Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಗಳಿಕೆಗೆ ಉತ್ತಮ ಅವಕಾಶಗಳು ಲಭ್ಯವಾಗಲಿದ್ದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಬಹುಕಾಲದ ನಿಮ್ಮ ಯೋಜನೆಗಳು ಇಂದು ಕಾರ್ಯರೂಪಕ್ಕೆ ಬರಲಿವೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ವೈವಾಹಿಕ ಜೀವನದ ಸಂತೋಷದ ಕ್ಷಣಗಳನ್ನು ನೀವು ಆನಂದಿಸುವಿರಿ. ಹೊಸ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗಿ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಶುದ್ಧವಾದ ಮನಸ್ಸೇ ನಿಮಗೆ ದಾರಿ ದೀಪ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಸಮಾಜದಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಪ್ರೀತಿ, ಸಹಕಾರದ ಭಾವನೆ ಇರುತ್ತದೆ. ಕುಟುಂಬ ಸದಸ್ಯರಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಸ್ವಲ್ಪ ಜಾಗರೂಕರಾಗಿರಬೇಕು. ಹಠಾತ್ ಲಾಭ ಬರಬಹುದು, ಆದರೆ ದುಂದು ವೆಚ್ಚವನ್ನು ನಿಯಂತ್ರಿಸದಿದ್ದರೆ ಎಷ್ಟೇ ಹಣ ಬಂದರೂ ಕೈಯಲ್ಲಿ ನಿಲ್ಲುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಹೂಡಿಕೆಗೆ ಉತ್ತಮ ದಿನ. 


ಇದನ್ನೂ ಓದಿ- Weekly Horoscope: ಗೌರಿ ಯೋಗದಿಂದ ಈ ವಾರ ಕೆಲ ರಾಶಿಯವರಿಗೆ ಭಾರೀ ಅದೃಷ್ಟ, ಮನೆ ಖರೀದಿ ಯೋಗ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನೀವು ಕೆಲವು ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಆದರೆ, ನಿಮ್ಮ ಸುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಿ. ಮಕ್ಕಳ ಕಡೆಯಿಂದ ಶುಭ ಸುದ್ದಿ ಸ್ವೀಕರಿಸುವಿರಿ. ಕೆಲಸದಲ್ಲಿ ಸಮಸ್ಯೆಗಳು ನಿಮ್ಮ ಚಿಂತೆಗೆ ಕಾರಣವಾಗಬಹುದು. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಅತ್ಯಂತ ಫಲಪ್ರದವಾದ ದಿನ. ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ಆಯೋಜಿಸಬಹುದು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಹಣಕಾಸಿನ ವಿಷಯಗಳು ಸುಧಾರಿಸಲಿವೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಅದೃಷ್ಟದ ದೃಷ್ಟಿಯಿಂದ ಇದು ನಿಮಗೆ ಒಳ್ಳೆಯ ದಿನ. ನಿಮ್ಮ ಆದಾಯ ಹೆಚ್ಚಾದಂತೆ ಸಂತೋಷವೂ ಹೆಚ್ಚಾಗಲಿದೆ. ನಿಮ್ಮ ಪ್ರತಿ ಕೆಲಸದಲ್ಲಿ ಕುಟುಂಬಸ್ಥರ ಸಂಪೂರ್ಣ ಬೆಂಬಲ ದೊರೆಯಲಿದೆ. ಮಕ್ಕಳು ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಗಳಿದ್ದಾರೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮಗೆ ಮಿಶ್ರ ಫಲಗಳಿಂದ ಕೂಡಿದ ದಿನ. ರಾಜಕೀಯ ಬದುಕಿನಲ್ಲಿರುವವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ನಿಮ್ಮ ಮಾತೇ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಕೆಲವು ಪ್ರಮುಖ ಕೆಲಸಗಳಲ್ಲಿ ಚಿಂತನಶೀಲರಾಗಿ ವರ್ತಿಸಿ. 


ಇದನ್ನೂ ಓದಿ- ಬಾತ್‌ರೂಮ್‌ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...! 


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕುಟುಂಬ ಸದಸ್ಯರಿಂದ ನಿಮ್ಮ ನಿರೀಕ್ಷೆಗೂ ಮೀರಿದ ಉಡುಗೊರೆ ದೊರೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ.  ಸರ್ಕಾರದ ಯೋಜನೆಗಳಲ್ಲಿ ಲಾಭ ಸಿಗಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮಗೆ ವಿಶೇಷವಾದ ದಿನ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವಾಗ ಖರ್ಚುಗಳನ್ನು ಸರಿಯಾಗಿ ನಿರ್ವಹಿಸಿ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ತಾಯಿಯೊಂದಿಗಿನ ಸಂಬಂಧ ಸುಧಾರಿಸಲಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಬಹುಕಾಲದ ನಿಮ್ಮ ಕನಸುಗಳಿಗೆ ರೆಕ್ಕೆ ದೊರೆಯಲಿದೆ. ಕೆಲಸದಲ್ಲಿ ಒತ್ತಡದ ಹೊರತಾಗಿಯೂ ನೀವು ಯಶಸ್ವಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವೀರ್. ಮಾತು ಮತ್ತು ನಾದವಳಿಕೆಯನ್ನು ನಿಯಂತ್ರಿಸಿದರೆ ಒಳಿತು. 


ಮೀನ ರಾಶಿಯವರ ಭವಿಷ್ಯ (Pisces Horoscope): 
ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಮೂಡಿದ್ದ ಬಿರುಕುಗಳು ಸರಿಹೋಗಲಿವೆ. ಮಕ್ಕಳೊಂದಿಗೆ ಮೋಜಿನ ಸಮಯವನ್ನು ಆನಂದಿಸುವಿರಿ. ಮಕ್ಕಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದರಿಂದ ಮನಸ್ಸಿಗೆ ಸಂತೋಷ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.