Surya Gochar 2022: ಧನು ಸಂಕ್ರಾಂತಿಯಂದು ಈ ಪರಿಹಾರ ಮಾಡಿದರೆ ಸೂರ್ಯನಂತೆ ಹೊಳೆಯುತ್ತೆ ಅದೃಷ್ಟ

Dhanu Sankranti Upay: ಇದೇ 2022ರ ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯ ಧನು ರಾಶಿಯನ್ನು ಪ್ರವೆಶಿಸಲಿದ್ದಾನೆ. ಇದನ್ನು ಧನು ಸಂಕ್ರಾಂತಿ ಎಂದೂ ಸಹ ಕರೆಯಲಾಗುತ್ತದೆ. ಧನು ಸಂಕ್ರಾಂತಿಯಂದು ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ಪರಿಹಾರಗಳನ್ನು ಮಾಡುವುದರಿಂದ ಜೀವನದ ಸಕಲ ಸುಖ-ಸಂತೋಷವು ನಿಮ್ಮ ಮುಷ್ಟಿಯಲ್ಲೇ ಇರುತ್ತದೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Dec 13, 2022, 02:56 PM IST
  • ಧರ್ಮ ಗ್ರಂಥಗಳ ಪ್ರಕಾರ, ಧನುರ್ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
  • ಧನು ಸಂಕ್ರಾಂತಿಯಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿ.
  • ಧನುರ್ ಮಾಸದಲ್ಲಿ ಸಾಧ್ಯವಾದಷ್ಟು ಗಾಯತ್ರಿ ಮಂತ್ರವನ್ನು ಪಠಿಸಿ.
Surya Gochar 2022: ಧನು ಸಂಕ್ರಾಂತಿಯಂದು ಈ ಪರಿಹಾರ ಮಾಡಿದರೆ ಸೂರ್ಯನಂತೆ ಹೊಳೆಯುತ್ತೆ ಅದೃಷ್ಟ  title=
Dhanu Sankranti

Dhanu Sankranti Upay: ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎಂದು ಬಣ್ಣಿಸಲಾಗಿದೆ. ಸೂರ್ಯನು ಪ್ರತಿ ತಿಂಗಳು ಒಂದು ನಿರ್ದಿಷ್ಟ ಕಾಲದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದನ್ನು ಸೂರ್ಯ ಸಂಕ್ರಮಣ ಎಂದು ಹೇಳಲಾಗುತ್ತದೆ. ಸದ್ಯ ವೃಶ್ಚಿಕ ರಾಶಿಯಲ್ಲಿರುವ ಸೂರ್ಯನು ಇದೇ 16 ಡಿಸೆಂಬರ್ 2022ರ ಶುಕ್ರವಾರದಂದು ಧನು ರಾಶಿಯನ್ನು ಪ್ರವೆಶಿಸಲಿದ್ದಾನೆ. ಧನು ರಾಶಿಗೆ ಸೂರ್ಯನ ಪ್ರವೇಶವನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. 16 ಡಿಸೆಂಬರ್ 2022 ರಿಂದ 14 ಜನವರಿ 2023ರವರೆಗೆ ಸೂರ್ಯನು ಧನು ರಾಶಿಯಲ್ಲಿಯೇ ಇರುತ್ತಾನೆ. ಇದನ್ನು ಧನುರ್ ಮಾಸ ಎಂತಲೂ ಕರೆಯಲಾಗುತ್ತದೆ. ಧನುರ್ ಮಾಸವನ್ನು ಯಾವುದೇ ಶುಭ ಕೆಲಸಗಳಿಗೆ ಮಂಗಳಕರ ಸಮಯ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಧನು  ಸಂಕ್ರಾಂತಿಯ ಈ ಸಮಯದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಭವಿಷ್ಯವು ಸೂರ್ಯನಂತೆಯೇ ಹೊಳೆಯುತ್ತದೆ ಎಂಬ ನಂಬಿಕೆ ಇದೆ.  

ನಿಮ್ಮೆಲ್ಲಾ ಕಷ್ಟ-ಕಾರ್ಪಣ್ಯಗಳಿಂದ ಹೊರಬರಲು ಧನು ಸಂಕ್ರಾಂತಿಯಲ್ಲಿ ಈ ಪರಿಹಾರಗಳನ್ನು ಕೈಗೊಳ್ಳಿ:
* ಧರ್ಮ ಗ್ರಂಥಗಳ ಪ್ರಕಾರ, ಧನು ಸಂಕ್ರಾಂತಿ ಅಥವಾ ಧನುರ್ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ, ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

* ಜ್ಯೋತಿಷ್ಯದ ಪ್ರಕಾರ, ಸೂರ್ಯನಿಗೆ ನಿತ್ಯ ಅರ್ಘ್ಯವನ್ನು ಅರ್ಪಿಸಬೇಕು. ಒಂದೊಮ್ಮೆ ನೀವು ನಿತ್ಯ ಅರ್ಘ್ಯ ಅರ್ಪಿಸದಿದ್ದರೂ ಧನುರ್ ಮಾಸದಲ್ಲಿ ಈ ಕೆಲಸವನ್ನು ತಪ್ಪದೇ ಮಾಡಿ. 

* ಧನು ಸಂಕ್ರಾಂತಿಯಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿ. ಮಹಾಮೃತ್ಯುಜಯ ಮಂತ್ರವನ್ನೂ ಪಠಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ತಲೆದೂರಿರುವ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಇದನ್ನೂ ಓದಿ- Trigrahi Yog: ಡಿಸೆಂಬರ್ 16ರಂದು ರಚನೆಯಾಗಲಿರುವ ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಹಣದ ಮಳೆ

* ಧನು ಸಂಕ್ರಾಂತಿಯಲ್ಲಿ ಭಗವಾನ್ ವಿಷ್ಣು ಮತ್ತು ತಾಯಿ ಮಹಾಲಕ್ಷ್ಮಿಯನ್ನು ಪೂಜಿಸಿ. ಅಗತ್ಯವಿರುವವರಿಗೆ, ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ. ಇದರಿಂದ ಲಕ್ಷ್ಮಿಯ ಅಪಾರ ಆಶೀರ್ವಾದ ಪ್ರಾಪ್ತಿಯಾಗಿ ನಿಮ್ಮ ನಿದ್ರಿಸುತ್ತಿರುವ ಅದೃಷ್ಟವು ಎಚ್ಚರಗೊಳ್ಳುತ್ತದೆ. 

* ಧನು ಸಂಕ್ರಾಂತಿಯಲ್ಲಿ ಉಪ್ಪನ್ನು ತ್ಯಜಿಸುವುದು ಉತ್ತಮ. ಈ ಸಮಯದಲ್ಲಿ ಉಪ್ಪು ಸೇವಿಸದಿದ್ದರೆ ಪೂರ್ವಜರ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟ-ಕಾರ್ಪಣ್ಯಗಳೆಲ್ಲವೂ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

ಇದನ್ನೂ ಓದಿ- Sun Transit 2022 Effect: ಸೂರ್ಯ ದೇವನ ಆಶೀರ್ವಾದಿಂದ ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ ಈ ರಾಶಿಯವರು

* ಧನುರ್ ಮಾಸದಲ್ಲಿ ಸಾಧ್ಯವಾದಷ್ಟು ಗಾಯತ್ರಿ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಇಷ್ಟಾರ್ಥಗಳೆಲ್ಲವೂ ನೆರವೇರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News