Astrology Tips: ಉತ್ತಮ ಆರೋಗ್ಯ, ಕೂದಲಿನ ಆರೈಕೆಗೆ ಮಾತ್ರವಲ್ಲ  ನೆತ್ತಿ ತಂಪಾಗಿರಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ತಲೆಗೆ ಎಣ್ಣೆ ಹಚ್ಚುವಂತೆ ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ನೆತ್ತಿಗೆ ಹಾಗೂ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಆಯಾಸ ದೂರವಾಗಿ ಮನಸ್ಸು ಹಗುರವೆನಿಸುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೂದಲಿಗಾಗಲಿ ಅಥವಾ ದೇಹಕ್ಕಾಗಲಿ ಎಣ್ಣೆ ಹಚ್ಚುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರಲ್ಲೂ ಮುಖ್ಯವಾಗಿ ಯಾವ ವಾರ ಎಣ್ಣೆಯನ್ನು ಹಚ್ಚಬೇಕು? ವಾರದ ಯಾವ ದಿನದಂದು ಎಣ್ಣೆ ಹಚ್ಚಬಾರದು ಎಂಬ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಜ್ಯೋತಿಷ್ಯದಲ್ಲಿ ವಾರದ ಕೆಲವು ದಿನಗಳಲ್ಲಿ ಎಣ್ಣೆ ಹಚ್ಚುವುದನ್ನು ನಿಷೇಧಿಸಲಾಗಿದೆ. ಈ ದಿನಗಳಲ್ಲಿ ತಲೆ ಮತ್ತು ದೇಹಕ್ಕೆ ಎಣ್ಣೆ ಹಚ್ಚಿದರೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಎಂದೂ ಸಹ ಹೇಳಲಾಗುತ್ತದ. ಹಾಗಿದ್ದರೆ, ಯಾವ ವಾರಗಳಂದು ಕೂದಲಿಗೆ, ಮೈಗೆ ಎಣ್ಣೆ ಹಚ್ಚಬಾರದು ಎಂದು ತಿಳಿಯಿರಿ.


ವಾರದ ಈ ದಿನಗಳಲ್ಲಿ ತಲೆಗೆ, ಮೈಗೆ ಎಣ್ಣೆ ಹಚ್ಚುವುದರಿಂದ ಆರ್ಥಿಕ ಸಂಕಷ್ಟ: 
ಭಾನುವಾರದಂದು ತಲೆ ಮತ್ತು ದೇಹಕ್ಕೆ ಎಣ್ಣೆ ಹಚ್ಚಬಾರದು:

ಸಾಮಾನ್ಯವಾಗಿ ರಜೆಯ ದಿನ ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಭಾನುವಾರದಂದು ಕೂದಲಿ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವನಿಗೆ ಮೀಸಲಾಗಿರುವ ಭಾನುವಾರದಂದು ಯಾವುದೇ ಕಾರಣಕ್ಕೂ ತಲೆ ಮತ್ತು ದೇಹಕ್ಕೆ ಎಣ್ಣೆ ಹಚ್ಚಬಾರದು. ಇದರಿಂದ ಉಷ್ಣತೆಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಈ ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ!


ಮಂಗಳವಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ಕೂದಲಿಗೆ ಎಣ್ಣೆ ಹಚ್ಚುವುದು ಅಶುಭಕರ. ಇದರಿಂದ ಆಯಸ್ಸು ಕಡಿಮೆ ಆಗುತ್ತದೆ ಎಂಬ ನಂಬಿಕೆ ಇದೆ.


ಗುರುವಾರ:
ಗುರುವಾರ ಅಥವಾ ಬೃಹಸ್ಪತಿ ವಾರದಂದೂ ಕೂಡ ಕೂದಲಿಗಾಗಲಿ ಅಥವಾ ದೇಹಕ್ಕಾಗಲಿ ಎಣ್ಣೆ ಹಚ್ಚಬಾರದು. ಇದರಿಂದ ವ್ಯಕ್ತಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Surya Gochar 2022: ಧನು ಸಂಕ್ರಾಂತಿಯಂದು ಈ ಪರಿಹಾರ ಮಾಡಿದರೆ ಸೂರ್ಯನಂತೆ ಹೊಳೆಯುತ್ತೆ ಅದೃಷ್ಟ


ಶುಕ್ರವಾರ:
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಲಕ್ಷ್ಮಿಯ ವಾರ ಎಂದು ಶುಕ್ರವಾರದಂದು ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರದಂದು ಎಣ್ಣೆ ಹಚ್ಚಿ ತಲೆ ತೊಳೆಯಬಾರದು. ಇದರಿಂದ ಆ ವ್ಯಕ್ತಿಯ ಜೀವನದಲ್ಲಿ ಋಣಾತ್ಮಕತೆ ಹೆಚ್ಚಾಗಿ, ಹಣಕಾಸಿನ ನಷ್ಟ ಉಂಟಾಗಬಹುದು ಎನ್ನಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.