Budhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಬುಧವಾರದ ಈ ದಿನ ಪೂರ್ವಾ ನಕ್ಷತ್ರ, ಪರಿಘ ಯೋಗ ಯಾವ ರಾಶಿಯ ಜನರಿಗೆ ಏನು ಫಲ ನೀಡಲಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ವೃತ್ತಿಪರ ಜೀವನವು ನಿಮ್ಮ ವ್ಯವಸ್ಥಾಪಕ ಕೌಶಲ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹುದ್ದೆಯಲ್ಲಿ ಬಡ್ತಿಗೆ ಸಹಕಾರಿ ಆಗಲಿದೆ. ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ವ್ಯವಹಾರ ವಿಸ್ತರಣೆಗೆ ಸಕಾಲ. ಹೂಡಿಕೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ತಾಳ್ಮೆಯಿಂದ ಮುಂದುವರೆದರೆ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಆತ್ಮ ಸಂಗಾತಿ ಹುಡುಕಾಟದಲ್ಲಿರುವವರಿಗೆ ನಿರಾಶೆಯುಂಟಾಗಬಹುದು. ಆರೋಗ್ಯ ಸಮಸ್ಯೆಗಳು ದಿನವಿಡೀ ನಿಮ್ಮನ್ನು ಕಾಡಬಹುದು. ವೃತ್ತಿಪರವಾಗಿ, ನೀವು ಹೊಸ ಯೋಜನೆಯನ್ನು ತೆಗೆದುಕೊಳ್ಳಲು ನಿರ್ಧರಿಸಬಹುದು. ಭವಿಷ್ಯದಲ್ಲಿ ಇದು ಲಾಭದಾಯಕವಾಗಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ವೃತ್ತಿ ಬದುಕಿನಲ್ಲಿ ಬೆಳವಣಿಗೆ, ಅಭಿವೃದ್ಧಿಗೆ ಉತ್ತಮ ಅವಧಿಯಾಗಿದೆ. ಯಾವುದೇ ಹೊಸ ಯೋಜನೆಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ಸಂಬಂಧಗಳು ಮತ್ತು ಸಾಮಾಜಿಕ ಜೀವನವು ಸುಧಾರಿಸುತ್ತದೆ. 


ಇದನ್ನೂ ಓದಿ- Rahu Nakshatra Gochar: ವಾರದ ಬಳಿಕ ಈ 4 ರಾಶಿಯವರಿಗೆ ಕೇವಲ ಸುಖವನ್ನೇ ಕರುಣಿಸಲಿದ್ದಾನೆ ಕ್ರೂರ ಗ್ರಹ ರಾಹು! 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸೃಜನಶೀಲ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಯೋಜಿಸುತ್ತಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಖಾಸಗಿ ವಲಯದಲ್ಲಿರುವವರು ಬಡ್ತಿ ನಿರೀಕ್ಷಿಸಬಹುದು. ಆರೋಗ್ಯವು ಉತ್ತಮವಾಗಿದೆ . 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಸಾಧಿಸಬಹುದಾದರೂ ದಿನಾಂತ್ಯಕ್ಕೆ ಕಷ್ಟಗಳು ಕೊನೆಗೊಳ್ಳಲಿವೆ. ಕಾನೂನು ವಿಷಯಗಳು ಸಹ ಇಂದು ನಿಮ್ಮ ಪರವಾಗಿ ಕೆಲಸ ಮಾಡಬಹುದು. ಸಾಗರೋತ್ತರ ವ್ಯಾಪಾರ ಲಾಭದಾಯಕವಾಗಿದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಅನಿರೀಕ್ಷಿತ ಮೂಲದಿಂದ ಆದಾಯ ಹೆಚ್ಚಾಗುವುದರಿಂದ ಮನಸ್ಸಿಗೆ ನೆಮ್ಮದಿ. ಹಿಂದಿನ ಸಾಲಗಳನ್ನು ಮರುಪಾವತಿ ಮಾಡುವಿರಿ. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿರಲು ಪ್ರಯತ್ನಿಸಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃತ್ತಿಪರವಾಗಿ, ಸ್ವಲ್ಪ ಸಮಯದ ಹಿಂದೆ ನಿಮಗೆ ಮಂಜೂರು ಮಾಡಿದ ಯೋಜನೆಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಭಾರೀ ಪ್ರಮಾಣದ ಹಣದ ಒಳಹರಿವು ನಿರೀಕ್ಷಿಸಬಹುದು. ಆರೋಗ್ಯದ ದೃಷ್ಟಿಯಿಂದ ಸಮಯ ಉತ್ತಮವಾಗಿದೆ. 


ಇದನ್ನೂ ಓದಿ- 200 ವರ್ಷಗಳ ನಂತರ ರೂಪುಗೊಂಡ ದಿವ್ಯ ರಾಜಯೋಗಗಳು; ಈ 3 ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಜೀವನದಲ್ಲಿ  ಮಾಜಿ ಪ್ರೇಮಿಯ ಪುನರಾಗಮನ ನಿಮಗೆ ಆಘಾತ ಉಂಟು ಮಾಡಬಹುದು.  ವೃತ್ತಿಪರವಾಗಿ, ನಿಮಗೆ ಮಂಜೂರು ಮಾಡಿದ ಯೋಜನೆಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಆದಾಗ್ಯೂ, ನಿಮ್ಮ ಮಾತಿನಲ್ಲಿ ಹಿಡಿತ ಕಾಪಾಡಿಕೊಳ್ಳಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ದಿನವು ಸುಮಧುರತೆಯಿಂದ ಶಾಂತಚಿತ್ತವಾಗಿ ಆರಂಭವಾಗುತ್ತದೆ. ವೃತ್ತಿಪರ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ನಿಮ್ಮ ಪ್ರೀತಿಯ ಜೀವನವು ಬಲವನ್ನು ಪಡೆಯುತ್ತದೆ. ನೀವು ಇಂದು ಹೆಚ್ಚು ಮುಕ್ತವಾಗಿ ಮಾತನಾಡುವಿರಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಬಹುದಿನಗಳ ಬಳಿಕ ನಿಮ್ಮ ಪರಿಚಯಸ್ಥರನ್ನು ಭೇಟಿಯಾಗುವಿರಿ. ಯಾರಾದರೂ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುವುದರಿಂದ ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಪ್ರೀತಿಪಾತ್ರರ ಜೊತೆ ಪ್ರವಾಸವನ್ನು ಯೋಜಿಸಲು ಇದು ಉತ್ತಮ ದಿನ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ವೈಯಕ್ತಿಕ ಜೀವನದಲ್ಲಿ ದ್ವೇಷಗಳನ್ನು ಹಿಡಿದಿಟ್ಟುಕೊಳ್ಳಬೇಡಿ. ಇದು ನಿಮ್ಮ ಮನಸ್ಸಿನ ಉದ್ವೇಗಕ್ಕೆ ಕಾರಣವಾಗಬಹುದು. ನಿಮ್ಮ ಮನಮುಟ್ಟುವ ವ್ಯಕ್ತಿತ್ವವು ಜನರನ್ನು ನಿಮ್ಮೆಡೆಗೆ ಆಕರ್ಷಿಸುತ್ತದೆ.  ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. 


ಸೂಚನೆ: ಇಲ್ಲಿ ನೀಡಲಾದ  ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.