Solar Eclipse Effect: ಖಗೋಳ ಲೆಕ್ಕಾಚಾರಗಳ ಪ್ರಕಾರ, ಇನ್ನ್ದು ಕೆಲವೇ ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣಗಳು ಖಗೋಳದ ಹೊರತಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬಹಳ ಮಹತ್ವವನ್ನು ಪಡೆದಿವೆ. ವಾಸ್ತವವಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಗ್ರಹಣವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಈ ವರ್ಷದ  ಮೊದಲ ಸೂರ್ಯ ಗ್ರಹಣ 20 ಏಪ್ರಿಲ್ 2023 ರಂದು ಸಂಭವಿಸಲಿದ್ದು ಈ ಸಂದರ್ಭದಲ್ಲಿ ಮಹಾನ್ ಯೋಗಗಳು ರೂಪುಗೊಳ್ಳಲಿವೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, 20 ಏಪ್ರಿಲ್ 2023ರಂದು ಸಂಭವಿಸಲಿರುವ ಸೂರ್ಯ ಗ್ರಹಣದಂದು ಸರ್ವಾರ್ಥ ಸಿದ್ಧಿ ಯೋಗ, ಬುಧಾದಿತ್ಯ ಯೋಗ, ಹಂಸ ಯೋಗ ಸೇರಿದಂತೆ ಹಲವು ಶುಭ ಯೋಗಗಳು ನಿರ್ಮಾಣಗೊಳ್ಳಲಿವೆ. ಇದರ ಶುಭ- ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಸೂರ್ಯ ಗ್ರಹಣದಂದು ನಿರ್ಮಾಣಗೊಳ್ಳಲಿರುವ ಈ ಶುಭ ಯೋಗಗಳು ಕೆಲವು ರಾಶಿಯವರಿಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿವೆ ಎಂದು ಹೇಳಲಾಗುತ್ತಿದೆ. 


ಸೂರ್ಯ ಗ್ರಹಣದಂದು ಪಂಚ ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಬಂಗಾರದಂತ ಸಮಯ: 
ಮಿಥುನ ರಾಶಿ: 

ಸೂರ್ಯ ಗ್ರಹಣದ ದಿನ ನಿರ್ಮಾಣಗೊಳ್ಳಲಿರುವ ಮಹಾ ಯೋಗಗಳಿಂದಾಗಿ ಮಿಥುನ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯವರು ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವರು. ಮಾತ್ರವಲ್ಲ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವವೂ ಪ್ರಾಪ್ತಿಯಾಗುತ್ತದೆ. 


ಇದನ್ನೂ ಓದಿ- ಶೀಘ್ರದಲ್ಲೇ ಈ ರಾಶಿಯವರ ತಿಜೋರಿ ತುಂಬಲಿದ್ದಾನೆ ಕೇತು


ಕರ್ಕಾಟಕ ರಾಶಿ: 
ವರ್ಷದ ಮೊದಲ ಸೂರ್ಯ ಗ್ರಹಣದಂಡು ರೂಪುಗೊಳ್ಳಲಿರುವ ಮಂಗಳಕರ ಯೋಗಗಳು ಕರ್ಕಾಟಕ ರಾಶಿಯವರ ಜೀವನದಲ್ಲಿ ಉತ್ತಮ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರು ವೃತ್ತಿ ರಂಗದಲ್ಲಿ ಹೊಸ ಉತ್ತುಂಗವನ್ನು ತಲುಪುವಿರಿ. ಮಾತ್ರವಲ್ಲ, ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಉತ್ತಮ ಲಾಭವನ್ನೂ ಗಳಿಸುವಿರಿ. 


ಸಿಂಹ ರಾಶಿ: 
2023ರ ಮೊದಲ ಸೂರ್ಯ ಗ್ರಹಣವು ಸಿಂಹ ರಾಶಿಯವರ ಪ್ರೀತಿಯ ಜೀವನದಲ್ಲಿ ಧನಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಸಿಂಹ ರಾಶಿಯ ಉದ್ಯೋಗಸ್ಥರು ಪ್ರಮೋಷನ್ ಪಡೆಯಬಹುದು. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದ್ದು ಭೂಮಿ, ವಾಹನ ಖರೀದಿ ಯೋಗವೂ ಇದೆ. 


ಧನು ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳಲಿರುವ ಶುಭ ಯೋಗಗಳು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಧನು ರಾಶಿಯವರಿಗೆ ಹಠಾತ್ ಧನ ಯೋಗದ ಅವಕಾಶವಿದೆ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಬಹುದು. 


ಇದನ್ನೂ ಓದಿ- ಈ ವರ್ಷ ಅಕ್ಷಯ ತೃತೀಯದಲ್ಲಿ ರೂಪುಗೊಳ್ಳಲಿದೆ 7 ಮಹಾನ್ ಯೋಗ


ಕುಂಭ ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳಲಿರುವ ಶುಭ ಯೋಗಗಳು ಕುಂಭ ರಾಶಿಯವರ ಜೀವನದಲ್ಲೂ ಒಳ್ಳೆಯ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ಹಣಕಾಸಿಗೆ ಸಂಬಂಧಿಸಿದಂತೆಯೂ ಸಮಯ ಅದ್ಭುತವಾಗಿದ್ದು, ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.