Surya Gochar 2023: ಕೆಲವೇ ಗಂಟೆಗಳಲ್ಲಿ 'ಬಲಶಾಲಿ' ಸ್ಥಿತಿಗೆ ಸೂರ್ಯನ ಪ್ರವೇಶ, ಈ ಜನರ ಮೇಲೆ ಅಪಾರ ಧನವೃಷ್ಟಿ!

Sun Transit 2023 Effect:  ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಪರಿವರ್ತಿಸುತ್ತಾನೆ. ಏಪ್ರಿಲ್ 14 ರಂದು ಸೂರ್ಯನು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರಾಶಿಚಕ್ರದಲ್ಲಿ ಸೂರ್ಯನು ತನ್ನ ಪ್ರಬಲ ಮತ್ತು ಬಲವಾದ ಸ್ಥಾನದಲ್ಲಿರುತ್ತಾನೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲ ರಾಶಿಚಕ್ರ ಚಿಹ್ನೆಗಳ ಸ್ಥಳೀಯರಿಗೆ ಇದು ತುಂಬಾ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಬನ್ನಿ ತಿಳಿದುಕೊಳ್ಳೋಣ,   

Written by - Nitin Tabib | Last Updated : Apr 13, 2023, 08:19 PM IST
  • ಏಪ್ರಿಲ್ 14 ರಂದು, ಸೂರ್ಯನು ದೇವಗುರು ಬೃಹಸ್ಪತಿಯ ಮೀನ ರಾಶಿಯಿಂದ ಹೊರಬಂದು
  • ಮಂಗಳನ ಅಧಿಪತ್ಯದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಈ ರಾಶಿಯಲ್ಲಿ ಸೂರ್ಯನನ್ನು ಬಲಶಾಲಿ ಎಂದು ಪರಿಗಣಿಸಲಾಗುತ್ತದೆ
Surya Gochar 2023: ಕೆಲವೇ ಗಂಟೆಗಳಲ್ಲಿ 'ಬಲಶಾಲಿ' ಸ್ಥಿತಿಗೆ  ಸೂರ್ಯನ ಪ್ರವೇಶ, ಈ ಜನರ ಮೇಲೆ ಅಪಾರ ಧನವೃಷ್ಟಿ! title=
ಸೂರ್ಯ ಸಂಕ್ರಮಣ 2023

Surya Gochar In Mesh 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯ ಪ್ರತಿ ತಿಂಗಳಿಗೆ ತನ್ನ ಸ್ಥಾನವನ್ನು ಪರಿವರ್ತಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಈ ಸಂಕ್ರಮಣ ಅನೇಕರಿಗೆ ಶುಭ ಫಲಿತಾಂಶಗಳನ್ನು ನೀಡಿದರೆ ಮತ್ತು ಕೆಲವರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ವೈಶಾಖ ಮಾಸದಲ್ಲಿ, ಏಪ್ರಿಲ್ 14 ರಂದು, ಸೂರ್ಯನು ದೇವಗುರು ಬೃಹಸ್ಪತಿಯ ಮೀನ ರಾಶಿಯಿಂದ ಹೊರಬಂದು ಮಂಗಳನ ಅಧಿಪತ್ಯದ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರಾಶಿಯಲ್ಲಿ ಸೂರ್ಯನನ್ನು ಬಲಶಾಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಕೆಲ ರಾಶಿಗಳ ಜಾತಕದವರ ಪಾಲಿಗೆ ಸೂರ್ಯನು ಈ ರಾಶಿಯಲ್ಲಿರುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಮೇ 15 ರವರೆಗೆ ಸೂರ್ಯನು ಈ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಈ ಅವಧಿಯಲ್ಲಿ ಯಾವ ರಾಶಿಯ ಜನರಿಗೆ ಯಾವ ಫಲಿತಾಂಶಗಳು ಪ್ರಾಪ್ತಿಯಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ : ಈ ಅವಧಿಯಲ್ಲಿ ಮೇಷ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಲೆನೋವು ಮತ್ತು ಮೂಳೆಗಳ ಸಮಸ್ಯೆಗಳು ಇತ್ಯಾದಿಗಳು ನಿಮ್ಮನ್ನು ತೊಂದರೆ ನೀಡಬಹುದು. ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರ ಮಂತ್ರವನ್ನು ಪಠಿಸುವುದರಿಂದ ಮಂಗಳಕರ ಫಲಿತಾಂಶಗಳಿಗೆ ಕಾರಣವಾಗಲಿದೆ.

ವೃಷಭ ರಾಶಿ : ಸೂರ್ಯ ಸಂಕ್ರಮಣದ ಸಮಯದಲ್ಲಿ ಈ ರಾಶಿಯವರಿಗೆ ಮಾನಸಿಕ ಆತಂಕ ಉಂಟಾಗಬಹುದು. ಧನ ಪ್ರಾಪ್ತಿಯಾಗಲಿದೆ, ಆದರೆ ಖರ್ಚು ಕೂಡ ಹೆಚ್ಚಾಗಲಿದೆ. ಕಣ್ಣುಗಳು ಮತ್ತು ಹೃದಯದ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಪ್ರತಿದಿನ ಬೆಲ್ಲ, ಗೋಧಿ ಮತ್ತು ಹಿಟ್ಟನ್ನು ದಾನ ಮಾಡಿ.

ಮಿಥುನ ರಾಶಿ : ಈ ಅವಧಿಯಲ್ಲಿ ಈ ಜನರಿಗೆ ಯಶಸ್ಸು ಮತ್ತು ಲಾಭದ ಸಾಧ್ಯತೆಗಳು ಗೋಚರಿಸುತ್ತಿವೆ. ಹಣ ಮತ್ತು ಸಾಲದ ಸ್ಥಿತಿ ಉತ್ತಮವಾಗಿರಲಿದೆ. ಸ್ಥಾನ ಪರಿವರ್ತನೆಯ ಸಾಧ್ಯತೆ ಇದೆ. ನಿತ್ಯವೂ ಸೂರ್ಯ ದೇವರಿಗೆ ಅರ್ಘ್ಯ  ಅರ್ಪಿಸುವುದರಿಂದ ಪ್ರಯೋಜನವಾಗಲಿದೆ.

ಕರ್ಕ ರಾಶಿ : ಈ ಅವಧಿಯಲ್ಲಿ ನಿಮ್ಮ ಸಂಪತ್ತು ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯಬಹುದು. ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ನಿತ್ಯವೂ ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವುದು ಉತ್ತಮ.

ಸಿಂಹ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಗಾಯದ ಹಿಡಿತಕ್ಕೆ ಸಿಲುಕಿಕೊಳ್ಳಬಹುದು. ಅಪಘಾತಗಳ ಬಗ್ಗೆ ಎಚ್ಚರದಿಂದಿರಿ. ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಬೇಡಿ. ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ಪ್ರತಿದಿನ ಬೆಲ್ಲ, ಗೋಧಿ ಮತ್ತು ಹಿಟ್ಟನ್ನು ದಾನ ಮಾಡಿ.

ಕನ್ಯಾರಾಶಿ : ಈ ಅವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಪಘಾತಗಳಿಂದ ದೂರವಿರಿ. ಕೌಟುಂಬಿಕ ಸಮಸ್ಯೆಗಳು ಜೀವನದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲಿವೆ. ಈ ಸಮಯದಲ್ಲಿ, ದೂರದ ಪ್ರಯಾಣದ ಬಗ್ಗೆ ಜಾಗರೂಕರಾಗಿರಿ. ಸೂರ್ಯ ದೇವರ ಮಂತ್ರವನ್ನು ಪಠಿಸುತ್ತಿರಿ.

ವೃಶ್ಚಿಕ ರಾಶಿ : ಈ ರಾಶಿಯ ಜಾತಕದವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವ ಎಲ್ಲಾ ಸಾಧ್ಯತೆಗಳಿವೆ. ಆರೋಗ್ಯ ಮತ್ತು ಮಾನಸಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ ವೇಳೆ. ಜೀವನದಲ್ಲಿ ಬರುವ ಕಷ್ಟಗಳು ದೂರಾಗಲಿವೆ. ಸೂರ್ಯ ದೇವರಿಗೆ ಪ್ರತಿನಿತ್ಯ ಅರ್ಘ್ಯ ಅರ್ಪಿಸುವುದರಿಂದ ಪ್ರಯೋಜನವಾಗಲಿದೆ.

ಧನು ರಾಶಿ : ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಠಾತ್ ವರ್ಗಾವಣೆಯ ಸಾಧ್ಯತೆಗಳಿವೆ. ಮಕ್ಕಳು ಮತ್ತು ಆರೋಗ್ಯದ ಸಮಸ್ಯೆಗಳ ಬಗ್ಗೆ ವ್ಯಕ್ತಿಯು ಜಾಗರೂಕರಾಗಿರಬೇಕು. ಬೆಲ್ಲ, ಗೋಧಿ ಮತ್ತು ಹಿಟ್ಟನ್ನು ದಾನ ಮಾಡುವುದರಿಂದ ಪ್ರಯೋಜನವಾಗಲಿದೆ.

ಮಕರ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಉನ್ನತ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ನಿರ್ಲಕ್ಷ್ಯ ವಹಿಸಬೇಡಿ. ಪ್ರತಿದಿನ ಸೂರ್ಯ ದೇವರ ಮಂತ್ರಗಳನ್ನು ಪಠಿಸಿ.

ಇದನ್ನೂ ಓದಿ-Shani Dev: ಕೆಲವೇ ಗಂಟೆಗಳ ಬಳಿಕ 3 ರಾಶಿಗಳ ಮೇಲೆ ಶನಿಯ ಕೃಪಾವೃಷ್ಟಿ, ಶುಭ ದಶಮ ದೃಷ್ಟಿಯಿಂದ ಅಪಾರ ಧನ ಪ್ರಾಪ್ತಿಯ ಯೋಗ!

ಕುಂಭ ರಾಶಿ : ಈ ಅವಧಿಯಲ್ಲಿ ಸ್ಥಗಿತಗೊಂಡ ಕೆಲಸಗಳಿಗೆ ಪುನಃ ಚಾಲನೆ ಸಿಗಲಿದೆ. ಶತ್ರುಗಳೂ ಹಾಗೂ ವಿರೋಧಿಗಳ ಮೇಲೆ ಜಯ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸ್ಥಾನಮಾನ, ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರತಿದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.

ಇದನ್ನೂ ಓದಿ-Mars Transit 2023: ಮೇ 10 ರಂದು ಚಂದಿರನ ಅಂಗಳಕ್ಕೆ ಮಂಗಳನ ಪ್ರವೇಶ, 3 ರಾಶಿಗಳ ಜನರ ಜೀವನದಲ್ಲಿ ಕಾಂಚಾಣದ ಭಾರಿ ಝಣಝಣ!

ಮೀನ ರಾಶಿ: ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು, ವಿಶೇಷವಾಗಿ ಅಂತಹ ಸಂದರ್ಭಗಳಲ್ಲಿ, ಜಾಗರೂಕರಾಗಿರಿ. ವೃತ್ತಿಜೀವನದಲ್ಲಿ ವಿವಾದಗಳು ಮತ್ತು ತ್ವರಿತ ನಿರ್ಧಾರಗಳಿಂದ ಅಂತರ ಕಾಯ್ದುಕೊಳ್ಳಿ. ಕಣ್ಣು ಮತ್ತು ತಲೆನೋವಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಸೂರ್ಯ ದೇವರ ಮಂತ್ರವನ್ನು ಪಠಿಸುವುದರಿಂದ ಪ್ರಯೋಜನವಾಗಲಿದೆ.

ಇದನ್ನೂ ಓದಿ-Sun Transit In Aries 2023: ನಾಳೆ ಮಂಗಳನ ಮನೆಗೆ ಸೂರ್ಯನ ಪ್ರವೇಶ, 5 ರಾಶಿಗಳ ಜನರ ಜೀವನದಲ್ಲಿ ಭಾರಿ ಹಲ್ಚಲ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News