಗಲಿದೆ: ಈ ಜನರ ಪ್ರಾಣಕ್ಕೂ ಇದೆ ಕುತ್ತು! title=
Bhavishya Shetty (72601)

Surya-Guru-Rahu Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ. ಗ್ರಹಗಳ ಮೈತ್ರಿಯು ಎಲ್ಲಾ 12 ರಾಶಿಗಳಿಗೆ ಮಾತ್ರವಲ್ಲ, ದೇಶ ಮತ್ತು ಜಗತ್ತಿಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದರೆ ನೀವು ನಂಬುತ್ತೀರಾ?

ಇದನ್ನೂ ಓದಿ: Surya Grahan 2023: ವರ್ಷದ ಮೊದಲ ಸೂರ್ಯಗ್ರಹಣದಿಂದ ಅಲ್ಲೋಲ ಕಲ್ಲೋಲವಾಗುತ್ತೆ ಈ ರಾಶಿಯವರ ಜೀವನ!

ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.

ಮೇಷ ರಾಶಿಯಲ್ಲಿ ಸೂರ್ಯ-ಗುರು-ರಾಹು ಸಂಯೋಗದ ಋಣಾತ್ಮಕ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತವೆ. ಈ ಮೂರು ಗ್ರಹಗಳ ಮೈತ್ರಿಯಿಂದಾಗಿ ರಾಜಕೀಯ ಮೇಲಾಟವನ್ನು ಕಾಣಬಹುದು. ಅಷ್ಟೇ ಅಲ್ಲ, ಸರ್ಕಾರದ ಯಾವುದೇ ಪ್ರಮುಖ ನಿರ್ಧಾರ ಸಾರ್ವಜನಿಕರನ್ನು ಕೆರಳಿಸುವ ಸಾಧ್ಯತೆಯೂ ಇದೆ. ಆ ವೇಳೆ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ.

ಜ್ಯೋತಿಷ್ಯದಲ್ಲಿ, ಗುರುವನ್ನು ಆಯುಷ್ಯ ನೀಡುವ ಮತ್ತು ಜೀವನದ ರಕ್ಷಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಗ್ರಹ ರಾಹುವಿನೊಡನೆ ಇರುವುದರಿಂದಲೇ ದೇಶ, ಪ್ರಪಂಚದಲ್ಲಿ ಕೆಲ ಸಮಸ್ಯೆ ಬರಬಹುದು, ಇದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಕೂಡ ಎದುರಾಗಬಹುದು ಎಂದು ಹೇಳಲಾಗುತ್ತದೆ.

ಈ ಗ್ರಹಗಳ ಸಂಯೋಗದ ಸಮಯದಲ್ಲಿ, ಅನೇಕ ದೇಶಗಳ ಆರ್ಥಿಕ ಸ್ಥಿತಿಯ ಮೇಲೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ, ಈ ಅವಧಿಯಲ್ಲಿ ಷೇರುಪೇಟೆ ಮತ್ತು ಚಿನ್ನದ ಬೆಲೆಯಲ್ಲಿ ಹಠಾತ್ ದೊಡ್ಡ ಬದಲಾವಣೆಗಳಾಗುತ್ತವೆ. ಇದು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ನಾಂದಿ ಹಾಡಿದಂತಾಗುತ್ತದೆ.

ಮೇಷ ರಾಶಿಯಲ್ಲಿ ಈ ಮೂರು ಗ್ರಹಗಳ ಸಂಯೋಜನೆಯು ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bathroom Vastu Tips: ಬಾತ್ ರೂಂ ವಾಸ್ತುವಿನಲ್ಲಿ ಅಡಗಿದೆ ನಿಮ್ಮ ಆರೋಗ್ಯ-ಆರ್ಥಿಕತೆಯ ಗುಟ್ಟು! ಎಂದಿಗೂ ಇಂಥಾ ತಪ್ಪು ಮಾಡದಿರಿ

ಈ ಮೂರು ಗ್ರಹಗಳ ಮೈತ್ರಿಯು ಮೇಷ ರಾಶಿಯಲ್ಲಿ ಏಪ್ರಿಲ್ 22 ರಂದು ಸಂಭವಿಸಲಿದೆ. ಈ ಸಮಯದಲ್ಲಿ, ಬೇರೆ ದೇಶದಲ್ಲಿ ಯುದ್ಧದ ಸಾಧ್ಯತೆಯೂ ಉಂಟಾಗಬಹುದು. ಭಾರತದ ಯಾವುದೇ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷ ಇತ್ಯಾದಿಗಳಿರಬಹುದು, ಅಥವಾ ಭಯೋತ್ಪಾದಕ ಕೃತ್ಯಗಳೂ ಸಂಭವಿಸಬಹುದು ಎಂದು ಹೇಳಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News