Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಅತಿಗಂಡ ಯೋಗ, ವಣಿಜ ಕರಣ. ಎಲ್ಲಾ 12 ರಾಶಿಗಳ ಇಂದಿನ ಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗಿಂದು ಉತ್ತಮ ದಿನ. ವ್ಯವಹಾರದಲ್ಲಿ, ಯೋಜಿತ ಕೆಲಸಗಳಲ್ಲಿ ಯಶಸ್ಸು. ಅನುಭವಿಯಾಲ ಮಾರ್ಗದರ್ಶನದಿಂದ ಪ್ರಗತಿಯ ಹಾದಿ ಸುಗಮವಾಗಲಿದೆ. ಇಂದು ನಿಮ್ಮ ಆದಾಯ ಉತ್ತಮವಾಗಿರಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ಆದರೂ, ಇಂದು ಸಂತೋಷದ ದಿನ ನಿಮಗಾಗಿ ಕಾದಿದೆ. ಹೊಸ ಸಂಪರ್ಕಗಳನ್ನು ಹೊಂದುವುದು ಭವಿಷ್ಯದಲ್ಲಿ ಸಹಕಾರಿ ಆಗಲಿದೆ. ನಿಮಗೆ ಅರಿವಿರುವಂತೆ ಕಡಿಮೆಯಾಗಿರುವ ನಿಮ್ಮ ಮನೋಬಲವನ್ನು ಹೆಚ್ಚಿಸಲು ಪ್ರಯತ್ನಿಸಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಕುಟುಂಬದ ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಲಿವೆ. ಇದಕ್ಕಾಗಿ ಮನೆಯ ಹಿರಿಯ ಸದಸ್ಯರು ನಿಮಗೆ ಸಹಾಯಮಾಡಬಹುದು. ಅತಿಯಾದ ಖರ್ಚುಗಳಲ್ಲಿ ಹಿಡಿತ ಸಾಧಿಸದಿದ್ದರೆ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಉದ್ದೇಶಕ್ಕೆ ಸಂಬಂಧಿಸಿದ ಆಲೋಚನೆಗಳ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜನೆ ಮಾಡುತ್ತಿದ್ದರೆ ಅದಕ್ಕಾಗಿ ಈಗ ಕಾಲ ಕೂಡಿ ಬರಲಿದೆ. ಇಂದು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಶುಭ ದಿನ. 


ಇದನ್ನೂ ಓದಿ- 500 ವರ್ಷಗಳ ಬಳಿಕ ಗುರು-ಶನಿಯ ಅಪರೂಪದ ಸಂಯೋಗ, ಈ ರಾಶಿಯವರಿಗೆ ಹರಸಿ ಬರಲಿದೆ ಸಂಪತ್ತು, ಮುಟ್ಟಿದ್ದೆಲ್ಲಾ ಚಿನ್ನ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮಗೆ ಅನುಕೂಲಕರವಾದ ದಿನ. ಕುಟುಂಬಕ್ಕೆ ಸಮಯ ನೀಡುವುದರಿಂದ ಆಹ್ಲಾದಕರ ವಾತಾವರಣ ಇರಲಿದೆ. ಇಂದು ಕಠಿಣ ಪರಿಶ್ರಮದ ಫಲವು ನಿಮ್ಮ ಆಯಾಸವನ್ನೆಲ್ಲಾ ದೂರ ಮಾಡುತ್ತದೆ. ಕುಟುಂಬದ ಅಗತ್ಯತೆಗಳಿಗೆ ಆದ್ಯತೆ ನೀಡಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ಅನುಕೂಲಕರವಾದ ದಿನ. ಭಾವನಾತ್ಮಕವಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಪಾಲಕರು ನಿಮ್ಮ ಮಕ್ಕಳ ನಡವಳಿಕೆಯ ಬಗ್ಗೆ ನಿಗಾವಹಿಸಿ. ಯಾವುದೇ ಕೆಲಸ ಮಾಡುವಾಗ ಆತ್ಮವಿಶ್ವಾಸದಿಂದ ಮಾಡಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಸೋಮಾರಿತನ ಬಿಟ್ಟು ಕೆಲಸ ಮಾಡುವುದರಿಂದ ಯಶಸ್ಸು. ಹಣಕಾಸಿನ ವಿಷಯದಲ್ಲಿ ಕಾಳಜಿ ವಹಿಸಿ. ಇಂದು ಎಚ್ಚರಿಕೆಯಿಂದ ಮಾತನಾಡಿ, ಇಲ್ಲವೇ ಅನಗತ್ಯ ಸಮಸ್ಯೆಗಳು ಉಲ್ಬಣಿಸಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಗಮನ ಸಂಪೂರ್ಣ ಕೆಲಸವನ್ನು ಸುಧಾರಿಸುವುದರ ಮೇಲಿರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಇಂದು ತುಂಬಾ ನೆಮ್ಮದಿಯ ದಿನವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಯಶಸ್ಸು ದೊರೆಯುತ್ತದೆ. 


ಇದನ್ನೂ ಓದಿ- Weekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತು 


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮಗೆ ವಿಶೇಷವಾದ ದಿನ. ದಿನವಿಡೀ ಓಡಾಡುವ ಪರಿಸ್ಥಿತಿ ಇರುತ್ತದೆ. ಆದರೂ, ನಿಮ್ಮ ಶ್ರಮದ ಪ್ರತಿಫಲವನ್ನು ನೀವು ಅನುಭವಿಸುವಿರಿ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೇಳುವಿರಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮಗೆ ಒಳ್ಳೆಯ ದಿನ. ಈ ದಿನ ವಿಶೇಷ ವ್ಯಕ್ತಿಯೊಬ್ಬರ ಪರಿಚಯವಾಗಲಿದ್ದು ಭವಿಷ್ಯದಲ್ಲಿ ಅವರು ತುಂಬಾ ಪ್ರಯೋಜಂಕಾರಿ ಎಂದು ಸಾಬೀತುಪಡಿಸಲಿದ್ದಾರೆ. ಇಂದು ಕುಟುಂಬ ಅಥವಾ ವೈಯಕ್ತಿಕ ಕಾರಣಗಳಿಂದ ಮನಸ್ಸು ಸ್ವಲ್ಪ ವಿಚಲಿತಗೊಳ್ಳಬಹುದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮಗೆ ಹೊಸ ಉತ್ಸಾಹಗಳಿಂದ ತುಂಬಿದ ದಿನವಾಗಿದೆ. ಇಂದು ನಿಮ್ಮ ನಾದವಳಿಕೆಯು ಸುತ್ತಲಿನವರನ್ನು ಆಕರ್ಷಿಸಬಹುದು. ಹೊಸ ಶಕ್ತಿ ನಿಮ್ಮೊಳಗೆ ಹರಿಯುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸುವಲ್ಲಿ ನೀವು ಪ್ರಭಾವಿ ವ್ಯಕ್ತಿಯ ಬೆಂಬಲ ಪಡೆಯುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನೀವು ಹಿರಿಯರ ಆಶೀರ್ವಾದವನ್ನು ಪಡೆಯುತ್ತೀರಿ. ಇದು ನಿಮ್ಮ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಕೆಲವು ಸವಾಲುಗಳು ಎದುರಾಗಬಹುದು. ತಾಳ್ಮೆಯಿಂದ ಯೋಚಿಸಿ ಕೆಲಸ ಮಾಡುವುದರಿಂದ ಪ್ರತಿಕೂಲ ಪರಿಸ್ಥಿತಿಯನ್ನೂ ನಿಮ್ಮೆಡೆ ತಿರುಗಿಸಬಹುದು. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.