200 ವರ್ಷಗಳ ನಂತರ ರೂಪುಗೊಂಡ ದಿವ್ಯ ರಾಜಯೋಗಗಳು; ಈ 3 ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!

Divya Rajyoga 2024: ಏಕಕಾಲದಲ್ಲಿ 3 ರಾಜಯೋಗ ರೂಪಗೊಳ್ಳುತ್ತಿರುವುದರಿಂದ ಕೆಲ ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಈ 3 ದಿವ್ಯ ರಾಜಯೋಗಗಳು ಸುಮಾರು 200 ವರ್ಷಗಳ ನಂತರ ರೂಪಗೊಳ್ಳುತ್ತಿವೆ. ಈ 3 ರಾಶಿಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಮೇಲೂ ಕಂಡುಬರುತ್ತದೆ. 

Divya Rajyoga 2024: ಪ್ರತಿಯೊಂದು ಗ್ರಹಗಳು ನಿಯಮಿತ ಸಮಯದಲ್ಲಿ ರಾಶಿಗಳನ್ನು ಬದಲಾಯಿಸುತ್ತವೆ. ಕೆಲ ಸಮಯದಲ್ಲಿ ಇತರ ಗ್ರಹಗಳೊಂದಿಗೆ ಸೇರಿ ಶುಭ ಫಲಿತಾಂಶಗಳನ್ನು ನೀಡುತ್ತವೆ, ಇನ್ನು ಕೆಲ ಸಮಯದಲ್ಲಿ ಗ್ರಹಗಳು ಅಶುಭ ಫಲಿತಾಂಶಗಳನ್ನೂ ನೀಡಬಹುದು. ಅದೇ ರೀತಿ ಇದೀಗ ಧರ್ಮಾಧಿಪತಿ ಶನಿದೇವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಇದರಿಂದ ಕುಂಭದಲ್ಲಿ ಶಾಸರಾಜಯೋಗ ರೂಪುಗೊಂಡಿದೆ. ಇದಲ್ಲದೆ ಸಿಂಹ ರಾಶಿಯಲ್ಲಿ ಬುಧ ಶುಕ್ರರ ಸಂಯೋಗದಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. ಶುಕ್ರನ ಜೊತೆಗೆ ಶನಿ, ಬುಧ ಇರುತ್ತದೆ. ಹೀಗಾಗಿ ಈ 3 ಗ್ರಹಗಳ ಸಂಚಾರದಿಂದ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಈ ಮೂರು ರಾಜಯೋಗಗಳಿಂದ ಕೆಲವು ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಆ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಏಕಕಾಲದಲ್ಲಿ 3 ರಾಜಯೋಗಗಳು ರೂಪಗೊಳ್ಳುತ್ತಿರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಈ 3 ದಿವ್ಯ ರಾಜಯೋಗಗಳು ಸುಮಾರು 200 ವರ್ಷಗಳ ನಂತರ ರೂಪಗೊಳ್ಳುತ್ತಿವೆ. ಈ 3 ರಾಶಿಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಮೇಲೂ ಕಂಡುಬರುತ್ತದೆ. ಆದರೆ 3 ರಾಶಿಯವರು ಈ ಯೋಗಗಳಿಂದ ಅದೃಷ್ಟದ ಬೆಂಬಲದಿಂದ ಎಲ್ಲಾ ರೀತಿಯ ಲಾಭವನ್ನು ಪಡೆದುಕೊಳ್ಳೂತ್ತಾರೆ. ಈ ರಾಜಯೋಗಗಳಿಂದ ಯಾವ ರಾಶಿಯವರಿಗೆ ಅದೃಷ್ಟ ಸಿಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ.   

2 /4

3 ದಿವ್ಯ ರಾಜಯೋಗಗಳಿಂದ ವೃಷಭ ರಾಶಿಯವರಿಗೆ ಅದ್ಭುತ ಫಲಿತಾಂಶ ಸಿಗಲಿದೆ. ಕೆಲಸ ಹಾಗೂ ವ್ಯವಹಾರದಲ್ಲಿ ಪ್ರಗತಿಯ ಅವಕಾಶವಿರುತ್ತದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಜವಬ್ದಾರಿ ದೊರೆಯಬಹುದು. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ನಿಮಗೆ ಧನಲಾಭ ಸಿಗುವ ಸಾಧ್ಯತೆ ಹೆಚ್ಚಿದೆ. ಹಣದ ಅನೇಕ ಮೂಲಗಳು ತೆರೆದುಕೊಳ್ಳುವ ಸಾಧ್ಯತೆಗಳಿವೆ. ಹೊಸ ಮನೆ, ಕಾರು ಖರೀದಿ ಮಾಡುವ ಅವಕಾಶಗಳು ಸಿಗಲಿವೆ.

3 /4

ಈ 3 ದಿವ್ಯ ಯೋಗಗಳಿಂದ ಸಿಂಹ ರಾಶಿಯವರಿಗೆ ಸಕಲ ಸವಲತ್ತುಗಳು ಸಿಗಲಿದೆ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ. ಕೆಲಸದ ಸ್ಥಳದಲ್ಲಿ ನೀಡಿದ ಕೆಲಸಗಳನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ. ಈ ಅವಧಿಯಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆದಾಯದಲ್ಲೂ ಉತ್ತಮ ಏರಿಕೆಯಾಗಲಿದೆ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. 

4 /4

ವೃಶ್ಚಿಕ ರಾಶಿಯವರಿಗೆ ಈ 3 ದಿವ್ಯ ರಾಜಯೋಗಗಳು ಉತ್ತಮ ಆರ್ಥಿಕ ಲಾಭ ನೀಡುತ್ತವೆ. ಪಿತ್ರಾರ್ಜಿತ ಆಸ್ತಿಯು ನಿಮಗೆ ಧನಲಾಭ ನೀಡುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲು ಅವಕಾಶವಿರುತ್ತದೆ. ಸಮಾಜದಲ್ಲಿ ಹೆಸರು, ಕೀರ್ತಿ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಎಲ್ಲಾ ಕ್ಷೇತ್ರಗಳಲ್ಲಿಯೂ ಲಾಭ ಪಡೆಯುತ್ತೀರಿ. ಅದೃಷ್ಟದ ಬೆಂಬಲದಿಂದ ನೀವು ಹಲವಾರು ಪ್ರಯೋಜನಗಳನ್ನು ಪಡೆಯಬಹುದು.