Somavara Dina Bhavishya In Kannada: ಶ್ರೀ ಶಾಲಿವಾಣ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ  ಸೋಮವಾರ ಸ್ವಾತಿ ನಕ್ಷತ್ರ, ಸಿದ್ಧ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವಿರಿ. ಭವಿಷ್ಯದ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವಿರಿ. ಸಂದರ್ಶನ ನೀಡಲು ತೆರಳುವವರಿಗೆ ಇಂದು ಯಶಸ್ಸಿನ ಸಾಧ್ಯತೆಗಳಿವೆ.


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಅನುಕೂಲಕರವಾದ ದಿನ. ಬಿಸಿನೆಸ್ ಸಂಬಂಧಿತ ಪ್ರವಾಸಗಳು ಫಲಪ್ರದವಾಗಿರುತ್ತದೆ. ನಿಮ್ಮ ಸಂಗಾತಿಯು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ದಿನದ ಆರಂಭವು ಉತ್ಸಾಹದಿಂದ ಕೂಡಿರಲಿದೆ. ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ಕೆಲವು ಗುಪ್ತ ವಿರೋಧಿಗಳು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ಆದಾಗ್ಯೂ, ಅವರು ಜಯ ಸಾಧಿಸಲು ಸಾಧ್ಯವಾಗುವುದಿಲ್ಲ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು  ಸಂತೋಷದಿಂದ ಕೂಡಿದ ದಿನ. ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಹೊಸ ವ್ಯವಹಾರಕ್ಕೆ ಕೈ ಹಾಕಲು ಯೋಚಿಸುತ್ತಿದ್ದರೆ ದಿನವು ಅತ್ಯುತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. 


ಇದನ್ನೂ ಓದಿ- Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ದಿನದ ಆರಂಭವು ಉತ್ತಮವಾಗಿರಲಿದೆ. ಸಂಜೆ ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗಿಯಾಗಬಹುದು. ಬಿಲ್ಡರ್‌ಗಳಿಗೆ ಹೊಸ ಒಪ್ಪಂದಗಳು ಹೆಚ್ಚಿನ ಲಾಭವನ್ನು ತರುತ್ತವೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ಅನುಕೂಲಕರ ದಿನ. ಸಹೋದ್ಯೋಗಿಗಳ ಸಹಕಾರದಿಂದ ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಿರಿ. ವೃತ್ತಿ ಬದುಕಿನಲ್ಲಿ ಹಠಾತ್ ಬದಲಾವಣೆಗಳು ನಿಮ್ಮನ್ನು ಗೊಂದಲಗೊಳಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಆರ್ಥಿಕವಾಗಿ ಫಲಪ್ರದವಾಗಿರಲಿದೆ. ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತವೆ. ನಿಮ್ಮ ಸಾಮಾಜಿಕ ನೆಟ್‌ವರ್ಕ್ ಬಲವಾಗಿ ಉಳಿಯುತ್ತದೆ.


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮಗೆ ವಿಶೇಷವಾಗಿದ್ದು, ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿದೆ. ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು ಆನಂದಿಸುವಿರಿ. ನೀವು ಇಂದು ಆರ್ಥಿಕವಾಗಿ ಯಶಸ್ಸನ್ನು ಪಡೆಯುತ್ತೀರಿ. 


ಇದನ್ನೂ ಓದಿ- Guru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮಗೆ ಉತ್ತಮ ದಿನ. ಉದ್ಯೋಗ ಕ್ಷೇತ್ರದಲ್ಲಿ ನೀವು ಹೊಸ ಮೈಲುಗಲ್ಲನ್ನು ಸಾಧಿಸಲು ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಹೊರಗಡೆ ಹೋಗಲು ಯೋಜಿಸಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಉತ್ಸಾಹದಿಂದ  ಕೂಡಿದ ದಿನ ಇದಾಗಿದೆ. ವಿವಾಹಿತರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ವ್ಯಾಪಾರ ವ್ಯವಹಾರದಲ್ಲಿ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಹಿತ ಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಸಾಮಾನ್ಯವಾದ ದಿನ. ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ಹೋಗಬಹುದು. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದರೆ ಇಂದು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಕೆಲಸ-ಕಾರ್ಯಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಹೊಸ ವ್ಯವಹಾರಕ್ಕಾಗಿ ಚಿಂತಿಸುತ್ತಿದ್ದರೆ ಉತ್ತಮ ದಿನ. ರಾಜಕೀಯಕ್ಕೆ ಸಂಬಂಧಿಸಿದ ಜನರ ಗೌರವ ಹೆಚ್ಚಾಗುತ್ತದೆ. ಪಕ್ಷದಲ್ಲಿ ಉನ್ನತ ಸ್ಥಾನವನ್ನೂ ಪಡೆಯಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.