Guru Krutika Nakshatra Gochar: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ರಾಶಿ ಪರಿವರ್ತಿಸಿದಂತೆ ತನ್ನ ನಕ್ಷತ್ರಗಳನ್ನು ಕೂಡ ಪರಿವರ್ತಿಸುತ್ತವೆ. ಗ್ರಹಗಳ ಈ ನಕ್ಷತ್ರ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಏಪ್ರಿಲ್ 17, 2024 ರಂದು ರಾತ್ರಿ ದೇವಗುರು ಬೃಹಸ್ಪತಿ ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ, ಮೂರು ರಾಶಿಗಳು ಇದರಿಂದ ವಿಶೇಷ ಲಾಭವನ್ನು ಪಡೆಯಲಿವೆ. ಈ ಜನರಿಗೆ ಸ್ಥಾನಮಾನದ ಜೊತೆಗೆ ಪದೋನ್ನತಿ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. 

COMMERCIAL BREAK
SCROLL TO CONTINUE READING

ಮಿಥುನ ರಾಶಿ: ಗುರುವಿನ ಈ ಕೃತಿಕಾ ನಕ್ಷತ್ರ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ, ಈ ಅವಧಿಯಲ್ಲಿ ಗುರು ಕೃತಿಕಾ ನಕ್ಷತ್ರದಲ್ಲಿ ವಿರಾಜಮಾನನಾಗಿ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಸ್ಥಿತನಾಗಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಉಂಟಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಗುರು ನಿಮ್ಮ ಜಾತಕದ ಸಪ್ತಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ವಿವಾಹಿತರಿಗೆ ವಿವಾಹ ಭಾಗ್ಯ ಕೂಡಿಬರಲಿದೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಯ ಲಾಭ ಸಿಗಲಿದೆ. 

ಕರ್ಕ ರಾಶಿ: ಕೃತಿಕಾ ನಕ್ಷತ್ರಕ್ಕೆ ಗುರುವಿನ ಪ್ರವೇಶ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಗುರು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಭಾಗ್ಯದ ಸಾಥ್ ಸಿಗಲಿದೆ. ಈ ಸಮಯ ವ್ಯಾಪಾರಿಗಳ ಪಾಲಿಗೆ ಅತ್ಯುತ್ತಮವಾಗಿದ್ದು, ವ್ಯಾಪಾರದಲ್ಲಿ ಆಕಸ್ಮಿಕ ವೃದ್ಧಿಯಾಗಲಿದೆ. ರಾಜಕೀಯ ಜೀವನಕ್ಕೆ ಸಂಬಂಧಿಸಿದ ಜನರಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಹೊಸ ನೌಕರಿ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. 


ಇದನ್ನೂ ಓದಿ-Kuber Favourite Zodiac Signs: ಈ ರಾಶಿಗಳ ಜನರ ಮೇಲೆ ಸದಾ ಕುಬೇರನ ಕೃಪೆ ಇರುತ್ತದೆ, ಜೀವನದಲ್ಲಿ ಸಿರಿ-ಸಂಪತ್ತಿನ ಕೊರತೆ ಇರುವುದಿಲ್ಲ!

ಮೇಷ ರಾಶಿ: ಕೃತಿಕಾ ನಕ್ಷತ್ರಕ್ಕೆ ಗುರುವಿನ ಪ್ರವೇಶ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ನಿಮ್ಮ ಜಾತಕದ 9 ಮತ್ತು 12 ಮನೆಗೆ ಅಧಿಪತಿಯಾಗಿ ಏಕಾದಶ ಭಾವದ ಮೇಲೆ ಆತನ ದೃಷ್ಟಿ ನೆಟ್ಟಿದೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಸರ್ಕಾರಿ ನೌಕರರ ಪಾಲಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ನಿಮಗೆ ಭವಿಷ್ಯದಲ್ಲಿ ಲಾಭ ಸಿಗಲಿದೆ. 


ಇದನ್ನೂ ಓದಿ-ವೃಷಭ ರಾಶಿಗೆ ದೇವಗುರು ಬೃಹಸ್ಪತಿಯ ಪ್ರವೇಶ, ಕುಬೇರ ಯೋಗ ರಚನೆಯಿಂದ ಈ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿಯ ಯೋಗ!

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ