Trigrahi Yog December 2022: ಡಿಸೆಂಬರ್ 16ರಂದು ರಚನೆಯಾಗಲಿರುವ ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಹಣದ ಸುರಿಮಳೆ

Trigrahi Yog December 2022 Effect: ಗ್ರಹಗಳ ರಾಜ ಸೂರ್ಯ ದೇವನು ಇನ್ನೆರಡು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ತ್ರಿಗ್ರಾಹಿ ಯೋಗವನ್ನೂ ರೂಪಿಸುತ್ತಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯಿಂದ ರಚನೆಯಾಗುತ್ತಿರುವ ತ್ರಿಗ್ರಾಹಿ ಹೋಗವು ನಾಲ್ಕು ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ತ್ರಿಗ್ರಾಹಿ ಯೋಗವು ಯಾವ ರಾಶಿಯವರಿಗೆ ಶುಭ ಫಲಗಳನ್ನು ದೊರೆಯಲಿದೆ ಎಂದು ತಿಳಿಯಿರಿ. 

Written by - Yashaswini V | Last Updated : Dec 13, 2022, 07:50 AM IST
  • ಈಗಾಗಲೇ ಧನು ರಾಶಿಯಲ್ಲಿರುವ ಬುಧ-ಶುಕ್ರರು ಲಕ್ಷ್ಮೀನಾರಾಯಣ ಯೋಗವನ್ನು ರೂಪಿಸಿದ್ದಾರೆ.
  • ಡಿಸೆಂಬರ್ 16ರಂದು ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ.
  • ಈ ಯೋಗವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ ನಾಲ್ಕು ರಾಶಿಯವರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ
Trigrahi Yog December 2022: ಡಿಸೆಂಬರ್ 16ರಂದು ರಚನೆಯಾಗಲಿರುವ ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಹಣದ ಸುರಿಮಳೆ  title=
Trigrahi Yog December 2022 Effect

Trigrahi Yog December 2022 Effect: ಇನ್ನೆರಡು ದಿನಗಳ ಬಳಿಕ 2022ರ ಡಿಸೆಂಬರ್ 16 ರಂದು ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಧನು ರಾಶಿಯಲ್ಲಿ ಬುಧ-ಶುಕ್ರರು ನೆಲೆಸಿದ್ದಾರೆ. ಇದರಿಂದಾಗಿ ಡಿಸೆಂಬರ್ 16ರಂದು ಸೂರ್ಯನ ರಾಶಿ ಪರಿವರ್ತನೆಯೊಂದಿಗೆ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. 

ತ್ರಿಗ್ರಾಹಿ ಯೋಗ ಡಿಸೆಂಬರ್ 2022:
ಈಗಾಗಲೇ ಧನು ರಾಶಿಯಲ್ಲಿರುವ ಬುಧ-ಶುಕ್ರರು  ಲಕ್ಷ್ಮೀನಾರಾಯಣ ರಾಜ ಯೋಗವನ್ನು ರೂಪಿಸಿದ್ದಾರೆ. ಡಿಸೆಂಬರ್ 16ರಂದು ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. ಈ ಯೋಗವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ ನಾಲ್ಕು ರಾಶಿಯವರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತ್ರಿಗ್ರಾಹಿ ಯೋಗದಿಂದ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆಯೇ ಆಗಲಿದೆ. ಕೆಲವರಿಗೆ ಮನೆ-ವಾಹನ ಖರೀದಿ ಯೋಗವಿದೆ. ಕೆಲ ರಾಶಿಯವರಿಗೆ ವೃತ್ತಿ ರಂಗದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯತೆ, ಕೆಲವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಹರಸಿ ಬರಲಿದೆ.  ಇನ್ನೂ ಕೆಲವರಿಗೆ ತಮ್ಮ ಇಚ್ಛೆಗೆ ಅನುಗುಣವಾಗಿ ಉದ್ಯೋಗ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ವೃಷಭ ರಾಶಿಯವರಿಗೆ ಮನೆ-ವಾಹನ ಖರೀದಿ ಯೋಗ: 
2022ರ ಕೊನೆಯ ಮಾಸದಲ್ಲಿ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವು ವೃಷಭ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತಿದೆ. ನಿಮ್ಮ ವಾಕ್ಚಾತುರ್ಯದಿಂದ ನೀವು ನಿಮ್ಮ ಕೆಲಸ-ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ನಿಮ್ಮ ಮಾತಿನ ಮೋಡಿಗೆ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ಆದಾಯ ಉತ್ತಮವಾಗಿರಲಿದೆ. ಆದಾಗ್ಯೂ, ನಿಮ್ಮ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿ, ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆ ಆಗಬಹುದು.  ಈ ಸಮಯದಲ್ಲಿ ನೀವು ಭೂಮಿ-ವಾಹನ ಖರೀದಿಸುವ ಯೋಗವೂ ಇದೆ. 

ಇದನ್ನೂ ಓದಿ- Sun Transit 2022 Effect: ಸೂರ್ಯ ದೇವನ ಆಶೀರ್ವಾದಿಂದ ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ ಈ ರಾಶಿಯವರು

ತುಲಾ ರಾಶಿಯವರಿಗೆ ವೃತ್ತಿ ರಂಗದಲ್ಲಿ ಪ್ರಗತಿ:
ಧನು ರಾಶಿಯಲ್ಲಿ ಸೂರ್ಯ ರಾಶಿ ಪರಿವರ್ತನೆಯಿಂದ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗದ ಪರಿಣಾಮವಾಗಿ ತುಲಾ ರಾಶಿಯವರು ವೃತ್ತಿ ರಂಗದಲ್ಲಿ ಸಾಕಷ್ಟು ಪ್ರಗತಿ ಕಾಣಬಹುದಾಗಿದೆ. ಇದರಿಂದ ಆರ್ಥಿಕವಾಗಿ ಬಂಪರ್ ಲಾಭವಾಗುವ ಸಾಧ್ಯತೆಯೂ ಇದೆ. ಅದರಲ್ಲೂ  ವಿಶೇಷವಾಗಿ ಸಾಮಾಜಿಕ ಮಾಧ್ಯಮ, ಮಾರ್ಕೆಟಿಂಗ್ ಅಥವಾ ಸಲಹಾ ಕೆಲಸದಲ್ಲಿ ತೊಡಗಿರುವ ಜನರು ತಮ್ಮ ಸಂವಹನ ಕೌಶಲ್ಯದಿಂದಾಗಿ ಬಹಳಷ್ಟು ಪ್ರಯೋಜನ ಪಡೆಯಲಿದ್ದಾರೆ.  

ಧನು ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಜವಾಬ್ದಾರಿ:
ಧನು ರಾಶಿಯಲ್ಲಿಯೇ ಸೂರ್ಯನ ಸಂಕ್ರಮಣ ನಡೆಯಲಿದ್ದು ಇದೇ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವು ನಿಮ್ಮ ಮೇಲೆ ಗರಿಷ್ಠ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಇದರಿಂದ ಆರ್ಥಿಕ ಲಾಭವೂ ಇದೆ. ಜೊತೆಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. 

ಇದನ್ನೂ ಓದಿ- ಬುಧ-ಶುಕ್ರ ಸಂಕ್ರಮಣದಿಂದ ಲಕ್ಷ್ಮೀನಾರಾಯಣ ಯೋಗ, ಬೆಳಗಲಿದೆ ಈ ರಾಶಿಯವರ ಅದೃಷ್ಟ

ಮೀನ ರಾಶಿಯವರಿಗೆ ಇಚ್ಛೆಯ ಉದ್ಯೋಗ ಪ್ರಾಪ್ತಿ:
ತ್ರಿಗ್ರಾಹಿ ಯೋಗವು ಮೀನ ರಾಶಿಯವರಿಗೆ ಇಚ್ಚೆಯ ಉದ್ಯೋಗವನ್ನು ಕರುಣಿಸಲಿದೆ. ಈಗಾಗಲೇ ಉದ್ಯೋಗ ಮಾಡುತ್ತಿರುವವರಿಗೆ ನಿಮ್ಮ ಬಹುದಿನದ ಪ್ರಮೋಷನ್ ಆಸೆ ನೆರವೇರಬಹುದು. ಆದರೆ, ನೆನಪಿಡಿ, ಅಧಿಕಾರದ ಅಹಂನಲ್ಲಿ ಯಾವುದೇ ವಿವಾದಕ್ಕೆ ಸಿಲುಕುವುದನ್ನು ತಪ್ಪಿಸಿ. ಹಣಕಾಸಿನ ವ್ಯವಹಾರದಲ್ಲೂ ಅನಾವಶ್ಯಕ ಖರ್ಚು-ವೆಚ್ಚಗಳನ್ನು ತಪ್ಪಿಸಿ ಸಾಲದಿಂದ ದೂರ ಉಳಿಯುವುದು ಒಳಿತು.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News